Punjab Times Now Exit Poll 2022: ಎಎಪಿ ಜಯಭೇರಿ

ಚಂಡೀಗಢ, ಮಾರ್ಚ್ 07: ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದ್ದು, ಚುನಾವಣೆಯ ಫಲಿತಾಂಶವು ಮಾರ್ಚ್ 10ರಂದು ಹೊರಬೀಳಲಿದೆ. ಇದಕ್ಕೂ ಮುನ್ನ ಟೈಮ್ಸ್‌ ನೌ-ಪಿಮಾರ್ಕ್ (P-Marq) ಚುನಾವಣೋತ್ತರ ಸಮೀಕ್ಷೆಯು ಹೊರಬಿದ್ದಿದೆ. ಈ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಪಂಜಾಬ್‌ನಲ್ಲಿ ಎಎಪಿ ಭರ್ಜರಿ ಜಯ ಸಾಧಿಸಲಿದೆ.

ಎಎಪಿ ಪಕ್ಷವು 62-70 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ 23-31 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. 16-24 ಸ್ಥಾನಗಳಲ್ಲಿ ಶಿರೋಮಣಿ ಅಕಾಲಿದಳವು ಜಯ ಗಳಿಸಲಿದೆ. ಇನ್ನುಳಿದಂತೆ ಬಿಜೆಪಿಯು 1-3 ರಷ್ಟು ಸ್ಥಾನದಲ್ಲಿ ಮಾತ್ರ ವಿಜಯ ಸಾಧಿಸಲಿದೆ. ಇತರೆ ಪಕ್ಷಗಳು 1-3 ಸ್ಥಾನದಲ್ಲಿ ಗೆಲುವು ಪಡೆಯಲಿದೆ.

ಟೈಮ್ಸ್‌ ನೌ-ಪಿಮಾರ್ಕ್ (P-Marq) ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಕ್ಷವು (ಎಎಪಿ) ಪಂಜಾಬ್‌ನಲ್ಲಿ ಭರ್ಜರಿ ಗೆಲುವನ್ನು ಸಾಧಿಸಲಿದೆ. ಈ ಹಿಂದೆ ಅಧಿಕಾರವನ್ನು ಪಡೆದಿದ್ದ ಕಾಂಗ್ರೆಸ್‌ ತೀರಾ ಹಿಂದೆ ಉಳಿಯಲಿದೆ. 62-70 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎಎಪಿ ಭರ್ಜರಿಯಾಗಿ ಪಂಜಾಬ್‌ ಅಧಿಕಾರ ಪಡೆದುಕೊಳ್ಳಲಿದೆ. ಇನ್ನು ಎಎಪಿ ಶೇಕಡ 35.6ರಷ್ಟು, ಕಾಂಗ್ರೆಸ್‌ ಶೇಕಡ 26.9ರಷ್ಟು ಮತವನ್ನು ಪಡೆಯಲಿದೆ. ಎಸ್‌ಎಡಿ ಶೇಕಡ 22.3ರಷ್ಟು, ಬಿಜೆಪಿ ಶೇಕಡ 9.7ರಷ್ಟು ಹಾಗೂ ಇನ್ನುಳಿದ ಪಕ್ಷಗಳು ಶೇಕಡ 5.5ರಷ್ಟು ಮತವನ್ನು ಪಡೆಯಲಿದೆ.

Punjab Election Republic TV Exit Poll Results 2022 in Kannada

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ

ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭೆ ಕ್ಷೇತ್ರಗಳು ಇದೆ. ಫೆಬ್ರವರಿ 20ರಂದು ಎಲ್ಲಾ ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗಿದೆ. ಮಾರ್ಚ್ 10ರಂದು ಇಲ್ಲಿ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಕಾಂಗ್ರೆಸ್‌ ಕೈಯಲ್ಲಿ ಇರುವ ಪಂಜಾಬ್‌ ಅಧಿಕಾರ ಮುಂದೆ ಯಾರ ಕೈಗೆ ಸೇರುತ್ತದೆ ಅಥವಾ ಕಾಂಗ್ರೆಸ್‌ನ ಕೈಯಲ್ಲೇ ಉಳಿಯಲಿದೆಯೇ ಎಂದು ಕಾದು ನೋಡಬೇಕಾಗಿದೆ.

ಮಾ.10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್‌ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

ಕಳೆದ 2017ರಲ್ಲಿ ಪಂಜಾಬ್‌ ಮತದಾರರ ತೀರ್ಪು ಏನಿತ್ತು?

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿರೋಮಣಿ ಅಕಾಲಿದಳವು ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕ ಇನ್ಸಾಫ್‌ ಪಕ್ಷವು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಪಂಜಾಬ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 59.

ಚುನಾವಣಾಪೂರ್ವ ಸಮೀಕ್ಷೆ ಹೇಳಿದ್ದೇನು?

ಎಎಪಿ 50-56 ಸ್ಥಾನಗಳನ್ನು (37.8 %), ಕಾಂಗ್ರೆಸ್ 42-48 ಸ್ಥಾನಗಳನ್ನು (35%), ಎಸ್‌ಎಡಿ (ಶಿರೋಮಣಿ ಅಕಾಲಿದಳ) 13 ರಿಂದ 17 ಸ್ಥಾನಗಳನ್ನು (37.8%), ಬಿಜೆಪಿ 1-3 ಸ್ಥಾನಗಳು (5.7%) ಮತ್ತು ಇತರರು 1-3 ಸ್ಥಾನಗಳು (5.6%) ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎಂದು ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಚುನಾವಣಾ ಪೂರ್ವ ಸಮೀಕ್ಷೆಯು ಉಲ್ಲೇಖ ಮಾಡಿದೆ. ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹದ ಪ್ರಕಾರ ಮಜಾ ಪ್ರದೇಶದಲ್ಲಿ, ಕಾಂಗ್ರೆಸ್ 12-16 ಸ್ಥಾನಗಳನ್ನು, ಎಎಪಿ 7-11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಸ್‌ಎಡಿ 1-3 ಸ್ಥಾನಗಳು, ಬಿಜೆಪಿ 1-2 ಸ್ಥಾನಗಳು ಮತ್ತು ಇತರರು 0-1 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹದ ಪ್ರಕಾರ ದೋಬಾ ಪ್ರದೇಶದಲ್ಲಿ, ಕಾಂಗ್ರೆಸ್ 10-14 ಸ್ಥಾನಗಳನ್ನು, ಎಎಪಿ 7-11 ಸ್ಥಾನಗಳನ್ನು, ಎಸ್‌ಎಡಿ 1-3 ಸ್ಥಾನಗಳನ್ನು, ಬಿಜೆಪಿ 0-1 ಸ್ಥಾನಗಳನ್ನು ಮತ್ತು ಇತರರು 0-1 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಾರೆ. ರಿಪಬ್ಲಿಕ್ ಟಿವಿ-ಪಿಎಂಆರ್‌ಕ್ಯು ಅಭಿಪ್ರಾಯ ಸಂಗ್ರಹದ ಪ್ರಕಾರ ಮಾಲ್ವಾ ಪ್ರದೇಶದಲ್ಲಿ ಕಾಂಗ್ರೆಸ್ 17-21 ಸ್ಥಾನಗಳನ್ನು, , ಎಎಪಿ 31-39 ಸ್ಥಾನಗಳನ್ನು, ಎಸ್‌ಎಡಿ 10-14 ಸ್ಥಾನಗಳನ್ನು, ಬಿಜೆಪಿ 1-2 ಸ್ಥಾನಗಳನ್ನು ಮತ್ತು ಇತರರು 0-1 ಸ್ಥಾನಗಳನ್ನು ಗೆಲ್ಲುತ್ತಾರೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+