Punjab India Today Exit Poll 2022: ಎಎಪಿಗೆ ಭರ್ಜರಿ ಜಯ
ಚಂಡೀಗಢ, ಮಾರ್ಚ್ 07: ಪಂಜಾಬ್ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದ್ದು, ಚುನಾವಣೆಯ ಫಲಿತಾಂಶವು ಮಾರ್ಚ್ 10ರಂದು ಹೊರಬೀಳಲಿದೆ. ಇದಕ್ಕೂ ಮುನ್ನ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯು ಹೊರಬಿದ್ದಿದೆ.
ಎಎಪಿ ಪಕ್ಷವು 76-90 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 19-31 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. 7-11 ಸ್ಥಾನಗಳಲ್ಲಿ ಶಿರೋಮಣಿ ಅಕಾಲಿದಳವು ಜಯ ಗಳಿಸಲಿದೆ. ಇನ್ನುಳಿದಂತೆ ಬಿಜೆಪಿಯು 1-4 ರಷ್ಟು ಸ್ಥಾನದಲ್ಲಿ ಮಾತ್ರ ವಿಜಯ ಸಾಧಿಸಲಿದೆ.
ಮ್ಯಾಜಿಕ್ ಸಂಖ್ಯೆಗೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದವನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. 76-90 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎಎಪಿ ಭರ್ಜರಿಯಾಗಿ ಪಂಜಾಬ್ ಅಧಿಕಾರವನ್ನು ಕಾಂಗ್ರೆಸ್‌ನಿಂದ ತನ್ನ ಕೈಗೆ ಪಡೆದುಕೊಳ್ಳಲಿದೆ. ಇನ್ನು ಎಎಪಿ ಶೇಕಡ 28ರಷ್ಟು, ಕಾಂಗ್ರೆಸ್ ಶೇಕಡ 28ರಷ್ಟು ಮತವನ್ನು ಪಡೆಯಲಿದೆ.

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ
ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭೆ ಕ್ಷೇತ್ರಗಳು ಇದೆ. ಫೆಬ್ರವರಿ 20ರಂದು ಎಲ್ಲಾ ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗಿದೆ. ಮಾರ್ಚ್ 10ರಂದು ಇಲ್ಲಿ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಕಾಂಗ್ರೆಸ್ ಕೈಯಲ್ಲಿ ಇರುವ ಪಂಜಾಬ್ ಅಧಿಕಾರ ಮುಂದೆ ಯಾರ ಕೈಗೆ ಸೇರುತ್ತದೆ ಅಥವಾ ಕಾಂಗ್ರೆಸ್‌ನ ಕೈಯಲ್ಲೇ ಉಳಿಯಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಮಾ.10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ
ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.
ಕಳೆದ 2017ರಲ್ಲಿ ಪಂಜಾಬ್ ಮತದಾರರ ತೀರ್ಪು ಏನಿತ್ತು?
2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿರೋಮಣಿ ಅಕಾಲಿದಳವು ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕ ಇನ್ಸಾಫ್ ಪಕ್ಷವು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಪಂಜಾಬ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 59. (ಒನ್‌ಇಂಡಿಯಾ ಸುದ್ದಿ)












Click it and Unblock the Notifications