Smartphone: ಭರ್ಜರಿ ಫೀಚರ್ಸ್‌ ಹೊಂದಿರುವ ಪೊಕೊ ಮೊಬೈಲ್‌ ಲಾಂಚ್‌ಗೆ ಸಿದ್ಧತೆ

ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಪೊಕೊ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ಹೊಸ ಫೋನ್‌ ಬಿಡುಗಡೆ ಮಾಡಲಿದೆ. ಈ ಹೊಸ ಮೊಬೈಲ್‌ನ್ನು ಈಗಾಗಲೇ ಗೀಕ್‌ಬೆಂಚ್ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಮೊಬೈಲ್‌ POCO M6 Plus ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯಲಿದೆ.

ಈ ಹ್ಯಾಂಡ್‌ಸೆಟ್ Redmi 13 5G ಯ ​​ಮರುಬ್ರಾಂಡೆಡ್ ಆವೃತ್ತಿಯಂತೆ ಕಾಣಬಹುದಾಗಿದೆ. ಈ ಹ್ಯಾಂಡ್‌ ಸೆಟ್‌ ಹಿಂಭಾಗದಲ್ಲಿ ರಿಂಗ್ ಎಲ್ಇಡಿ ಫ್ಲ್ಯಾಷ್ ಮತ್ತು ಡಿಸ್ಪ್ಲೇನಲ್ಲಿ ಸೆಂಟರ್ ಪಂಚ್ ಹೋಲ್ ನಾಚ್ ಅನ್ನು ನೀಡುವ ಸಾಧ್ಯತೆ ಇದೆ. ನೀವು ಒಂದು ವೇಳೆ ಬಜೆಟ್‌ ಫ್ರಿ ಸೆಗ್ಮೆಂಟ್‌ನಲ್ಲಿ ಫೋನ್‌ಗಳನ್ನು ನೋಡುತ್ತಾ ಇದ್ದರೆ, ಈ ಫೋನ್‌ ನಿಮಗೆ ಬೆಸ್ಟ್ ಆಯ್ಕೆ.

POCO M6 Plus 5G Specs and Price Leaked Ahead of India Launch

ಈ ಫೋನಿನ ವಿಶೇಷತೆಗಳು ಏನು?

ಈ ಫೋನ್‌ 6.79 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್‌ 120Hz ರಿಫ್ರೆಶ್ ದರ ಹೊಂದಿರುವ ಸಾಧ್ಯತೆ ಇದೆ. M6 Plus ಸ್ನ್ಯಾಪ್‌ ಡ್ರ್ಯಾಗನ್‌ 4 Gen 2 ಚಿಪ್‌ಸೆಟ್‌ ಹೊಂದಿರುವ ಸಾಧ್ಯತೆ ಇದೆ. ಈ ಫೋನ್ Android 14 ಬೆಂಬಲಿಸಲಿದೆ. ಈ ಫೋನ್‌ನಲ್ಲಿ ದೊಡ್ಡ 5,030mAh ಬ್ಯಾಟರಿಯನ್ನು ಇರಲಿದ್ದು, 33 ವ್ಯಾಟ್‌ ಚಾರ್ಜಿಂಗ್‌ ಸೌಲಭ್ಯವನ್ನು ನೀಡಲಾಗಿದೆ.

ಈ ಮೊಬೈಲ್‌ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ. ಪ್ರೈಮರಿ ಕ್ಯಾಮೆರಾ 108MP ಹೊಂದಿರಲಿದೆ. ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ ಈ ಫೋನ್‌ನಲ್ಲಿ 13MP ಸೆಲ್ಫಿ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದೆ. ಈ ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಹೊಂದಿರಬಹುದು. ಚಾರ್ಜಿಂಗ್‌ಗಾಗಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರಬಹುದು.

POCO M6 Plus 5G Specs and Price Leaked Ahead of India Launch

ಬೆಲೆ ಎಷ್ಟಿರುವ ಸಾಧ್ಯತೆ

ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಹೊಂದಿರಲಿದೆ. ಒಂದು 6GB + 128GB ಮತ್ತು ಇನ್ನೊಂದು 8GB + 128GB ಮಾದರಿ. 6GB ಮಾದರಿಯ ಬೆಲೆ ರೂ 13,999 ರಿಂದ ಪ್ರಾರಂಭವಾಗಬಹುದು. ಆದರೆ M6 ಪ್ಲಸ್ 5G ನ 8GB ರೂಪಾಂತರದ ಬೆಲೆ 14,999 ರೂ ಆಗಿರಬಹುದು. ಈ ಮೊಬೈಲ್‌ ಕೊಡುಗೆಯ ಮೂಲಕ ರೂ 1,000 ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+