ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 27ರಂದು ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್‌ಗೆ ಚಾಲನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 2021ರ ಸೆಪ್ಟಂಬರ್ 27ರಂದು ಬೆಳಿಗ್ಗೆ 11 ಗಂಟೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (ಪಿಎಂ-ಡಿಎಚ್ಎಂ) ಗೆ ಚಾಲನೆ ನೀಡಲಿದ್ದಾರೆ. ಆನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

2020ರ ಆಗಸ್ಟ್ 15ರಂದು ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯ ಪ್ರಾಯೋಗಿಕ ಯೋಜನೆಯನ್ನು ಪ್ರಕಟಿಸಿದ್ದರು. ಸದ್ಯ ಈ ಪಿಎಂ-ಡಿಎಚ್‌ಎಂ ಯೋಜನೆಯನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಇದರ ಅಡಿ ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ ನೀಡಲಾಗುತ್ತದೆ. ದೇಶದಾದ್ಯಂತ ಆರೋಗ್ಯ ದಾಖಲೆಗಳು, ವೈದ್ಯರು ಮತ್ತು ಆರೋಗ್ಯ ಸೇವೆಗಳ ನೋಂದಣಿ ಡಿಜಿಟಲೀಕರಣ ಮಾಡಲಾಗುತ್ತದೆ.

ಸಚಿತ್ರ ಸುದ್ದಿ: ಆಯುಷ್ಮಾನ್ ಭಾರತ್ ಪ್ರಯೋಜನ ಪಡೆಯುವುದು ಹೇಗೆ?ಸಚಿತ್ರ ಸುದ್ದಿ: ಆಯುಷ್ಮಾನ್ ಭಾರತ್ ಪ್ರಯೋಜನ ಪಡೆಯುವುದು ಹೇಗೆ?

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ)ನ ಮೂರನೇ ವಾರ್ಷಿಕೋತ್ಸವದೊಂದಿಗೆ ಪಿಎಂ-ಡಿಎಚ್‌ಎಂ ದೇಶಾದ್ಯಂತ ಜಾರಿಗೊಳಿಸುವುದಕ್ಕೆ ಚಾಲನೆ ನೀಡಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ ಕುರಿತು

ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ ಕುರಿತು

ಜನ ಧನ್, ಆಧಾರ್ ಮತ್ತು ಮೊಬೈಲ್ (ಜಾಮ್) ತ್ರಿಮೂರ್ತಿಗಳು ಮತ್ತು ಸರ್ಕಾರದ ಇತರೆ ಡಿಜಿಟಲ್ ಉಪಕ್ರಮಗಳ ಅಡಿಪಾಯದ ಆಧಾರದ ಮೇಲೆ, ಪಿಎಂ-ಡಿಎಚ್‌ಎಂ ವ್ಯಾಪಕ ಶ್ರೇಣಿಯ ದತ್ತಾಂಶ ಮತ್ತು ಮಾಹಿತಿ ಒದಗಿಸುವ ಮೂಲಕ ತಡೆರಹಿತ ಆನ್ ಲೈನ್ ವೇದಿಕೆಯನ್ನು ಒದಗಿಸಲಿದೆ. ಜೊತೆಗೆ ಮಾಹಿತಿ ಹಾಗೂ ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ರಕ್ಷಣೆ, ಗೌಪ್ಯತೆ ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸುವ ಮೂಲಕ ಮುಕ್ತ, ಪರಸ್ಪರ ಕಾರ್ಯನಿರ್ವಹಿಸುವ ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಈ ಮಿಷನ್ ನಾಗರಿಕ ಒಪ್ಪಿಗೆಯೊಂದಿಗೆ ಆರೋಗ್ಯದ ದಾಖಲೆಗಳನ್ನು ಹೊಂದಲು ಮತ್ತು ವಿನಿಮಯವನ್ನು ಸಕ್ರಿಯಗೊಳಿಸಲಿದೆ.

ಪ್ರತಿಯೊಬ್ಬರಿಗೂ ಆರೋಗ್ಯ ಐಡಿ

ಪ್ರತಿಯೊಬ್ಬರಿಗೂ ಆರೋಗ್ಯ ಐಡಿ

ಪಿಎಚ್-ಡಿಎಚ್‌ಎಂನ ಒಂದು ಪ್ರಮುಖ ಅಂಶವೆಂದರೆ, ಪ್ರತಿಯೊಬ್ಬ ನಾಗರಿಕನಿಗೂ ಒಂದು ಆರೋಗ್ಯ ಐಡಿಯನ್ನು ಒಳಗೊಂಡಿರುತ್ತದೆ. ಅದು ಅವರ ಆರೋಗ್ಯ ಖಾತೆಯಾಗಿಯೂ ಕಾರ್ಯನಿರ್ವಹಿಸಲಿದೆ. ಇದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಸಂಯೋಜಿಸಬಹುದು ಮತ್ತು ಮೊಬೈಲ್ ಅಪ್ಲಿಕೇಷನ್ ಸಹಾಯದಿಂದ ನೋಡಬಹುದು. ಹೆಲ್ತ್ ಕೇರ್ ಪ್ರೊಫೆಷನಲ್ ರಿಜಿಸ್ಟ್ರಿ (ಎಚ್‌ಪಿಆರ್) ಮತ್ತು ಹೆಲ್ತ್ ಕೇರ್ ಫೆಸಿಲಿಟಿಸ್ ರಿಜಿಸ್ಟ್ರಿ (ಎಚ್‌ಎಫ್ ಆರ್ ) ಆಧುನಿಕ ಮತ್ತು ಸಾಂಪ್ರದಾಯಿಕ ಔಷಧಿಗಳೆರಡರಲ್ಲೂ ಎಲ್ಲ ಆರೋಗ್ಯ ಸೇವಾ ಪೂರೈಕೆದಾರರ ಭಂಡಾರವಾಗಿ ಕಾರ್ಯನಿರ್ವಹಿಸಲಿದೆ. ಇದು ವೈದ್ಯರು/ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಸುಲಭವಾಗಿ ವ್ಯವಹಾರವನ್ನು ಖಚಿತಪಡಿಸುತ್ತದೆ.

ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸಹಾಯವಾಣಿಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸಹಾಯವಾಣಿ

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆ

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆ

ಮಿಷನ್‌ನ ಒಂದು ಭಾಗವಾಗಿ ರಚಿಸಲಾಗಿರುವ ಪಿಎಂ-ಡಿಎಚ್‌ಎಂ ಸ್ಯಾಂಡ್ ಬಾಕ್ಸ್, ತಂತ್ರಜ್ಞಾನ ಮತ್ತು ಉತ್ಪನ್ನ ಪರೀಕ್ಷೆಯ ಚೌಕಟ್ಟಾಗಿ ಕಾರ್ಯನಿರ್ವಹಿಸಲಿದೆ. ಇದು ಖಾಸಗಿ ಪಾಲುದಾರರು ಸೇರಿದಂತೆ ಎಲ್ಲ ಸಂಸ್ಥೆಗಳಿಗೂ ಸಹಾಯ ಮಾಡಲಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆಯ ಭಾಗವಾಗಲು ಉದ್ದೇಶಿಸಿರುವ ಇದು ಆರೋಗ್ಯ ಮಾಹಿತಿ ಪೂರೈಕೆದಾರರು ಅಥವಾ ಆರೋಗ್ಯ ಮಾಹಿತಿ ಬಳಕೆದಾರರು ಅಥವಾ ಪಿಎಂ-ಡಿಎಚ್‌ಎಂನ ಕಟ್ಟಡಗಳ ಸಮುಚ್ಛಯದೊಂದಿಗೆ ಪರಿಣಾಕಾರಿಯಾಗಿ ಲಿಂಕ್ ಮಾಡಲಾಗುವುದು.

ಏನಿದು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್? ಇದರ ಪ್ರಯೋಜನಗಳೇನು?ಏನಿದು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್? ಇದರ ಪ್ರಯೋಜನಗಳೇನು?

ಈ ಮಿಷನ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ನಿರ್ವಹಿಸಿದ್ದ ಪಾತ್ರದಲ್ಲಿ ಇದು ಡಿಜಿಟಲ್ ಆರೋಗ್ಯ ಪೂರಕ ವ್ಯವಸ್ಥೆಯಲ್ಲಿ ಪರಸ್ಪರ ಕಾರ್ಯಸಾಧ್ಯತೆಯನ್ನು ಸೃಷ್ಟಿಸುತ್ತದೆ.

ಆಪ್ ಮತ್ತು ವೆಬ್‌ಸೈಟ್ ಎರಡೂ ಲಭ್ಯ

ಆಪ್ ಮತ್ತು ವೆಬ್‌ಸೈಟ್ ಎರಡೂ ಲಭ್ಯ

ನಾಗರಿಕರು ಆರೋಗ್ಯ ರಕ್ಷಣಾ ಸೌಕರ್ಯವನ್ನು ಪಡೆಯಲು ಕೇವಲ ಒಂದು ಕ್ಲಿಕ್ ಮಾಡುವಷ್ಟು ದೂರದಲ್ಲಿರುತ್ತಾರೆ. ಆಯುಷ್ಮಾನ್ ಭಾರತದ ಅನುಷ್ಠಾನ ಸಂಸ್ಥೆ ಎನ್‌ಎಚ್‌ಎ, ಇದಕ್ಕೆ ಪ್ಲಾಟ್‌ಫಾರ್ಮ್ ಸ್ಥಾಪನೆ ಮಾಡಿದೆ. ಆಪ್ ಮತ್ತು ವೆಬ್‌ಸೈಟ್ ಎರಡೂ ಮೂಲಗಳಲ್ಲಿ ಇದು ಲಭ್ಯವಿದೆ. ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್ ಮತ್ತು ವ್ಯಕ್ತಿಯ ಮೂಲ ವಿವರಗಳನ್ನು ಬಳಸಿ ಹೆಲ್ತ್ ಐಡಿಗಳನ್ನು ತಯಾರಿಸಲಾಗುತ್ತದೆ. ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯ 470 ಕೋಟಿ ರೂ.ಗಳ ಬಜೆಟ್‌ಗೆ ಅನುಮೋದನೆ ನೀಡಿದೆ.

English summary
In a historic initiative, Prime Minister Narendra Modi will launch the Ayushman Bharat Digital Mission on 27th September 2021 at 11 AM via video conferencing, which will be followed by his address on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X