ಹೆಲಿಕಾಪ್ಟರ್ ಹೆರಿಗೆ! ಬ್ರಹ್ಮಾಂಡದ ವಿಸ್ಮಯದ ಬಗ್ಗೆ ನಿಮಗೆಷ್ಟು ಗೊತ್ತು?

ಅಲ್ಲಿ ರೋವರ್‌ಗೆ ಹೆರಿಗೆ ಆಗಿದೆ, ಅದು ಹೆಲಿಕಾಪ್ಟರ್ ಹೆರಿಗೆ. ಹಾಗಂತಾ ಜಾಸ್ತಿ ಕನ್ಫ್ಯೂಸ್ ಆಗಬೇಡಿ, ಹೀಗೆ ವಿಚಿತ್ರವಾದ ಘಟನೆ ಸಂಭವಿಸಿದ್ದು ಮಂಗಳ ಗ್ರಹದಲ್ಲಿ. ಯೆಸ್, ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಮಹತ್ವಾಕಾಂಕ್ಷಿ ಯೋಜನೆ ಈಗ ನನಸಾಗಿದೆ. ಮಂಗಳನ ಅಧ್ಯಯನಕ್ಕೆ ನಾಸಾ ರವಾನಿಸಿದ್ದ 'ಪೆರ್‌ಸೆವೆರನ್ಸ್' ಗುರಿ ಮುಟ್ಟಿದ್ದು, ತನ್ನ ಕಾರ್ಯಾಚರಣೆ ಆರಂಭಿಸಿ ಹಲವು ತಿಂಗಳೇ ಕಳೆದಿದೆ.

ಹಾಗೇ ತನ್ನ ಹೊಟ್ಟೆಯ ಒಳಗೆ ಮಗುವಿನಂತೆ ಕಾಪಾಡಿದ್ದ ಪುಟಾಣಿ ಹೆಲಿಕಾಪ್ಟರ್ ಅನ್ನ ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಇಳಿಸಿದೆ ಈ ಪೆರ್‌ಸೆವೆರನ್ಸ್ ರೋವರ್. ಇದೀಗ ಪೆರ್‌ಸೆವೆರನ್ಸ್ ಹಾರಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಎಲ್ಲಾ ನಾಸಾ ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್ 8ರಂದೇ ಹೆಲಿಕಾಪ್ಟರ್ ತನ್ನ ಕಾರ್ಯಾಚರಣೆ ಆರಂಭಿಸಬೇಕಿತ್ತು.

ಆದ್ರೆ ಮಂಗಳ ಗ್ರಹದ ಮೇಲೆ ಈ ಹೆಲಿಕಾಪ್ಟರ್ ಹಾರಾಟವನ್ನ ಮುಂದೂಡಿ ಏಪ್ರಿಲ್ 11ಕ್ಕೆ ನಡೆಸಲು ನಾಸಾ ಸಂಸ್ಥೆ ನಿರ್ಧರಿಸದ್ದು ಏಕೆ ಎಂಬುದನ್ನ ಇನ್ನೂ ಸ್ಪಷ್ಟಪಡಿಸಿಲ್ಲ. ಬಹುಶಃ ಮಂಗಳ ಗ್ರಹದ ಮೇಲಿನ ಬಿರುಗಾಳಿ ಅಥವಾ ವಾತಾವರಣ ಬದಲಾವಣೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಇದು ತಮಾಷೆ ಅಲ್ಲವೇ ಅಲ್ಲ..!

ಇದು ತಮಾಷೆ ಅಲ್ಲವೇ ಅಲ್ಲ..!

ಭೂಮಿ ಹೊರಗೆ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್ ಹಾರುತ್ತಿದೆ. ಹಾಗಂತ ಇದು ತಮಾಷೆಯ ವಿಚಾರ ಅಲ್ಲವೇ ಅಲ್ಲ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ. ಮಂಗಳ ಗ್ರಹದ ಮೇಲೆ ಭೂಮಿ ಮೇಲೆ ಬೀಳುವ ಶೇಕಡಾ 50ರಷ್ಟು ಸೂರ್ಯನ ಬೆಳಕು ಕೂಡ ಬೀಳುವುದಿಲ್ಲ. ಹೀಗಿರುವಾಗ ಹೆಲಿಕಾಪ್ಟರ್ ಸೂರ್ಯ ಹಾಗೂ ಬ್ಯಾಟರಿ ಶಕ್ತಿ ಆಧರಿಸಿ ಹಾರುವುದು ಕಷ್ಟ ಕಷ್ಟ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಹಾರಲು ಸಜ್ಜಾಗಿ ನಿಂತಿದೆ ನಾಸಾ ಸಂಸ್ಥೆಯ ಹೆಲಿಕಾಪ್ಟರ್. ರಾತ್ರಿ ಹೊತ್ತಲ್ಲಿ ಮೈನಸ್ 90 ಡಿಗ್ರಿ, ಎಂದರೆ ಹಿಮಾಲಯಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ನಾಸಾ ಹೆಲಿಕಾಪ್ಟರ್ ಬದುಕಬೇಕಿದೆ. ಎಲ್ಲವನ್ನೂ ಎದುರಿಸಿ ಏಪ್ರಿಲ್ 11ಕ್ಕೆ ನಾಸಾ ಸಂಸ್ಥೆಯ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಹಾರಾಟ ನಡೆಸಲಿದೆ.

 200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

 ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ 'ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

 6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+