ಲಾಕ್‌ಡೌನ್: ಆನ್‌ಲೈನ್‌ನಲ್ಲಿ ಬೆಸ್ಕಾಂ ಬಿಲ್ ಪಾವತಿ ಹೇಗೆ?

ಬೆಂಗಳೂರು, ಏಪ್ರಿಲ್ 21 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ದಿನನಿತ್ಯದ ವಹಿವಾಟುಗಳಿಗೆ ತೊಂದರೆಯಾಗಿದೆ. ಜನರು ಆಸ್ತಿ ತೆರಿಗೆ ಮತ್ತು ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆ? ಎಂಬ ಪ್ರಶ್ನೆಯೂ ಎದ್ದಿದೆ.

ಬೆಂಗಳೂರು ನಗರದಲ್ಲಿ ಬೆಸ್ಕಾಂ ಮತ್ತು ಬಿಬಿಎಂಪಿ ಆನ್‌ಲೈನ್ ಮೂಲಕ ತೆರಿಗೆ ಮತ್ತು ವಿದ್ಯುತ್ ಬಿಲ್ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿವೆ. ಜನರು ಇದನ್ನು ಸದುಪಯೋಗ ಮಾಡಿಕೊಂಡು ಬಿಲ್ ಪಾವತಿ ಮಾಡಬಹುದು.

ವಿದ್ಯುತ್ ಬಿಲ್ ಪಾವತಿ ವಿಚಾರದಲ್ಲಿ ಹಲವು ಗೊಂದಲ ಉಂಟಾಗಿದೆ. ಲಾಕ್ ಡೌನ್ ಮುಗಿಯುವ ತನಕ ನಾವು ಕಾಯಬೇಕೆ?, ಬೇಡವೇ? ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

ಬೆಸ್ಕಾಂ ಮೀಟರ್ ರೀಡರ್‌ಗಳು ಮನೆಗೆ ಬರುತ್ತಿಲ್ಲ. ಲಾಕ್ ಡೌನ್ ಪರಿಣಾಮ ಅವರು ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಆನ್‌ಲೈನ್ ಮೂಲಕ ಜನರು ಬಿಲ್ ಪಾವತಿ ಮಾಡಬಹುದು.

ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ?

ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ?

ಲಾಕ್ ಡೌನ್ ಪರಿಣಾಮ ಮೀಟರ್ ರೀಡ್ ಆಗುತ್ತಿಲ್ಲ. ಆದರೆ, ಕಳೆದ 3 ತಿಂಗಳ ಬಿಲ್ ಆಧರಿಸಿ ಈ ತಿಂಗಳ ಬಿಲ್ ಲೆಕ್ಕಾಚಾರ ಹಾಕಲಾಗಿದೆ. ಆನ್ ಲೈನ್ ಮೂಲಕ ಬಿಲ್ ಪಾವತಿ ಮಾಡಲು ಹೋದರೆ ನಿಮಗೆ ಈ ಮಾಹಿತಿ ತಿಳಿಯಲಿದೆ.

ವಿದ್ಯುತ್ ಬಿಲ್ ಪಾವತಿ ಹೇಗೆ?

ವಿದ್ಯುತ್ ಬಿಲ್ ಪಾವತಿ ಹೇಗೆ?

ಆನ್ ಲೈನ್ ಮೂಲಕ ಬಿಲ್ ಪಾವತಿ ಮಾಡಲು https://bescom.org/pay-bill/ ವೆಬ್ ಸೈಟ್‌ಗೆ ಭೇಟಿ ನೀಡಬೇಕು. ನಿಮ್ಮ ಗ್ರಾಹಕ ಸಂಖ್ಯೆ ಅಥವ ಅಕೌಂಟ್ ಸಂಖ್ಯೆಯನ್ನು ನಮೂದು ಮಾಡಬೇಕು. ಹಿಂದಿನ ತಿಂಗಳ ಬಿಲ್‌ನಲ್ಲಿ ಈ ಸಂಖ್ಯೆ ಸಿಗುತ್ತದೆ.

ಮುಂದಿನ ಪೇಜ್‌ಗೆ ಹೋಗಿ

ಮುಂದಿನ ಪೇಜ್‌ಗೆ ಹೋಗಿ

ನಿಮ್ಮ ಗ್ರಾಹಕ ಸಂಖ್ಯೆ ನಮೂದು ಮಾಡಿದ ಬಳಿಕ ಸಬ್ ಮಿಟ್ ಬಟನ್ ಒತ್ತಿ. ಮುಂದಿನ ಪೇಜ್‌ನಲ್ಲಿ ನಿಮಗೆ ನಿಮ್ಮ ವಿದ್ಯುತ್ ಬಿಲ್ ಮೊತ್ತ ಕಾಣಿಸುತ್ತದೆ. ನಿಮ್ಮ ಇ-ಮೇಲ್ ಇಡಿ, ಮೊಬೈಲ್ ನಂಬರ್ ನಮೂದಿಸಿ, ಷರತ್ತಗಳಿಗೆ ಒಪ್ಪಿಗೆ ಕೊಡಿ.

ಮೊಬೈಲ್‌ಗೆ ಖಚಿತ ಮಾಹಿತಿ ಬರುತ್ತದೆ

ಮೊಬೈಲ್‌ಗೆ ಖಚಿತ ಮಾಹಿತಿ ಬರುತ್ತದೆ

ಮೇಕ್ ಪೇಮೆಂಟ್ ಎಂಬ ಆಯ್ಕೆ ಒತ್ತಿ. ಮುಂದಿನ ಪುಟದಲ್ಲಿ ಯಾವ ಮಾದರಿಯಲ್ಲಿ ಪೇಮೆಂಟ್ ಮಾಡಲಿದ್ದೀರಿ ಎಂದು ಒತ್ತಿರಿ. ನಿಮ್ಮ ಬಿಲ್ ಪಾವತಿಯಾಗುತ್ತದೆ. ಬಳಿಕ ನಿಮ್ಮ ಮೊಬೈಲ್‌ ನಂಬರ್‌ಗೆ ಬಿಲ್ ಪಾವತಿಯಾದ ಸಂದೇಶ ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+