ವಿಮಾನ ನಿಲ್ದಾಣದಲ್ಲಿ ಪರಸ್ಪರ ಹೊಡೆದಾಡಿಕೊಂಡ ಪ್ರಯಾಣಿಕರು- ವಿಡಿಯೋ
ಚಿಕಾಗೋದ ಓ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುರುಷರು ಮಹಿಳೆಯರು ಎನ್ನದೆ ಹತ್ತಾರು ಜನ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. Fox32 ಪ್ರಕಾರ ಈ ಘಟನೆ ಸೋಮವಾರ ನಡೆದಿದೆ.
ಯಾವುದೋ ಕಾರಣಕ್ಕೆ ಉಂಟಾದ ವಿವಾದವೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದ ಬ್ಯಾಗೇಜ್ ಕ್ಲೈಮ್ ಏರಿಯಾದಲ್ಲಿ ಜಗಳ ನಡೆದಿದ್ದು, ಘಟನೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಗಲಾಟೆಯಲ್ಲಿ 24 ವರ್ಷದ ಮಹಿಳೆಗೆ ಇಬ್ಬರು ಪುರುಷರು ಹೊಡೆದಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಪುರುಷರನ್ನು ಪೊಲೀಸರು ಅಧಿಕಾರಿಗಳು 18 ವರ್ಷದ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು 20 ವರ್ಷದ ಟೆಂಬ್ರಾ ಹಿಕ್ಸ್ ಎಂದು ಗುರುತಿಸಿದ್ದಾರೆ.
ವಿಡಿಯೋ ಇಲ್ಲಿ ನೋಡಿ:
Brawl at Chicago O’Hare airport this morning pic.twitter.com/fsH6n3yABd
— Mr Bogus (@Mr_Bogus0007) May 23, 2023
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊ ಚಿಕಾಗೋದ ಓ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರ ಕೆಳ ಹಂತದಲ್ಲಿ ನಡೆದ ಗಲಾಟೆಯನ್ನು ತೋರಿಸುತ್ತದೆ.

ಒಬ್ಬ ವ್ಯಕ್ತಿಯು ಇನ್ನೊಬ್ಬರ ಮೇಲೆ ಬಿದ್ದು ಹೊಡೆಯುವುದು ಕಂಡು ಬಂದಿದೆ. ಆದರೆ ಹಸಿರು ಟೀ ಶರ್ಟ್‌ನಲ್ಲಿ ಒಬ್ಬ ವ್ಯಕ್ತಿಯು ಎದುರಾಳಿಯ ಮೇಲೆ ಕುಸ್ತಿಪಟುಗಳಂತೆ ಈಟಿಯಿಂದ ಹೊಡೆಯುವುದು ಕಂಡು ಬಂದಿದೆ. ಇದರೊಂದಿಗೆ ಮಹಿಳೆಯರ ಗುಂಪು ನೆಲದ ಮೇಲೆ ಮಲಗಿ ಪರಸ್ಪರ ಕೂದಲನ್ನು ಎಳೆಯುತ್ತಿರುವುದು ಕಂಡುಬರುತ್ತದೆ.
ಘಟನೆಯ ಬಗ್ಗೆ ಪೊಲೀಸರು ಬೇರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಚಿಕಾಗೋ ವಿಮಾನಯಾನ ಇಲಾಖೆಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
"ಸುರಕ್ಷತೆ ಮತ್ತು ಭದ್ರತೆಯು ಯಾವಾಗಲೂ ಚಿಕಾಗೋ ಡಿಪಾರ್ಟ್ಮೆಂಟ್ಆಫ್ ಏವಿಯೇಷನ್ (CDA) ಆದ್ಯತೆ ನೀಡುತ್ತದೆ. ನಾವು ಓ'ಹೇರ್ ಮತ್ತು ಮಿಡ್ವೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಚಿಕಾಗೋ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಘಟನೆಗೆ ಕಾರನರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದಿದೆ.
ರೈಲು ಸೀಟಿಗಾಗಿ ಮಹಿಳೆಯರ ಮಾರಾಮಾರಿ
ಹಿಂದೊಮ್ಮೆ ಮುಂಬೈನಲ್ಲಿ ಚಲಿಸುತ್ತಿರುವ ಎಲೆಕ್ಟ್ರಿಕ್ ರೈಲಿನಲ್ಲಿ ಮಹಿಳೆಯರು ಸೀಟಿಗಾಗಿ ಜಗಳವಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ನಿರ್ದಿಷ್ಟ ಸಮಯಕ್ಕೆ ತಲುಪುವ ಕಾರಣದಿಂದಾಗಿ ಪ್ರಯಾಣಿಕರು ವಿದ್ಯುತ್ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಈ ಕಾರಣದಿಂದಾಗಿ, ಪೀಕ್ ಅವರ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸಲಾಗುವುದಿಲ್ಲ. ಅದರಲ್ಲೂ ಮುಂಬೈ ಬಗ್ಗೆ ಹೇಳಬೇಕಾಗಿಲ್ಲ.

ಪ್ರಯಾಣಿಕರು ಸಮುದ್ರದಂತೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಸೇರುತ್ತಾರೆ. ರೈಲು ಒಂದು ನಿಮಿಷ ತಡವಾದರೂ ಸಾಕಷ್ಟು ಜನಸಂದಣಿ ಸೇರಿಬಿಡುತ್ತದೆ. ಈ ನಡುವೆ ಮುಂಬೈ ಸ್ಥಳೀಯ ರೈಲು ಸೀಟಿಗಾಗಿ ಪ್ರಯಾಣಿಕ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದರು. ಅದು ಯಾವ ಮಟ್ಟಿಗೆ ಅಂದರೆ ರಕ್ತಸ್ರಾವ ಆಗುಷ್ಟು ಅವರ ಹೊಡೆದಾಟ ನಡೆದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಸ್ ಸೀಟಿಗಾಗಿ ಮಹಿಳೆಯರ ನಡುವೆ ಜಗಳ
ಬಸ್, ರೈಲು, ಮೆಟ್ರೋ ಸೀಟಿಗಾಗಿ ಬಡಿದಾಡಿಕೊಳ್ಳುತ್ತಿದ್ದ ಮಹಿಳಾಮಣಿಗಳು ವಿಮಾನದಲ್ಲೂ ಪರಸ್ಪರ ಕುಸ್ತಿಗೆ ಬಿದ್ದ ಘಟನೆ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ಕಿಟಕಿ ಸೀಟಿಗಾಗಿ ವಿಮಾನದಲ್ಲಿ ಮಹಿಳೆಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರು. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಬ್ರೆಜಿಲ್‌ನ ಜಿಒಎಲ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಯರಿಬ್ಬರು ಕಿಟಕಿ ಸೀಟಿಗಾಗಿ ಭಾರಿ ಜಗಳ ಮಾಡಿಕೊಂಡಿದ್ದರು. ಈ ಗಲಾಟೆಯಿಂದಾಗಿ ವಿಮಾನ ಎರಡು ಗಂಟೆ ತಡವಾಗಿ ಹಾರಾಟ ಮಾಡಿತ್ತು. ಸಹಪ್ರಯಾಣಿಕರು ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು.












Click it and Unblock the Notifications