Oppo: ಓಪ್ಪೋ ಕಂಪನಿಯ ಎರಡು ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧ
ದಿನವೂ ಮೊಬೈಲ್ ಕಂಪನಿಗಳು ಹೊಸ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರುತ್ತಿವೆ. ಎಲ್ಲ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತವೆ. ಚೀನಾ ಮೂಲದ ಓಪ್ಪೋ ಕಂಪನಿ ತನ್ನ ಮತ್ತೊಂದು ಮೊಬೈಲ್ ಫೋನ್‌ನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ IP69 ರೇಟಿಂಗ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಮೊದಲ ಫೋನ್ ಆಗಿದೆ. ಕಂಪನಿಯು ಎ ಸರಣಿಯ ಇನ್ನು ಎರಡು ಅಗ್ಗದ ಫೋನ್‌ಗಳನ್ನು ಲಾಂಚ್ ಮಾಡಿದೆ.
ಒಪ್ಪೋ ಸರಣಿಯ A1s ಮತ್ತು A1i ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿ ಇದ್ದು ವಿಭಿನ್ನ ಹಾರ್ಡ್‌ವೇರ್ ಸೆಟ್‌ಅಪ್‌ಗಳನ್ನು ಹೊಂದಿದೆ. ಚೀನಾದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಇಲ್ಲಿದೆ ನೋಡಿ..

ಒಪ್ಪೋ A1s ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?
ಒಪ್ಪೋ A1s ಸ್ಮಾರ್ಟ್‌ಫೋನ್ 6.72 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಮೊಬೈಲ್ 90Hz ರಿಫ್ರೆಶ್ ರೇಟ್ ಹೊಂದಿಲಿದೆ. ಇದರಲ್ಲಿ ಮಿಡಿಯಾ ಟೆಕ್ ಡಿಮೆನ್ಸಿಟಿ 6002 5G ಪ್ರೊಸೆಸರ್ ಬಳಿಸಲಾಗಿದೆ. ಈ ಫೋನ್ 12 ಜಿಬಿ ರ್ಯಾಮ್ ಮತ್ತು 512 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿದೆ. ಈ ಫೋನಿನ ಹಿಂಬಾಗದಲ್ಲಿ 50 ಮೆಗಾ ಪಿಕ್ಸಲ್ ಪ್ರೈಮರಿ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಒಳಗೊಂಡಿದೆ. ವಿಡಿಯೋ ಹಾಗೂ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರಲಿದೆ.
ಒಪ್ಪೋ A1s ಎರಡು ರೂಪಾಂತರದಲ್ಲಿ ಬಂದಿವೆ. 12 ಜಿಬಿ ರ್ಯಾಮ್, 256 ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋಮ್ ಅಂದಾಜು 13,800 ರೂ. ಹೊಂದಿರುವ ಸಾಧ್ಯತೆ ಇದೆ. 12 ಜಿಬಿ ರ್ಯಾಮ್, 512 ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್ ಅಂದಾಜು ರೂ 16,500 ರೂಗಳಿಗೆ ಸಿಗಬಹುದು.

ಒಪ್ಪೋ A1i ಹೇಗಿದೆ?
ಈ ಸ್ಮಾರ್ಟ್‌ಫೋನ್ 6.56 ಇಂಚಿನ ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು. 90Hz ಹೈ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಮಿಡಿಯಾ ಟೆಕ್ ಡಿಮೆನ್ಸಿಟಿ 6020 ಪ್ರೊಸೆಸರ್ ಒಪ್ಪೋ A1i ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ 8 ಜಿಬಿ ಹಾಗೂ 12 ಜಿಬಿ ರ್ಯಾಮ್ ಎರಡು ವಿದಧಗಳಲ್ಲಿ ಹೊಂದಿದ್ದು, 256 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ 13MP ಪ್ರೈಮರಿ ಕ್ಯಾಮೇರಾ ಹೊಂದಿದ್ದು, ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 5MP ಕ್ಯಾಮೆರಾವನ್ನು ಒಳಗೊಂಡಿದೆ. ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಹೊಂದಿದೆ. ಇದು 5000mAh ಬ್ಯಾಟರಿಯನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್ 8 ಜಿಬಿ ರ್ಯಾಮ್, 256 ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋಮ್ ಅಂದಾಜು 12,700 ರೂ. ಹೊಂದಿರಲಿದೆ. 12 ಜಿಬಿ ರ್ಯಾಮ್, 256 ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್ ಅಂದಾಜು ರೂ 13,800 ರೂಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಸಾಧ್ಯತೆ ಇದೆ.












Click it and Unblock the Notifications