13 ಸಾವಿರ ರೂ. ಭರ್ಜರಿ ಫೀಚರ್ಸ್ ಹೊಂದಿರುವ ಒಪ್ಪೋ ಮೊಬೈಲ್ ಬಿಡುಗಡೆ ಸಿದ್ಧತೆ
ಭಾರತದ ಮಾರುಕಟ್ಟೆಗೆ ಚೀನಾ ಮೂಲದ ಒಪ್ಪೋ ಕಂಪನಿ ತನ್ನ ಇನ್ನೊಂದು ಫೋನ್‌ನ್ನು ಸದ್ದಿಲ್ಲದೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಫೋನ್ ಬಿದ್ದರೂ ಹಾನಿ ಆಗದು ಎಂಬುದು ಕಂಪನಿಯವಾದವಾಗಿದೆ. ಮಿಡ್ ರೆಂಜ್ ಸೆಗ್ಮೆಂಟ್‌ನಲ್ಲಿ ತನ್ನ ಹಿಡಿತವನ್ನು ಸಾಧಿಸಲು ಈ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಒಪ್ಪೋ ಪ್ಲ್ಯಾನ್ ಮಾಡಿಕೊಂಡಿದೆ. ಈ ಫೋನ್ ಲುಕ್ ಸಖತ್ ಆಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ.
ಒಪ್ಪೋ 13 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರಬಲ ವೈಶಿಷ್ಟ್ಯಗಳೊಂದಿಗೆ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಒಪ್ಪೋ ಕೆ ಸರಣಿಯಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಅನ್ನು ಎಂಬ ಹೆಗ್ಗಳಿಕೆ ಈ ಫೋನ್‌ದ್ದಾಗಿದೆ. ಈ ಫೋನ್ ಕಾಣಲು ಒನ್ ಪ್ಲಸ್ ನಾರ್ಡ್ ಸಿಇ ರೀತಿಯಾಗಿದೆ. ಈ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಹಲವು ವಿವಿಧ ಫೋನ್‌ಗಳಿಗೆ ಪೈಪೋಟಿ ನೀಡಲಿದೆ.

ಈಗಾಗಲೇ ಒಪ್ಪೋ ವೆಬ್‌ಸೈಟ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದ್ದು, ಆಗಸ್ಟ್ 2ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಅಲ್ಲದೆ ಇದರ ಬೆಲೆಯನ್ನು ಸಹ ಸೂಚಿಸಲಾಗಿದೆ. ಇನ್ನು ಲಾಂಚ್ ಪ್ರೈಸ್ ಆಗಿ ಈ ಫೋನ್ ಮೇಲೆ ಕಂಪನಿ 4 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಿದೆ. ಅಲ್ಲದೆ ಆಯ್ದ ಬ್ಯಾಂಕ್‌ಗಳ ಮೇಲೆ 1000 ಇನ್‌ಸ್ಟಂಟ್ ಡಿಸ್ಕೌಂಟ್ ನೀಡಲಾಗುತ್ತದೆ. ಈ ಫೋನ್ ನಲ್ಲಿ ಇಎಂಐ ಸೌಲಭ್ಯವೂ ಇದೆ.
ಒಪ್ಪೋ ಕೆ12ಎಕ್ಸ್ 5G ಡಿಸ್‌ಪ್ಲೇ ಹೇಗಿದೆ?
ಒಪ್ಪೋ ಕೆ12ಎಕ್ಸ್ 5G 6.67 ಇಂಚಿನ HD ಡಿಸ್‌ಪ್ಲೇ ಹೊಂದಿದೆ. ಈ ಫೋನ್ 120Hz ರಿಫ್ರೆಶ್ ದರವನ್ನು ಬೆಂಬಲಿಸಲಿದ್ದು, 1,000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಈ ಅಗ್ಗದ ಫೋನ್ ಮಿಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 8GB ರ್ಯಾಮ್ ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ ಫೋನ್‌ನ ಸಂಗ್ರಹಣೆಯನ್ನು ಬೆಳಸಿಕೊಳ್ಳಬಹುದಾಗಿದೆ.
ಈ ಮೊಬೈಲ್ ಎರಡು ರೂಪಾಂತರಗಳಲ್ಲಿ ಗ್ರಾಹಕರ ಮುಂದೆ ಬರಲಿದೆ. ಈ ಮೊಬೈಲ್ 6 ಬಿಜಿ + 128 ಜಿಬಿ ಇಂಟರ್ನಲ್ ಸ್ಟೋರೇಜ್, 8 ಬಿಜಿ + 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರ ಮೂಲ ರೂಪಾಂತರದ ಬೆಲೆ 12,999 ರೂ. ಅದೇ ಸಮಯದಲ್ಲಿ, ಅದರ ಉನ್ನತ ರೂಪಾಂತರದ ಬೆಲೆ 15,999 ರೂ. ಕಂಪನಿಯು ಈ ಫೋನ್ ಅನ್ನು ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಿದ್ದು, ಬ್ರೀಜ್ ಬ್ಲೂ ಮತ್ತು ಮಿಡ್ನೈಟ್ ವೈಲೆಟ್ ಬಣ್ಣಗಳಲ್ಲಿ ಲಭ್ಯ. ಫೋನ್ IP54 ರೇಟ್ ಆಗಿದೆ ಅಂದರೆ ಅದು ನೀರು ಮತ್ತು ಧೂಳಿನಲ್ಲಿ ಹಾಳಾಗುವುದಿಲ್ಲ.
ಬ್ಯಾಟರಿ ಹಾಗೂ ಕ್ಯಾಮೆರಾ ಹೇಗಿದೆ?
ಒಪ್ಪೋ ನ ಈ ಫೋನ್ 5,100mAh ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ, 45W USB ಟೈಪ್ C ಫಾಸ್ಟ್ ಚಾರ್ಜಿಂಗ್ ಲಭ್ಯವಿದೆ. ಈ ಫೋನ್‌ನಲ್ಲಿ ಸುಧಾರಿತ ಆಂಡ್ರಾಯ್ಡ್ 14 ಇದೆ. ಈ ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 32ಎಂಪಿ ಪ್ರೈಮರಿ ಕ್ಯಾಮೆರಾ ಮತ್ತು 2ಎಂಪಿ ಹೊಂದಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.
ಬಾಕ್ಸ್‌ನಲ್ಲಿ ಏನು ಸಿಗತ್ತದೆ?
ಮೊಬೈಲ್ ಸೆಟ್
ಸಿಮ್ ಇಜೆಕ್ಟ್ ಟೂಲ್
ಡಾಕ್ಯೂಮೆಂಟೇಷನ್
ಮೊಬೈಲ್ ಕವರ್
45 ವ್ಯಾಟ್ ಚಾರ್ಜರ್
ಸಿ ಟೈಪ್ ಚಾರ್ಜರ್












Click it and Unblock the Notifications