• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತಾಕತ್ ಇದ್ರೆ ಅಖಾಡಕ್ಕೆ ಬನ್ನಿ!’ ಕ್ಷಿಪಣಿ ಮೂಲಕ ಸರ್ವಾಧಿಕಾರಿ ವಾರ್ನಿಂಗ್!

|
Google Oneindia Kannada News

ನ್ಯೂಕ್ಲಿಯರ್ ಬಾಂಬ್, ಮಿಸೈಲ್, ವೆಪನ್ಸ್ ಅಂತಾನೇ ಸದಾ ಸುದ್ದಿಯಲ್ಲಿರುವ ಉತ್ತರಕೊರಿಯಾ ತನ್ನ ವರಸೆ ಬದಲಾಯಿಸುವ ಲಕ್ಷಣ ಕಾಣ್ತಿಲ್ಲ. ಈಗ ಹೈಪರ್‌ಸಾನಿಕ್ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ ಉತ್ತರ ಕೊರಿಯಾ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರಿ ನ್ಯೂಸ್ ಚಾನೆಲ್ ಮಾಹಿತಿ ನೀಡಿದೆ.

ಆತಂಕಕಾರಿ ವಿಚಾರ ಏನಂದ್ರೆ ಹೊಸ ಹೈಪರ್‌ಸಾನಿಕ್ ಕ್ಷಿಪಣಿ ಪರಮಾಣು ಸಾಮರ್ಥ್ಯ ಹೊಂದಿದೆ. ತನ್ನ ಶತ್ರುಗಳ ಎದೆ ನಡುಗಿಸಲು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಉತ್ತರ ಕೊರಿಯಾ, ಪರಮಾಣು ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಕ್ಷಿಪಣಿಯನ್ನು ರೂಪಿಸಿದ್ದೀವಿ ಎಂದಿದೆ. ಈ ಹೊಸ ಕ್ಷಿಪಣಿಯಿಂದ ದೇಶದ ರಕ್ಷಣಾ ಸಾಮರ್ಥ್ಯ ಸಾವಿರ ಪಟ್ಟು ಹೆಚ್ಚಲಿದೆ ಎನ್ನುವ ಮೂಲಕ ನಮ್ಮ ತಂಟೆಗೆ ಬರಬೇಡಿ ಎಂಬ ಮೆಸೇಜ್ ನೀಡಿದ್ದಾನೆ ಸರ್ವಾಧಿಕಾರಿ.

ನ್ಯೂಕ್ಲಿಯರ್ ಬಾಂಬ್ ಫಿಕ್ಸ್! ಉತ್ತರ ಕೊರಿಯಾ ನಡೆಗೆ ಅಮೆರಿಕ ಥಂಡಾ..!ನ್ಯೂಕ್ಲಿಯರ್ ಬಾಂಬ್ ಫಿಕ್ಸ್! ಉತ್ತರ ಕೊರಿಯಾ ನಡೆಗೆ ಅಮೆರಿಕ ಥಂಡಾ..!

ಅಷ್ಟಕ್ಕೂ ಈ ತಿಂಗಳಲ್ಲಿ ಇದು 3ನೇ ಸುತ್ತಿನ ಕ್ಷಿಪಣಿ ಪ್ರಯೋಗವಾಗಿದೆ. ತನ್ನಲ್ಲೇ ಎಲ್ಲಾ ಬಲ ಇದೆ ಎಂದು ಬಿಲ್ಡಪ್ ಕೊಡುವ ಅಮೆರಿಕದ ಬಳಿಯೂ ಉ.ಕೊರಿಯಾದ ಹೊಸ ಕ್ಷಿಪಣಿಯನ್ನು ಬೇಧಿಸುವುದು ಸಾಮರ್ಥ್ಯ ಇಲ್ಲ ಎನ್ನಲಾಗುತ್ತಿದ್ದು, ಅಮೆರಿಕ ಅಲರ್ಟ್ ಆಗಿದೆ.

ಮುಂದೈತಾ ಮಾರಿ ಹಬ್ಬ..?

ಮುಂದೈತಾ ಮಾರಿ ಹಬ್ಬ..?

ಉತ್ತರ ಕೊರಿಯಾ ದಿಢೀರ್ ಇಷ್ಟೊಂದು ರೊಚ್ಚಿಗೇಳಲು ಕಾರಣವಿದೆ. ಅದೇನೆಂದರೆ ತನ್ನ ಮೇಲೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸೇರಿ ಹೇರಿರುವ ನಿರ್ಬಂಧಗಳು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ನ ರೊಚ್ಚಿಗೆಬ್ಬಿಸಿದೆ. ಎಷ್ಟುದಿನ ಅಂತಾ ಬಡತನದಲ್ಲೇ ಸಾಯೋದು..? ತಮ್ಮ ಬಗ್ಗೆ ಶತ್ರುಗಳಿಗೆ ಒಂದಷ್ಟು ಭಯ ಇರಲಿ ಅನ್ನೋ ರೀತಿ ಪದೇ ಪದೆ ಮಿಸೈಲ್ ಟೆಸ್ಟ್ ಮಾಡಿಸುತ್ತಿದ್ದಾನೆ ಕಿಮ್ ಜಾಂಗ್ ಉನ್. ಇದಕ್ಕೆ ಕಿಮ್‌ನ ತಂಗಿ ಕೂಡ ಸಾಥ್ ನೀಡುತ್ತಿದ್ದು, ಅಮೆರಿಕನ್ನರಿಗೆ ಹೊಸ ತಲೆನೋವು ಶುರುವಾಗಿದೆ.

ಪರಮಾಣು ಸ್ಥಾವರ ಬ್ಯುಸಿ..!

ಪರಮಾಣು ಸ್ಥಾವರ ಬ್ಯುಸಿ..!

ಪರಮಾಣು ಸ್ಥಾವರ ಅಂದ್ರೆ ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ರಿಯಾಕ್ಟರ್ ಬಿಸಿ ಹೆಚ್ಚಾಗದಂತೆ ತಂಪಾಗಿಸಲು ನೀರು ಬಳಸಲಾಗುತ್ತದೆ. ಹೀಗೆ ಯೊಂಗ್‌ಬಿಯಾನ್ ಪರಮಾಣು ಸ್ಥಾವರದಿಂದ ನೀರನ್ನು ಹೊರಹಾಕುತ್ತಿರುವ ಚಿತ್ರಗಳು ಉಪಗ್ರಹದ ಕಣ್ಣಿಗೆ ಕಳೆದ ತಿಂಗಳಷ್ಟೇ ಬಿದ್ದಿದ್ದವು. ಯೊಂಗ್‌ಬಿಯಾನ್ 5 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಸಾಮರ್ಥ್ಯ ಹೊಂದಿರುವ ಪರಮಾಣು ಸ್ಥಾವರ. ಇದೀಗ ಇದೇ ಸ್ಥಾವರದ ಅಕ್ಕಪಕ್ಕ ಹರಡಿರುವ ಮರಗಳನ್ನೂ ಕಿಮ್ ಗ್ಯಾಂಗ್ ಕಡಿದು ಹಾಕಿದೆ. ಹಾಗೇ ಫೌಂಡೇಷನ್ ಕೆಲಸ ಕೂಡ ವೇಗವಾಗಿ ಸಾಗುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ಕೆಲಸ ಕಂಪ್ಲೀಟ್ ಆಗಿ, ಹೊಸ ಅಣುಬಾಂಬ್‌ ಅಥವಾ ಬಾಂಬ್ ಹೊತ್ತೊಯ್ಯಬಲ್ಲ ಕ್ಷಿಪಣಿಗಳು ತಯಾರಾಗುವ ಬಗ್ಗೆ ಸುಳಿವು ಸಿಕ್ಕಿದೆ.

2018ರಲ್ಲಿ ಬಾಗಿಲು ಮುಚ್ಚಿದ್ದರು..!

2018ರಲ್ಲಿ ಬಾಗಿಲು ಮುಚ್ಚಿದ್ದರು..!

2018ರಲ್ಲಿ ಟ್ರಂಪ್ ಭೇಟಿ ಬಳಿಕ ಕಿಮ್ ಯೊಂಗ್‌ಬಿಯಾನ್ ಅಣುಸ್ಥಾವರವನ್ನು ಕಿಮ್ ಬಂದ್ ಮಾಡಿಸಿದ್ದ. 2018ರಿಂದ ಈವರೆಗೆ ಅಣುಸ್ಥಾವರದಲ್ಲಿ ಯಾವುದೇ ಚಟುವಟಿಕೆ ನಡೆದಿರಲಿಲ್ಲ. ಆದರೆ 2021ರ ಜುಲೈವರೆಗೆ 5 ತಿಂಗಳ ಕಾಲ ಅಣುಸ್ಥಾವರ ಸಿಕ್ಕಾಪಟ್ಟೆ ಆಕ್ಟಿವ್ ಆಗಿತ್ತು ಎಂದಿದ್ದರು ತಜ್ಞರು. ಹೀಗೆ ಇಷ್ಟುದಿನ ಕದ್ದುಮುಚ್ಚಿ ನಡೆಯುತ್ತಿದ್ದ ಕಾಮಗಾರಿ ಈಗ ಜಗತ್ತಿಗೇ ಗೊತ್ತಾಗುವಂತೆ ಮುಂದುವರಿದಿದೆ. ನಾವು ಸುಮ್ಮನೆ ಕೂರೋದಿಲ್ಲ ಅನ್ನೋದನ್ನ ಅಮೆರಿಕಗೆ ಉತ್ತರ ಕೊರಿಯಾ ತಿಳಿಸುತ್ತಿದೆ. ಆದರೆ ಇದು ಜಾಗತಿಕ ಮಟ್ಟದಲ್ಲಿ ಹೊಸ ತಿಕ್ಕಾಟ ಶುರುವಾಗಲು ಕಾರಣವಾಗುತ್ತಿದೆ.

ಬಾಂಬ್ ಪರೇಡ್‌ ನಡೆಸಿದ್ದರು..!

ಬಾಂಬ್ ಪರೇಡ್‌ ನಡೆಸಿದ್ದರು..!

ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್‌ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್‌ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್‌ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

ಅಮೆರಿಕ ನೆಲೆಗಳೇ ಟಾರ್ಗೆಟ್..?

ಅಮೆರಿಕ ನೆಲೆಗಳೇ ಟಾರ್ಗೆಟ್..?

ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್‌ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.

ಉತ್ತರ ಕೊರಿಯಾ: ದೂರಗಾಮಿ ಕ್ರೂಸ್ ಕ್ಷಿಪಣಿ ಪರೀಕ್ಷೆ ಕುರಿತು ಮಾಹಿತಿ
English summary
North Korean govt media said they are successfully tested hypersonic missile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X