ಭಾರತದಲ್ಲೇ ಅತ್ಯಂತ ದುಬಾರಿ ಕಾರಿನ ಒಡತಿ ನೀತಾ ಅಂಬಾನಿ-ಇದರ ದರ, ವಿಶೇಷತೆಗಳನ್ನು ತಿಳಿಯಿರಿ
ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಮುಖೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಜೊತೆ ಜುಲೈ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಕಾರ್ಯಕ್ರಮವು ಜಿಯೋ ವರ್ಲ್ಡ್ ಕನ್ವೆನ್ಷನಲ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಇಡೀ ವಿಶ್ವದ ಗಮನ ಸೆಳೆದಿದೆ. ಅಲ್ಲದೆ, ಭಾರತ ದೇಶದ ಐಷಾರಾಮಿ ವಿವಾಹ ಎನಿಸಿಕೊಂಡಿದೆ.
ಅನಂತ್ ಅಂಬಾನಿಯವರ ಮದುವೆ ಕಾರ್ಯಕ್ರಮ ಕಳೆದ 7 ತಿಂಗಳಿನಿಂದ ನಡೆದಿದ್ದು, ನಿನ್ನೆ ಅಂದರೆ ಜುಲೈ 12ಕ್ಕೆ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿ ಇಡೀ ಅಂಬಾನಿ ಕುಟುಂಬ ಚಪ್ಪಲಿಯಿಂದ ಹಿಡಿದು ಕೊರಳಿನ ಚೈನ್‌ವರೆಗೂ ಐಷಾರಾಮಿ ಆಭರಣಗಳನ್ನು ಧರಿಸಿದ್ದರು. ಮದುವೆ ಕಾರ್ಯಕ್ರಮ ಆರಂಭವಾದಾಗಿನಿಂದಲೂ ಈ ಇಡೀ ಕುಟುಂಬದ ಐಷಾರಾಮಿ ಜೀವನದ ಕುರಿತು ಸುದ್ದಿಯಾಗುತ್ತಲೇ ಇದೆ.

ಯಾವುದಾದರೂ ಪಾರ್ಟಿ, ಸಮಾರಂಭಗಳಿಗೆ ಅಂಬಾನಿ ಕುಟುಂಬದವರು ಐಷಾರಾಮಿ ಬಟ್ಟೆ, ಆಭರಣಗಳನ್ನು ಧರಿಸಿ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಂತ ದುಬಾರಿ ಕಾರುಗಳನ್ನು ಹೊಂದಿದವರ ಪಟ್ಟಿಯಲ್ಲೂ ಕೂಡ ಇದ್ದಾರೆ. ಅದರಲ್ಲೂ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಬಳಿಯಿರುವ ಐಷಾರಾಮಿ ಕಾರೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಹಾಗಾದರೆ ಆ ಕಾರಿನ ವಿಶೇಷತೆ & ದರಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕಳೆದ 7 ತಿಂಗಳಿನಿಂದಲೂ ನಡೆದಿದ್ದ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಇಡೀ ವಿಶ್ವದ ಗಮನ ಸೆಳೆದಿದ್ದು, ಈ ವೇಳೆ ವಧು ವರರಿಗಿಂತಲೂ ಮುಕೇಶ್ ಅಂಬಾನಿ ಹಾಗು ನೀತಾ ಅಂಬಾನಿ ಭಾರೀ ಸುದ್ದಿಯಾಗಿದ್ದಾರೆ. ಯಾಕೆ ಅಂತೀರಾ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಧರಿಸಿದ್ದ ದುಬಾರಿ ಬೆಲೆಯ ಬಟ್ಟೆ, ಚಪ್ಪಲಿ, ಶೂ, ಆಭರಣ ಹೀಗೆ ಪ್ರತಿಯೊಂದು ವಿಚಾರವಾಗಿಯೂ ಅವರು ಸುದ್ದಿಯಲ್ಲಿದ್ದಾರೆ. ಅದರಲ್ಲೂ ನೀತಾ ಅಂಬಾನಿ ಧರಿಸಿದ್ದ ಪಚ್ಚೆ ಹರಳಿನ ಹಾರ ಭಾರೀ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಈ ಹಾರ ಸುಮಾರು 500 ಕೋಟಿ ರೂಪಾಯಿ ಮೌಲ್ಯದ್ದು ಎನ್ನುವ ಮಾತಿ ಲಭ್ಯವಾಗಿದೆ. ಅಲ್ಲದೆ ಆಕೆ ಧರಿಸಸಿದ್ದ ಸೀರೆ ಕೂಡ ಕೋಟಿ ಬೆಲೆಯದ್ದು ಎನ್ನುವ ಮಾತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ ನೀತಾ ಅಂಬಾನಿಯವರು ಐಷಾರಾಮಿ ಕಾರೊಂದನ್ನು ಕೂಡ ಹೊಂದಿದ್ದು, ಇದು ಭಾರತದಲ್ಲೇ ಅತ್ಯಂತ ದುಬಾರಿ ಕಾರಾಗಿದೆ. ನೀತಾ ಅಂಬಾನಿ ಆಡಿ A9 ಕ್ಯಾಮಿಲೋನ್ ಕಾರನ್ನು ಹೊಂದಿದ್ದು, ಇದರ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ ಆಗಿದೆ. ಇದು ಭಾರತದಲ್ಲಿರುವ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಈ ಕಾರು ಸುಮಾರು 600 ಹಾರ್ಸ್ ಪವರ್ ಮತ್ತು 4.0-ಲೀಟರ್ V8 ಎಂಜಿನ್ ಅನ್ನು ಹೊಂದಿದೆ. ಅತ್ಯಾಧುನಿಕ ಎಲೆಕ್ಟ್ರಾನಿಕ್ ಪೇಂಟ್ ಸಿಸ್ಟಮ್ ಅನ್ನು ಇದು ಒಳಗೊಂಡಿದೆ. ಅಂದರೆ ಈ ಕಾರು ಊಸರವಳ್ಳಿಯಂತೆ ಬಣ್ಣ ಬದಲಿಸುತ್ತದೆ. ಅಲ್ಲದೆ, ಕಾರಿನ ಚಾಲಕ ಒಂದು ಬಟನ್ ಒತ್ತಿದರೆ ಸಾಕು ನಿಮಗೆ ಇಷ್ಟವಾದ ಬಣ್ಣಕ್ಕೆ ಈ ಕಾರು ತಿರುಗುತ್ತದೆ. ಇದರ ದರ ಸುಮಾರು 90 ಕೋಟಿ ರೂಪಾಯಿ ಆಗಿದ್ದು, ತೆರಿಗೆಯಲ್ಲಾ ಸೇರಿ 100 ಕೋಟಿ ರೂಪಾಯಿಗೂ ಹೆಚ್ಚಾಗುತ್ತದೆ.
ಮುಕೇಶ್ ಅಂಬಾನಿ ಮನೆಯಲ್ಲಿ ಮತ್ತೊಂದು ದುಬಾರಿ ಕಾರಿದ್ದು, ಇದು ಸಂಪೂರ್ಣ ಬುಲೆಟ್ ಪ್ರೂಫ್ ಆಗಿದೆ. ಇದು ಸುಮಾರು 10 ಕೋಟಿ ರೂಪಾಯಿ ಬೆಲೆಯ BMW 760 Li ಆರ್ಮರ್ಡ್ ಕಾರು ಆಗಿದ್ದು, Z- ಮಟ್ಟದ ಭದ್ರತಾ ವೈಶಿಷ್ಟ್ಯಯನ್ನು ಹೊಂದಿದೆ.
ಇನ್ನು ನೀತಾ ಅಂಬಾನಿಯವರು ಮಗ ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಸಮಾರಂಭದ ವೇಳೆ ಧರಿಸಿದ್ದ ನೆಕ್ಸ್ಲೆಸ್ ಬೆಲೆ ಬರೋಬ್ಬರಿ 500 ಕೋಟಿ ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ. ದುಬಾರಿ ಪಚ್ಚೆಯ ವಜ್ರದ ಆಭರಣ ಇದಾಗಿದ್ದು, ಇದರಲ್ಲಿ ಎರಡು ದೊಡ್ಡ ಗಾತ್ರದ ಪೆಂಡೆಂಟ್‌ಗಳಿಗೆ ಜೋಡಿಸಲಾದ ಎಮರಾಲ್ಡ್ ಹವಳದ ಒಳಗೊಂಡಿರುವ ಉದ್ದನೆಯ ನೆಕ್ಲೇಸ್ ಅನ್ನು ಇಆದಾಗಿತ್ತು.
ಜೊತೆಗೆ ಮ್ಯಾಚಿಂಗ್ ಸ್ಟಡ್ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರವನ್ನು ಧರಿಸಿದ್ದರು. ಅನ್‌ಕಟ್ ಡೈಮಂಡ್‌ನಂತೆ ಕಂಡರೂ ಕಸೂತಿ ಕೆಲಸವೂ ಇಡೀ ಆಭರಣದಲ್ಲಿ ಕಾಣುತ್ತಿತ್ತು. ಮೂಲಗಳ ಪ್ರಕಾರ, ನೀತಾ ಅವರು ಧರಿಸಿದ್ದ ಆಭರಣಗಳ ಬೆಲೆ ಸುಮಾರು 500 ಕೋಟಿ ರೂಪಾಯಿ ಎನ್ನುವ ಸಂಗತಿ ಇದೀಗ ಬಯಲಾಗಿದೆ.












Click it and Unblock the Notifications