New Mummy: ಮರಿಗಳ ಜೊತೆ ಕುಳಿತ ಮಿಯಾವ್ ಮಿಯಾವ್ ಮಮ್ಮಿ: ಕೋಳಿ ಶಾಕ್!
ಸಾಕು ಪ್ರಾಣಿಗಳು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅವುಗಳು ಮಾಡುವ ತುಂಟಾಟಕ್ಕೆ ಮಾರು ಹೋಗದವರೇ ಇಲ್ಲ. ಮನೆಯಲ್ಲೊಂದು ನಾಯಿಯೋ ಅಥವಾ ಬೆಕ್ಕೋ ಇದ್ದರೆ ಆ ಮನೆಯ ಸದಸ್ಯರ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ ಎಂದು ಅಧ್ಯಾಯನಗಳು ಹೇಳುತ್ತವೆ.
ಅಧ್ಯಾಯನಗಳು ಏನೇ ಹೇಳಿದರೂ ನಮ್ಮ ನಡುವೆ ಅಧಿಕ ಜನ ಪ್ರಾಣಿಪ್ರಿಯರು ನಾಯಿ, ಬೆಕ್ಕು, ಮೊಲ ಹೀಗೇ ನಾನಾ ಪ್ರಾಣಿಗಳನ್ನು ಸಾಕುತ್ತಾರೆ. ಮನೆಯ ಸದಸ್ಯರಂತೆ ಅವುಗಳನ್ನು ನೋಡಿಕೊಳ್ಳುತ್ತಾರೆ. ಅವುಗಳ ತುಂಟಾಟದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅನೇಕ ನಮಗೆ ನೋಡಲು ಸಿಗುತ್ತವೆ.

ಆದರೆ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದ್ದು, ನೋಡುಗರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥದ್ದೇನಿದೆ ಅಂದ್ರಾ.. ವೀಡಿಯೋ ಇಲ್ಲಿದೆ ನೋಡಿ
ವಿಡಿಯೋ 1
ಈ ಕ್ಲಿಪ್ ಅನ್ನು Instagram ನಲ್ಲಿ @ cats_of_day ಹೆಸರಿನ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಏನೋ ತಪ್ಪಾಗಿದೆ ಎಂದು ತಾಯಿ ಕೋಳಿಗೆ ತಿಳಿದಿದೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕ್ಲಿಪ್ ಅನ್ನು ಹಂಚಿಕೊಂಡಾಗಿನಿಂದ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಸಂಗ್ರಹಿಸಿದೆ. ಕ್ಲಿಪ್ ಗೆ Instagram ಬಳಕೆದಾರರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಮರಿಕೋಳಿಗಳಿರುವ ಬುಟ್ಟಿಯಲ್ಲಿ ಬೆಕ್ಕೊಂದು ಕುಳಿತುಕೊಂಡಿದೆ. ಮರಿಕೋಳಿಗಳು ಹೆದರದೆ ತಮ್ಮ ತಾಯಿ ಎಂದು ಭಾವಿಸಿ ಬೆಕ್ಕಿನ ಕೆಳಗೆ ಅಡಗಿ ಕುಳಿತಿವೆ. ಆಗ ತಾಯಿ ಕೋಳಿ ಬಂದು ಬೆಕ್ಕನ್ನು ನೋಡುತ್ತದೆ. ತಾಯಿ ಕೋಳಿಗೆ ಅಲ್ಲಿನ್ ಆಗಿದೆ ಅನ್ನೋದು ತಿಳಿಯುವುದಿಲ್ಲ. ಒಂದು ಕ್ಷಣ ಗಾಬರಿಯಾಗಿ ತನ್ನ ಮರಿ ಹಾಗೂ ಬೆಕ್ಕನ್ನು ಮತ್ತ ಮತ್ತೆ ನೋಡುತ್ತದೆ.
ಈ ಅದ್ಬುತ ಘಟನೆಯನ್ನು ಬೆಕ್ಕು ಮತ್ತು ಕೋಳಿ ಮಾಲೀಕರು ಸೆರೆ ಹಿಡಿದಿದ್ದಾರೆ. ಇದು ಕಾಡ್ಗಿಚ್ಚಿನಂತೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗಿಸುವಷ್ಟು ನಗಾಡಿದ್ದಾರೆ.
ಕೆಲವು ಆಸಕ್ತಿಕರ ಕಾಮೆಂಟ್‌ಗಳು ಇಲ್ಲಿವೆ-
"ಬೆಕ್ಕು ತಾಯಿಯಾಗಬೇಕೆಂದು ನಿರ್ಧರಿಸಿ ಮರಿಗಳನ್ನು ದತ್ತು ತೆಗೆದುಕೊಂಡಿದೆ' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
''ಅವರು ನನ್ನ ಮಕ್ಕಳು ಬೆಕ್ಕು, ಇಲ್ಲ ಇಲ್ಲ ಅವರು ನನ್ನ ಮಕ್ಕಳು-ಕೋಳಿ'' ನ್ನೊಬ್ಬ Instagram ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
'' ಇದರಲ್ಲಿ ತಾಯಿ ಯಾರು ಬೆಕ್ಕಾ? ಕೋಳಿ? " ಎಂದು ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.
"ಯಾಕೆ ಕಿರಿಕಿರಿಗೊಳಿಸುವ ನಗುವನ್ನು ಇದರಲ್ಲಿ ಸೇರಿಸಲಾಗಿದೆ?" ಎಂದು ನಗೆ ಸಂಗೀತವನ್ನು ಇಷ್ಟಪಡದ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
Los reflejos de los gatos son impresionantes. 😯 pic.twitter.com/Ww7Ymx15cT
— Eugenia Dinu (@DinuEugenia) August 5, 2023
ಮತ್ತೊಂದು ವಿಡಿಯೋ ವೈರಲ್
ಇತ್ತೀಚೆಗೆ ಹಾವುಗಳೊಂದಿಗೆ ಹೋರಾಡುತ್ತಿರುವ ಬೆಕ್ಕುಗಳ ಮತ್ತೊಂದು ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ವೀಡಿಯೊವು ಬೆಕ್ಕುಗಳು ಹಾವುಗಳನ್ನು ಎದುರಿಸುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು, 1 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದು ಸಂಭಾಷಣೆಗಳನ್ನು ಹುಟ್ಟುಹಾಕಿದೆ ಮತ್ತು ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಕ್ಲಿಪ್ 1 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸಾಕಷ್ಟು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ.












Click it and Unblock the Notifications