Naanu Nandini: 'ನಾನು ನಂದಿನಿ, ಬೆಂಗಳೂರಿಗೆ ಬಂದೀನಿ, ಪಿಜಿಲಿ ಇರ್ತೀನಿ'- ವಿಡಿಯೋ ವೈರಲ್

'ನಾನು ನಂದಿನಿ... ಬೆಂಗಳೂರಿಗೆ ಬಂದೀನಿ... ಪಿಜಿಲಿ ಇರ್ತೀನಿ....' ಯಾರಿದು ನಂದಿನಿ? ಇವರು ಬೆಂಗಳೂರಿಗೆ ಬಂದರೆ ಏನಾಯ್ತು? ಇವರು ಪಿಜಿಲಿ ಇದ್ರೆ ನಮಗೇನು ಅಂತ ಹೇಳ್ತಾಯಿದಿರಾ.... ಇರಿ ಇರಿ ಒಂದು ನಿಮಿಷಾ...

ಇದು ಯಾವುದೋ ಸ್ಟೋರಿ ಅಲ್ಲ. ಬದಲಿಗೆ ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿರುವ ಹಾಡು. ಹಾಡಾ? ಇದೆಂಥ ನಂದಿನಿ, ಬಂದಿನಿ, ಇರ್ತೀನಿ ಹಾಡು ಅಂತ ಕೇಳ್ತಾಯಿದಿರಾ.. ಈ ಹಾಡು ಬರೆದಿದ್ದನ್ನು ಓದುವುದಕ್ಕಿಂತ ವೈರಲ್ ಆಗಿರುವ ವಿಡಿಯೋ ನೋಡಿದರನೇ ಮಜಾ. ಹಾಗಾದರೆ ಒಂದು ಬಾರಿ ವಿಡಿಯೋ ನೋಡಿಕೊಂಡು ವಾಪಸ್ ಬನ್ನಿ.

ಕಂಟೆಂಟ್ ಕ್ರಿಯೇಟರ್ ವಿಕಾಸ್ ಈ ವಿಡಿಯೋವನ್ನು ತಯಾರಿಸಿದ್ದಾರೆ. ಈ ವಿಡಿಯೋದ ರಿಲಿಕ್ಸ್ ಜನಪ್ರಿಯ ಇಂಗ್ಲಿಷ್ ಹಾಡು 'I'm a Barbie girl in a Barbie world' ನದ್ದಾಗಿದೆ. 'ಐ ಆಮ್ ಬರ್ಬಿ ಗರ್ಲ್' ಹಾಡಿನಂತೆ ಈ ಹಾಡಿನ ರಿಲಿಕ್ಸ್ ಸೃಷ್ಟಿಸಲಾಗಿದ್ದು ಸಕತ್ ವೈರಲ್ ಆಗಿದೆ. ವಿಕಾಸ್‌ನ ಈ ಹಾಡಿಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರ್ಭಜರಿ ರೆಸ್ಪಾನ್ಸ್ ಸಿಕ್ಕಿದೆ.

 Naanu Nandini Bengaloorige Bandini PG Li Irthini Funny Barbie Kannada Remake Video Goes Viral

vickypedia_007 ಖಾತೆಯ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವಿಕಾಸ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರ ಈ ಹಾಡು ಒಂದು ಮಿಲಿಯನ್ ಲೈಕ್ಸ್ ಪಡೆದಿದೆ. ಇದಕ್ಕೆ 15 ಮಿಲಿಯನ್ ಕಾಮೆಂಟ್ ಬಂದಿದ್ದು 13 ಮಿಲಿಯನ್ ಜನ ಈ ವಿಡಿಯೋವನ್ನು ನೋಡಿದ್ದಾರೆ. ಇನ್ನೂ ಫೇಸ್‌ಬುಕ್, ಟ್ವಿಟ್ಟರ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಜೊತೆಗೆ ವಿಕಾಸ್ ಇದರಂತೆ ವಿಭಿನ್ನವಾಗಿ ವಿಡಿಯೋ ಮಾಡಿದವರಿಗೆ ಸರ್ಪೈಸ್ ನೀಡುವುದಾಗಿ ಹೇಳಿದ್ದಾರೆ. ಶನಿವಾರ ಸಂಜೆ ಆರು ಗಂಟೆ ಒಳಗೆ ವಿಡಿಯೋವನ್ನು ಅಪ್ಲೋಡ್ ಮಾಡಲು ವಿಕಾಸ್ ತಿಳಿಸಿದ್ದಾರೆ. ವಿಕಾಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ನಾನು ನಂದಿನಿ ಇನ್ಸ್ಟಾಗ್ರಾಮ್ ಚಾಲೆಂಜ್. #Naanunandini ಸಾಂಗ್ ಅನ್ನು ಯೂಸ್ ಮಾಡಿ Mems ಮತ್ತು Reels ಮಾಡಿ. ಟಾಪ್ 3 creatorsಗೆ surprise ಗಿಫ್ಟ್' ಎಂದು ಬರೆದಿದ್ದಾರೆ.

ಈ ಅದ್ಬುತ ಹಾಡಿಗೆ ಪಿಜಿ ಹುಡುಗಾ ಹುಡ್ಗೀರು ಫಿದಾ ಆಗಿದ್ದಾರೆ. ಸಾಕಷ್ಟು ಬಾರಿ ಶೇರ್ ಕೂಡ ಮಾಡಿದ್ದಾರೆ. ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಈ ಹಾಡು ಕೇಳುಗರ ಮನ ಮುಟ್ಟಿದೆ. ತಮ್ಮ ಜೀವನ ಶೈಲಿಯನ್ನು ನೆನಪು ಮಾಡುವ ಈ ಹಾಡು ಪಿಜಿ ಹುಡುಗಾ ಹುಡ್ಗೀರಲ್ಲಿ ಸಕತ್ ಕ್ರೇಜ್ ಹುಟ್ಟಿಸಿದೆ.

ಸಾಂಗ್ ರಿಲಿಕ್ಸ್ ಹೀಗಿದೆ...

''ನಾನು ನಂದಿನಿ... ಬೆಂಗಳೂರ್ಗೆ ಬಂದೀನಿ... ಪಿಜಿಲಿ ಇರ್ತೀನಿ.... ಐಟಿ ಕೆಲ್ಸಾ ಮಾಡ್ತೀನಿ... ಊಟ ಸರಿಯಿಲ್ಲ... ಅಂದ್ರುನೂ ತಿಂತೀನಿ, ಬಂದಿದುಡ್ಡೆಲ್ಲಾ ಮನೆಗ್ ಕಳಿಸ್ತೀನಿ. ಬಾರೆ ನಂದಿನಿ ಗೋಬಿ ತಿನಿಸ್ತಿನಿ, ಬೇ ಬೇ ಬೇಡ.... ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ.. ಓ ಬೇಡ.. ಓ ಬೇಡ.... ಬಾರೆ ನಂದಿನಿ ಪೇಡ ತಿನಿಸ್ತೀನಿ... ಬೇ ಬೇ ಬೇಡ.. ಬಾರೆ ನಂದಿನಿ ಪಿಚ್ಚರ್ ತೋರಿಸ್ತೀನಿ... ಓ ಬೇಡ.. ಓ ಬೇಡ...

ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು. ಇಲ್ಲಂದರೆ ಐಟಿಲಿ ಕಷ್ಟಾ ಆಗುತ್ತೆ. ಸರ್ ನಾನು ಕನ್ನಡ ಮೀಡಿಯಂನಲ್ಲೋದಿದೆ. ಅದಕ್ಕೆ ನನ್ ಇಂಗ್ಲಿಷ್ ಅಷ್ಟಕಷ್ಟೇ... ಐ ಕ್ಯಾನ್ ಟ್ರೈ.. ಐ ಕ್ಯಾನ್ ಟಾಕ್.. ಬಟ್ ವಾಟ್ ಐ ಸ್ಪೀಕ್ ಈಸ್ ಬಟ್ಲರ್ ಇಂಗ್ಲೀಷ್..ನಾನು ನಂದಿನಿ... ಬೆಂಗಳೂರ್ಗೆ ಬಂದೀನಿ... ಪಿಜಿಲಿ ಇರ್ತೀನಿ.... ಐಟಿ ಕೆಲ್ಸಾ ಮಾಡ್ತೀನಿ... ಊಟ ಸರಿಯಿಲ್ಲ... ಅಂದ್ರುನೂ ತಿಂತೀನಿ, ಬಂದಿದುಡ್ಡೆಲ್ಲಾ ಮನೆಗ್ ಕಳಿಸ್ತೀನಿ.''

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+