ನಾಲ್ಕು ವರ್ಷಗಳ ವಾರಂಟಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ Moto S50 Neo
ವಿಶ್ವದ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಹೊಂದಿರುವ ಸ್ಮಾರ್ಟ್‌ಫೋನ್ ಕಂಪನಿಯಾಗಿರುವ ಮೊಟೊರೊಲಾ ಮತ್ತೊಂದು ಭರ್ಜರಿ ಫೀಚರ್ಸ್ ಇರುವ ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಅಲ್ಲದೆ ತಾನು ಎಲ್ಲ ರೇಂಜ್‌ಗಳಲ್ಲೂ ಫಿಟ್ ಆಗಬಲ್ಲೇ ಎಂಬುದನ್ನು ಸಾಬೀತು ಮಾಡಿಕೊಳ್ಳಲು ಮೊಟೊರೊಲಾ ಬಯಸುತ್ತಿದೆ. ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲೂ ತನ್ನದೇ ಆದ ಗತ್ತು ಹೊಂದಿರುವ ಮೊಟೊರೊಲಾ ಇನ್ನೇನು ಕೆಲವೇ ದಿನಗಳಲ್ಲಿ Moto G85 5G ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಈಗ ಮಟೊರೊಲಾ ಮಿಡ್ ರೇಂಜ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಒಂದು ಭರ್ಜರಿ ಫೋನ್ ಲಾಂಚ್ ಮಾಡಲು ಯೋಚನೆ ನಡೆಸಿದೆ. ಈ ಮೂಲಕ ಮೊಬೈಲ್ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನ ಬೇರುಗಳನ್ನು ಮತ್ತಷ್ಟು ಆಳಕ್ಕೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಮೊಟೊರೊಲಾ ಹೊಸ ತಂತ್ರಜ್ಞಾನದಿಂದ ಕೂಡಿರುವ ಮೊಬೈಲ್ ಫೋನ್‌ಗಳನ್ನು ಲಾಂಚ್ ಮಾಡುತ್ತಲೆ ಇದೆ. Moto S50 Neo ಮೊಬೈಲ್ ಯುರೋಪಿಯನ್ ಮಾರುಕಟ್ಟೆಯಲ್ಲಿ Moto G85 5G ಹೆಸರಿನೊಂದಿಗೆ ಪಟ್ಟಿ ಮಾಡಲಾಗಿದೆ. ಉತ್ತಮ ಪ್ರೊಸೆಸರ್ ಹಾಗೂ ಕ್ಲಾಸಿಕ್ ಡಿಸ್‌ಪ್ಲೇ ಹೊಂದಿರುವ ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರ ಚಿತ್ತ ಕದಿಯುವದರಲ್ಲಿ ಎರಡು ಮಾತಿಲ್ಲ.

ಮೊಟೊರೊಲಾ ಕಂಪನಿ ತನ್ನ ಗ್ರಾಹಕರ ಬೇಕು ಬೇಡಿಕೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತದೆ. ಅಲ್ಲದೆ ಎಲ್ಲ ಸೆಗ್ಮೆಂಟ್ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಅವರು ನೀಡುವ ಬೆಲೆಗೆ ಉತ್ತಮ ರಿರ್ಟನ್ ನೀಡುವ ಯೋಚನೆ ಕಂಪನಿಯದ್ದಾಗಿದೆ. ಈ ಉದ್ದೇಶದಿಂದಲೇ ಕಂಪನಿ ಮತ್ತೊಮ್ಮೆ ದೊಡ್ಡ ಸದ್ದು ಮಾಡುತ್ತಿದೆ.
ಫೋನಿನ್ ವಿಶೇಷತೆಗಳೇನು?
Moto G85 5G ಕಾರ್ಯಕ್ಷಮತೆಯ ಉತ್ತಮವಾಗಿದೆ. ಕಂಪನಿಯು ಲ್ಯಾಗ್ ಫ್ರೀ ಪ್ರೊಸೆಸಿಂಗ್‌ಗಾಗಿ ಸ್ನಾಪ್‌ಡ್ರಾಗನ್ 6s Gen 3 ಪ್ರೊಸೆಸರ್ ಅನ್ನು ನೀಡಲಿದೆ. ಈ ಫೋನ್ ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದ್ದು, 30 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಲಿಮ್ ಮತ್ತು ಸ್ಟೈಲಿಶ್ ವಿನ್ಯಾಸ ಹೊಂದಿರುವ ಈ ಫೋನ್‌ನಲ್ಲಿ ಕಂಪನಿಯು IP54 ರೇಟಿಂಗ್ ಸಹ ನೀಡಿದೆ. ಈ ಫೋನ್ ಸುಧಾರಿತ ಆಂಡ್ರಾಯ್ಡ್ 14ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ನ ವಿಶೇಷತೆ ಅಂದರೆ ಈ ಫೋನ್ ನಾಲ್ಕು ವರ್ಷದ ವಾರೆಂಟ್ ಹೊಂದಿರಲಿದೆ.
ಡಿಸ್‌ಪ್ಲೇ ಹೇಗಿದೆ?
ಈ ಸ್ಮಾರ್ಟ್‌ಫೋನ್ 6.7 ಇಂಚಿನ ಕರ್ವ್ಡ್ ಪೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದರ ಡಿಸ್‌ಪ್ಲೇಯಲ್ಲಿ, ನೀವು 1600 ನಿಟ್ಸ್ ವರೆಗಿನ ಗರಿಷ್ಠ ಹೊಳಪು ಮತ್ತು 120Hz ನ ರಿಫ್ರೆಶ್ ದರ ಬೆಂಬಲವನ್ನು ಪಡೆಯಬಹುದು.

ಈ ಫೋನ್ ಸಹ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದ್ದು, ವಿಶೇಷವೆಂದರೆ ಕಂಪನಿಯು ನೀಡುವ ಕ್ಯಾಮೆರಾ OIS ಅನ್ನು ಬೆಂಬಲಿಸಿದೆ, ಇದು ವೀಡಿಯೊಗಳನ್ನು ಶೂಟ್ ಮಾಡುವಾಗ ಸ್ಥಿರತೆಯನ್ನು ನೀಡುತ್ತದೆ. ಇದರಲ್ಲಿರುವ ಸೆಕೆಂಡರಿ ಕ್ಯಾಮೆರಾ 8MP ಇರಲಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೋ ಕಾಲಿಂಗ್ ಗೆ ಕಂಪನಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಬೆಲೆ ಎಷ್ಟು?
Moto G85 5G ಅನ್ನು ಚೀನಾದಲ್ಲಿ £299.99 ಅಂದರೆ ಸರಿಸುಮಾರು 31,775 ರೂಗಳಿಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ.












Click it and Unblock the Notifications