Get Updates
Get notified of breaking news, exclusive insights, and must-see stories!

Moto G04s ಭರ್ಜರಿ ಬ್ಯಾಟರಿ, 50 MP ಕ್ಯಾಮೆರಾ: ಬೆಲೆ ಕೆಳೆದ್ರೆ ತೆಗೆದುಕೊಳ್ಳುವುದು ಗ್ಯಾರಂಟಿ

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳು ತಮ್ಮ ಅಸ್ತಿತ್ವನ್ನು ಪ್ರಬಲವಾಗಿ ಉಳಿಸಿವೆ. ಪ್ರತಿ ದಿನವೂ ಹೊಸ ಹೊಸ ತಂತ್ರಜ್ಞಾನದಿಂದ ಈ ಮೊಬೈಲ್‌ಗಳು ಗ್ರಾಹಕರನ್ನು ತನ್ನತ್ತ ಸೆಳೆಯುತ್ತವೆ. ಹಲವು ಕಂಪನಿಗಳು ಸಖತ್‌ ಫೀಚರ್ಸ್‌ನಿಂದ ಸುದ್ದಿ ಮಾಡಿ ಗ್ರಾಹಕರನ್ನು ಸೆಳೆದರೆ ಇನ್ನು ಹಲವು ಕಂಪನಿಗಳು ಭರ್ಜರಿ ಡಿಸ್ಕೌಂಟ್‌ ನೀಡಿ ಸೆಳೆಯುತ್ತವೆ.

ಸದ್ಯ ಇಂತಹದ್ದೇ ಒಂದು ಡಿಸ್ಕೌಂಟ್‌ 10 ಸಾವಿರ ರೂಪಾಯಿಗೂ ಕಡಿಮೆ ಇರುವ ಮೊಬೈಲ್‌ಗೆ ಸಿಗುತ್ತಿದ್ದು, ನಿಜಕ್ಕೂ ಗ್ರಾಹಕ ಫುಲ್ ಖುಷ್ ಆಗಿದ್ದಾನೆ. ಕಳೆದ ತಿಂಗಳು ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಿದ್ದ Moto G04s, ಗ್ರಾಹಕರ ಇಷ್ಟದ ಫೋನ್‌ಗಳಲ್ಲಿ ಒಂದು. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಸಿಗುತ್ತಿರುವುದು ಜನರಿಗೆ ಫುಲ್‌ ಖುಷ್ ಮಾಡಿದೆ.

Moto G04s Price and Features Best Camera Phone Under 7000 Affordable Smartphones

Moto G04s ವೇಗದ ಚಾರ್ಜಿಂಗ್, ದೊಡ್ಡ ಬ್ಯಾಟರಿ, ಅಪ್‌ಡೇಟೆಡ್ ಸಾಫ್ಟ್‌ವೇರ್, ಸ್ಮಾರ್ಟ್‌ ಡಿಸ್‌ಪ್ಲೇ ಮತ್ತು ಉತ್ತಮ ರೆಸಲ್ಯೂಶನ್ ಮುಂತಾದ ಹಲವು ಶಕ್ತಿಯುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್‌ನ ಬೆಲೆಯಲ್ಲಿ ಈಗ ಕಡಿತವಾಗಿದೆ.

Moto G04s ಕ್ಯಾಮೆರಾ ಹೇಗಿದೆ?

Motorola 50 MP AI ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಮುಂಭಾಗದಲ್ಲಿ, Moto G04s ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5 MP ಕ್ಯಾಮೆರಾ ಸಂವೇದಕವನ್ನು ಹೊಂದಿದೆ. Moto G04s ಇತ್ತೀಚಿನ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

Moto G04s ಬೆಲೆ

Moto G04s ಇಂದು ಮಧ್ಯಾಹ್ನ 12 ರಿಂದ ಫ್ಲಿಪ್‌ಕಾರ್ಟ್, Motorola.in ವೆಬ್‌ಸೈಟ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಲಭ್ಯವಿದೆ. ಭಾರತದಲ್ಲಿ Moto G04s ಬೆಲೆಯನ್ನು 4GB/64GB ಮಾದರಿಗೆ 6,999 ರೂ.ಗಳಿಗೆ ನಿಗದಿಪಡಿಸಲಾಗಿದೆ. Moto G04s ಅನ್ನು ಸನ್‌ರೈಸ್ ಆರೆಂಜ್, ಸೀ ಗ್ರೀನ್, ಕಾನ್ಕಾರ್ಡ್ ಬ್ಲಾಕ್ ಮತ್ತು ಸ್ಯಾಟಿನ್ ಬ್ಲೂ ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ ಫೋನ್‌ ಈ ಬಜೆಟ್‌ನಲ್ಲಿ ಹಲವು ಬ್ರ್ಯಾಂಡ್‌ ಮೊಬೈಲ್‌ಗಳಿಗೆ ಸ್ಪರ್ಧೆ ನೀಡಲಿದೆ.

Moto G04s Price and Features Best Camera Phone Under 7000 Affordable Smartphones

Moto G04s UNISOC T606 ಚಿಪ್‌ಸೆಟ್ ಅನ್ನು ಹೊಂದಿದ್ದು, ಇದನ್ನು Mali-G57 MP1 GPU ನೊಂದಿಗೆ ಪರಿಚಯಿಸಲಾಗಿದೆ. 8GB RAM ಮತ್ತು 128GB ಇಂಟರ್ನಲ್‌ ಸ್ಟೋರೆಜ್‌ ಸಹ ಲಭ್ಯ.

ಸ್ಮಾರ್ಟ್‌ಫೋನ್ ಡಿಸ್ಪ್ಲೇ ಹೇಗಿದೆ?

Moto G04s 6.6-ಇಂಚಿನ ಎಚ್‌ಡಿ ಪ್ಲಸ್ ಎಲ್‌ಸಿಡಿ ಪರದೆಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರವನ್ನು ಹೊಂದಿದ್ದು, ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ. Moto G04s ಫೋನ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್ ಚಾರ್ಜ್‌ ಹೊಂದಿದ್ದು, 15W ವೇಗದ ಚಾರ್ಜಿಂಗ್‌ ಸೌಲಭ್ಯ ಹೊಂದಿದೆ. ಇದರಲ್ಲಿ 5,000 mAh ಬ್ಯಾಟರಿಯನ್ನು ಸಹ ಹೊಂದಿದೆ.Moto G04s Dolby Atmos ಬೆಂಬಲ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್‌ ಹೊಂದಿದೆ.

Moto G04s
4G LTE
ಬ್ಲೂಟೂತ್ 5.0, GPS
ಡ್ಯುಯಲ್-ಬ್ಯಾಂಡ್ Wi-Fi
ಮೈಕ್ರೊ SD ಕಾರ್ಡ್ ಸ್ಲಾಟ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+