ಯಾವುದು ಬೆಸ್ಟ್: ನೀವು ಪಡೆದ ಲಸಿಕೆ ಓಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತಾ!?

ನವದೆಹಲಿ, ಡಿಸೆಂಬರ್ 20: ಇಡೀ ಜಗತ್ತಿಗೆ ಭಯ ಹುಟ್ಟಿಸಿದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಹಲವು ರಾಷ್ಟ್ರಗಳು ಲಸಿಕೆಯನ್ನು ಕಂಡುಕೊಂಡಿವೆ. ಜಾಗತಿಕ ಮಟ್ಟದಲ್ಲಿ ಸಮರೋಪಾದಿಯಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ. ಈಗಾಗಲೇ ಹಲವು ರಾಷ್ಟ್ರಗಳು ಉಚಿತವಾಗಿ ತಮ್ಮ ಪ್ರಜೆಗಳಿಗೆ ಲಸಿಕೆ ವಿತರಣೆ ಮಾಡುತ್ತಿವೆ. ವಿಶ್ವದ ದೊಡ್ಡಣ್ಣ ಅಮೆರಿಕಾ, ಯುಕೆ, ಆಸ್ಟ್ರೇಲಿಯಾ, ಚೀನಾ ಹಾಗೂ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಜನರು ಲಸಿಕೆಯನ್ನೂ ಪಡೆದುಕೊಂಡಿದ್ದಾರೆ.

ಮೊದಲ ಅಲೆಯಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್, ಎರಡನೇ ಅಲೆಯಲ್ಲಿ ಸಾವಿನ ನಗಾರಿ ಬಾರಿಸಿತು. ಯುಎಸ್, ಆಸ್ಟ್ರೇಲಿಯಾ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಈಗ ಮೂರನೇ ಅಲೆಯ ಭೀತಿ ಶುರುವಾಗಿದೆ. ನಿರಾಳರಾಗಿದ್ದ ಜನರ ನಿದ್ದೆಗೆಡಿಸಲು ಹೊಸ ರೂಪಾಂತರಿ ಓಮಿಕ್ರಾನ್ ಎಂಟ್ರಿ ಕೊಟ್ಟಿದೆ.

ಕೊರೊನಾವೈರಸ್ ಅನ್ನು ಸಮರ್ಥವಾಗಿ ಎದುರಿಸಲು ಲಸಿಕೆಗಳನ್ನು ಸಂಶೋಧಿಸಿದರೂ ಚಿಂತೆ ತಪ್ಪಿದ್ದಲ್ಲ. ಹೊಸ ರೂಪಾಂತರಿ ಓಮಿಕ್ರಾನ್ ಯಾವುದೇ ಲಸಿಕೆಗೂ ಬಗ್ಗುವುದಿಲ್ಲ. ಲಸಿಕೆಗಳು ಓಮಿಕ್ರಾನ್ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಲಸಿಕೆ ಪಡೆದವರಲ್ಲೂ ಓಮಿಕ್ರಾನ್ ಸೋಂಕು ಅಂಟಿಕೊಳ್ಳದೇ ಇರುವುದಿಲ್ಲ. ಹೀಗೆ ಹತ್ತು ಹಲವು ವಿಷಯಗಳು ಜನರಲ್ಲಿ ಓಮಿಕ್ರಾನ್ ಬಗ್ಗೆ ಭಯ ಹುಟ್ಟುವಂತೆ ಮಾಡುತ್ತಿವೆ. ಡಿಸೆಂಬರ್ ತಿಂಗಳಿನಿಂದ ಆತಂಕ ಹೆಚ್ಚುತ್ತಿರುವ ಓಮಿಕ್ರಾನ್ ಮತ್ತು ಕೊವಿಡ್-19 ಲಸಿಕೆಗಳ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಎರಡು ಕೊವಿಡ್-19 ಲಸಿಕೆಗೆ ಮಾತ್ರ ಆರಂಭಿಕ ಯಶಸ್ಸು

ಎರಡು ಕೊವಿಡ್-19 ಲಸಿಕೆಗೆ ಮಾತ್ರ ಆರಂಭಿಕ ಯಶಸ್ಸು

ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ವಿರುದ್ಧ ರಕ್ಷಣೆ ಒದಗಿಸುವುದು ತುರ್ತು ಅಗತ್ಯವಾಗಿದೆ. ಆದರೆ ಜಗತ್ತಿನ ಎರಡು ಕೊವಿಡ್-19 ಲಸಿಕೆಗಳು ಮಾತ್ರ ಅದರಲ್ಲಿ ಯಶಸ್ವಿ ಆದಂತೆ ತೋರುತ್ತಿವೆ. ಫೈಜರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಮಾತ್ರ ಓಮಿಕ್ರಾನ್ ನಿಂದ ಸುರಕ್ಷತೆಯನ್ನು ಒದಗಿಸುವ ಸಾಮರ್ಥ್ಯವಿದೆ ಎಂಬುದು ವೈದ್ಯಕೀಯ ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಈ ಲಸಿಕೆಗಳ ಬೂಸ್ಟರ್ ಡೋಸ್ ನಿಂದ ಓಮಿಕ್ರಾನ್ ಸೋಂಕು ಹರಡುವಿಕೆಯನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬಹುದು. ವಿಪರ್ಯಾಸ ಎಂದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಮಾಡರ್ನಾ ಮತ್ತು ಫೈಜರ್ ಲಸಿಕೆಗಳೇ ಲಭ್ಯವಿಲ್ಲ.

ಕೆಲವು ಲಸಿಕೆಗಳು ಓಮಿಕ್ರಾನ್ ವಿರುದ್ಧ ಕೆಲಸ ಮಾಡುವುದಿಲ್ಲ

ಕೆಲವು ಲಸಿಕೆಗಳು ಓಮಿಕ್ರಾನ್ ವಿರುದ್ಧ ಕೆಲಸ ಮಾಡುವುದಿಲ್ಲ

ಆಸ್ಟ್ರಾಜೆನಿಕಾ, ಜಾನ್ಸನ್ ಆಂಡ್ ಜಾನ್ಸನ್ ಸೇರಿದಂತೆ ರಷ್ಯಾ ಮತ್ತು ಚೀನಾದಲ್ಲಿ ಉತ್ಪಾದನೆ ಆಗುತ್ತಿರುವ ಹಲವು ಕೊವಿಡ್-19 ಲಸಿಕೆಗಳು ಓಮಿಕ್ರಾನ್ ಸೋಂಕು ಹರಡುವಿಕೆ ಮತ್ತು ಪ್ರಭಾವವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದು ಆರಂಭಿಕ ವೈದ್ಯಕೀಯ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಬಹುತೇಕ ರಾಷ್ಟ್ರಗಳು ಇವೇ ಲಸಿಕೆಗಳ ವಿತರಣೆ ಅಭಿಯಾನವನ್ನು ಆಯೋಜಿಸಿದ್ದು, ಕೊವಿಡ್-19 ಸೋಂಕು ಹರಡುವಿಕೆಯಲ್ಲಿ ಸ್ವಲ್ಪ ಮಟ್ಟಿನ ಅಂತರವನ್ನು ಕಾಯ್ದುಕೊಂಡವು.

ಅನಾರೋಗ್ಯ ಸಮಸ್ಯೆ ಹೊಂದಿದವರಲ್ಲಿ ಸೋಂಕಿನ ಅಪಾಯ

ಅನಾರೋಗ್ಯ ಸಮಸ್ಯೆ ಹೊಂದಿದವರಲ್ಲಿ ಸೋಂಕಿನ ಅಪಾಯ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕ ನಡುವೆಯೂ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕೋಟ್ಯಂತರ ಜನರು ಲಸಿಕೆ ಹಾಕಿಸಿಕೊಂಡಿಲ್ಲ. ಇದರಿಂದ ವೈಯಕ್ತಿಕವಾಗಿ ಸೋಂಕು ಹರಡುವಿಕೆ ಜೊತೆಗೆ ಹೊಸ ರೂಪಾಂತರಿಗಳು ಹುಟ್ಟಿಕೊಳ್ಳುವ ಭೀತಿಯೂ ಇದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೊವಿಡ್-19 ಲಸಿಕೆಗಳ ಅಲಭ್ಯತೆಯೂ ಜನರನ್ನು ಚಿಂತೆಗೀಡು ಮಾಡುತ್ತಿದೆ. ಇವುಗಳ ಮಧ್ಯೆ ಅನಾರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಓಮಿಕ್ರಾನ್ ಸೋಂಕು ಅಂಟಿಕೊಳ್ಳುವ ಅಪಾಯವೂ ಹೆಚ್ಚಾಗಿದೆ.

ಇದುವರೆಗೆ ಪ್ರಯೋಗಾಲಯಗಳಲ್ಲಿ ನಡೆಸುವ ಸಂಶೋಧನೆಗಳ ಆಧಾರದಲ್ಲಿ ಸಾಕ್ಷ್ಯಗಳಿವೆಯೇ ಹೊರತೂ, ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿ ಅಥವಾ ಜಗತ್ತಿನ ಜನಸಂಖ್ಯೆಯ ಮೇಲೆ ಅದರ ಪರಿಣಾಮವನ್ನು ಆಧಾರವಾಗಿ ಇಟ್ಟುಕೊಂಡಿಲ್ಲ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಡರ್ನಾ, ಫೈಜರ್ ಸಂಶೋಧನೆ

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಡರ್ನಾ, ಫೈಜರ್ ಸಂಶೋಧನೆ

ಮಾಡರ್ನಾ ಮತ್ತು ಫೈಜರ್ ಲಸಿಕೆಗಳು mRNA ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಇದು ಸೋಂಕಿನ ಎಲ್ಲಾ ರೂಪಾಂತರಿಗಳ ಮೇಲೆ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಉಳಿದ ಕೊವಿಡ್-19 ಲಸಿಕೆಗಳಲ್ಲಿ ಪ್ರತಿರಕ್ಷಣಾ ಪ್ರಕ್ರಿಯೆಯನ್ನು ಪ್ರಚೋಧಿಸುವ ಹಳೆಯ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಕೊರೊನಾವೈರಸ್ ಸೋಂಕಿಗಾಗಿ ನೀಡುವ mRNA ಲಸಿಕೆಯು ದೇಹದಲ್ಲಿ ಪ್ರೊಟೀನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಮಾಡರ್ನಾ ಲಸಿಕೆಯು mRNA ಕಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ mRNA ಮಾದರಿಯ ಲಸಿಕೆಯ ಪರಿಣಾಮವು ಆರು ತಿಂಗಳಿನಿಂದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿವರೆಗೂ ಇರುತ್ತದೆ. ಈ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ರೋಗಾಣುವನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಬಲ್ಲ ಪ್ರತಿಕಾಯಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಮಾಡರ್ನಾ ಮತ್ತು ಫೈಜರ್ ಲಸಿಗೆಳು mRNA ಮಾದರಿಯನ್ನು ಹೊಂದಿದ್ದು, ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.

ಚೀನಾ ಲಸಿಕೆಗಳು ಓಮಿಕ್ರಾನ್ ವಿರುದ್ಧ ಕೆಲಸ ಮಾಡಲ್ಲ

ಚೀನಾ ಲಸಿಕೆಗಳು ಓಮಿಕ್ರಾನ್ ವಿರುದ್ಧ ಕೆಲಸ ಮಾಡಲ್ಲ

ಚೀನಾದಲ್ಲಿ ಸಂಶೋಧಿಸಿರುವ ಹಾಗೂ ಉತ್ಪಾದಿಸಲಾಗಿರುವ ಸಿನೋಫಾರ್ಮಾ ಮತ್ತು ಸಿನೋವ್ಯಾಕ್ ಲಸಿಕೆಗಳನ್ನು ಜಗತ್ತಿನ ಬಹುಪಾಲು ಅರ್ಧದಲ್ಲು ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗಿದೆ. ಆದರೆ, ಈ ಎರಡೂ ಲಸಿಕೆ ಓಮಿಕ್ರಾನ್ ರೋಗದ ವಿರುದ್ಧ ರಕ್ಷಣೆ ನೀಡುವುದಿಲ್ಲ ಎಂದು ತಿಳಿದು ಬಂದಿದೆ. ಚೀನಾದಲ್ಲಿ ಅತಿಹೆಚ್ಚು ಜನರು ಇವೇ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ. ಕಡಿಮೆ ಹಾಗೂ ಮಧ್ಯಮ ಆದಾಯವನ್ನು ಹೊಂದಿರುವ ಮೆಕ್ಸಿಕೋ ಹಾಗೂ ಬ್ರೆಜಿಲ್ ರೀತಿ ರಾಷ್ಟ್ರಗಳಲ್ಲೂ ಕೂಡಾ ಚೀನಾದ ಇದೇ ಲಸಿಕೆಗಳನ್ನು ಪ್ರಜೆಗಳಿಗೆ ವಿತರಿಸಲಾಗಿದೆ.

ಆಕ್ಸ್ ಫರ್ಡ್, ಅಸ್ಟ್ರಾಜೆನಿಕಾ ಲಸಿಕೆ ಪರಿಣಾಮಕಾರಿಯಲ್ಲ

ಆಕ್ಸ್ ಫರ್ಡ್, ಅಸ್ಟ್ರಾಜೆನಿಕಾ ಲಸಿಕೆ ಪರಿಣಾಮಕಾರಿಯಲ್ಲ

ಬ್ರಿಟನ್ ನಡೆಸಿದ ಪ್ರಾಥಮಿಕ ಅಧ್ಯಯನದ ಪ್ರಕಾರ, ಆಕ್ಸ್ ಫರ್ಡ್-ಅಸ್ಟ್ರಾಜೆನಿಕಾ ಲಸಿಕೆ ಪೆಡದ ಆರು ತಿಂಗಳ ನಂತರದಲ್ಲಿ ಅದೂ ಕೂಡಾ ಓಮಿಕ್ರಾನ್ ಸೋಂಕು ಹರಡುವಿಕೆ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ಭಾರತದಲ್ಲಿ ಶೇ.90ರಷ್ಟು ಫಲಾನುಭವಿಗಳು ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಶೋಧಿಸಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿರುವ ಕೊವಿಶೀಲ್ಡ್ ಹೆಸರಿನ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಕೊವ್ಯಾಕ್ಸ್ ಅಡಿ ಲಸಿಕೆ ವಿತರಣೆಯನ್ನು ಮಾಡಲಾಗಿದೆ. ಜಗತ್ತಿನ 44 ರಾಷ್ಟ್ರಗಳಿಗೆ 67 ದಶಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ರಫ್ತು ಮಾಡಲಾಗಿದೆ.

ಸ್ಪುಟ್ನಿಕ್-ವಿ ಲಸಿಕೆಯು ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುತ್ತದೆಯೇ?

ಸ್ಪುಟ್ನಿಕ್-ವಿ ಲಸಿಕೆಯು ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುತ್ತದೆಯೇ?

ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಅತಿಹೆಚ್ಚು ಬಳಕೆ ಆಗಿರುವ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯು ಓಮಿಕ್ರಾನ್ ವಿರುದ್ಧ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಇದರ ಮಧ್ಯೆ ಒಂದೇ ಡೋಸ್ ಪಡೆದುಕೊಳ್ಳವು ವಿಧಾನವನ್ನು ಹೊಂದಿರುವ ಕಾರಣಕ್ಕೆ ಆಫ್ರಿಕಾದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದರೆ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆ ಕೂಡ ಓಮಿಕ್ರಾನ್ ವಿರುದ್ಧ ಅಷ್ಟೊಂದು ಪರಿಣಾಮಕಾರಿ ಆಗಿ ಕೆಲಸ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಲಸಿಕೆಗಳಿಂದ ಪ್ರೇರಿತವಾದ ಪ್ರತಿಕಾಯಗಳಿಗೆ ರಕ್ಷಣೆಯೇ ಮೊದಲ ಆದ್ಯತೆ ಆಗಿರುತ್ತದೆ. ಆದರೆ ಈಗ ನೀಡುತ್ತಿರುವ ಲಸಿಕೆಗಳು ಟಿ ಜೀವಕೋಶಗಳನ್ನು ಹೆಚ್ಚಿಸುವ ಹಾಗೂ ಓಮಿಕ್ರಾನ್ ರೂಪಾಂತರವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಪ್ರಾಥಮಿಕ ಅಧ್ಯಯನಗಳಿಂದ ತಿಳಿದು ಬಂದಿದೆ. ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೀಗೆ ರೂಪಾಂತರವನ್ನು ಗುರುತಿಸುವುದು ಬಲುಮುಖ್ಯವಾಗಿರುತ್ತದೆ.

ಓಮಿಕ್ರಾನ್ ರೂಪಾಂತರಿಯು ಡೆಲ್ಟಾಗಿಂತ ಮಾರಕವಲ್ಲ

ಓಮಿಕ್ರಾನ್ ರೂಪಾಂತರಿಯು ಡೆಲ್ಟಾಗಿಂತ ಮಾರಕವಲ್ಲ

ಜಾಗತಿಕ ಮಟ್ಟದಲ್ಲಿ ಭಯ ಹುಟ್ಟಿಸುತ್ತಿರುವ ಓಮಿಕ್ರಾನ್ ರೂಪಾಂತರಿಯ ಈವರೆಗಿನ ಬೆಳವಣಿಗೆಯನ್ನು ನೋಡುತ್ತಿದ್ದರೆ, ಇದು ಡೆಲ್ಟಾ ರೂಪಾಂತರಿಗಿಂತ ಮಾರಕವಾಗಿಲ್ಲ. ನೀವು ಮೊದಲು ರೋಗದ ಲಕ್ಷಣಗಳಿಂದ ಮೊದಲು ರಕ್ಷಣೆಯನ್ನು ಪಡೆದುಕೊಳ್ಳಬೇಕು, ನಂತರದಲ್ಲಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡು ಸಾವಿನಿಂದ ರಕ್ಷಣೆ ಪಡೆದುಕೊಳ್ಳಬೇಕಾಗುತ್ತದೆ," ಎಂದು ನ್ಯೂಯಾರ್ಕ್‌ನ ವೇಲ್ ಕಾರ್ನೆಲ್ ಮೆಡಿಸಿನ್‌ನ ವೈರಸ್ ತಜ್ಞ ಜಾನ್ ಮೂರ್ ಹೇಳಿದರು. ಅಲ್ಲದೇ ಅದನ್ನು "ಸಿಲ್ವರ್ ಲೈನಿಂಗ್" ಎಂದು ಕರೆದಿದ್ದಾರೆ.

ಆದರೆ ಓಮಿಕ್ರಾನ್ ಸೃಷ್ಟಿಸಲು ಹೊರಟಿರುವ ಜಾಗತಿಕ ಆತಂಕವನ್ನು ನಿಯಂತ್ರಿಸಲು ಹಾಗೂ ರಕ್ಷಣೆ ಒದಗಿಸುವುದಕ್ಕೆ ಇದಿಷ್ಟು ಸಾಕಾಗುವುದಿಲ್ಲ ಎಂದು ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್‌ನಲ್ಲಿರುವ ಜಾಗತಿಕ ಆರೋಗ್ಯ ನೀತಿ ಕೇಂದ್ರದ ನಿರ್ದೇಶಕ ಜೆ. ಸ್ಟೀಫನ್ ಮಾರಿಸನ್ ಹೇಳಿದ್ದಾರೆ. "ಈ ಸೋಂಕಿನ ಹರಡುವಿಕೆಯ ಭೀತಿಯು ಹೆಚ್ಚಾಗಿದ್ದು, ಆರೋಗ್ಯ ವ್ಯವಸ್ಥೆಯನ್ನೇ ತಿರುವು-ಮುರುವು ಮಾಡವ ಸಾಮರ್ಥ್ಯವನ್ನು ಹೊಂದಿದೆ. "ಒಂದು ವೇಳೆ ಜಗತ್ತಿನಾದ್ಯಂತ ಸೋಂಕು ಹರಡಿದರೆ ಅದು ಆಘಾತಕಾರಿ ಆಗುತ್ತದೆ. ಒಂದು ದಿಕ್ಕಿನಲ್ಲಿ ಇಡೀ ಜಗತ್ತು ಎಲ್ಲ ಯುದ್ಧ ಮುಗಿದಿದೆ ಎಂದು ಯೋಚಿಸುತ್ತಿದೆ. ಆದರೆ ಇನ್ನೊಂದು ದಿಕ್ಕಿನಲ್ಲಿ ಯುದ್ಧವು ಮತ್ತೊಂದು ಹಂತ ಆರಂಭವಾಗುತ್ತಿದೆ. ಆದರೆ ನಾವುಗಳು ಅದರ ಬಗ್ಗೆ ಇನ್ನೂ ಆಲೋಚಿಸುವುದಕ್ಕೆ ಶುರು ಮಾಡಿಲ್ಲ," ಎಂದು ಹೇಳಿದ್ದಾರೆ.

ಓಮಿಕ್ರಾನ್ ಸೋಂಕಿನ ಭೀತಿ ಲಸಿಕೆ ಪಡೆಯದವರಲ್ಲಿ ಹೆಚ್ಚು

ಓಮಿಕ್ರಾನ್ ಸೋಂಕಿನ ಭೀತಿ ಲಸಿಕೆ ಪಡೆಯದವರಲ್ಲಿ ಹೆಚ್ಚು

ಜಗತ್ತಿನಲ್ಲಿ ಈಗ ಕೊವಿಡ್-19 ಲಸಿಕೆ ಪಡೆದುಕೊಂಡವರಲ್ಲಿ ಓಮಿಕ್ರಾನ್ ಸೋಂಕು ಅಂಟಿಕೊಂಡರೂ, ಸೌಮ್ಯ ರೀತಿಯ ಲಕ್ಷಣಗಳು ಗೋಚರಿಸಬಹುದು. ಅವರ ಮಟ್ಟಿಗೆ ಅದು ಸಾಮಾನ್ಯ ರೋಗದಂತೆ ಗೋಚರಿಸಬಹುದು. ಆದರೆ ಲಸಿಕೆ ಪಡೆಯದವರಿಗೆ ಈ ಓಮಿಕ್ರಾನ್ ಸೋಂಕಿನಿಂದ ಹೆಚ್ಚು ಅಪಾಯ ಎದುರಾಗುವ ಸಾಧ್ಯತೆಗಳಿರುತ್ತವೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆಗಿರುವ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಪ್ರಾಥಮಿಕ ಅಂಕಿ-ಅಂಶಗಳ ಪ್ರಕಾರ, ಈ ಮೊದಲು ಕೊವಿಡ್-19 ಸೋಂಕು ಅಂಟಿಕೊಂಡವರಿಗೆ ಓಮಿಕ್ರಾನ್ ರೂಪಾಂತರಿ ಬೇಗ ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೂಲ ರೋಗಾಣುವಿನ ಜೊತೆ ಹೊಸ ರೋಗಾಣುಗಳು ಕೂಡಿಕೊಳ್ಳುವ ಭೀತಿ ಇರುತ್ತದೆ. ಆದರೆ, ತಜ್ಞರ ಪ್ರಕಾರ, ಬ್ರೆಜಿಲ್ ಮತ್ತು ಭಾರತದಂತಹ ರಾಷ್ಟ್ರಗಳಲ್ಲಿ ಓಮಿಕ್ರಾನ್ ಸೋಂಕಿನ ಹರಡುವಿಕೆಯು ಮತ್ತೊಂದು ಹಂತಕ್ಕೆ ಬಂದು ತಲುಪಿದೆ.

"ಲಸಿಕೆ ಮತ್ತು ವೈರಸ್‌ಗೆ ಒಡ್ಡಿಕೊಳ್ಳುವಿಕೆಯ ಸಂಯೋಜನೆಯು ಕೇವಲ ಲಸಿಕೆಗಿಂತ ಪರಿಣಾಮಕಾರಿ ಎನಿಸುತ್ತದೆ. ಭಾರತವು ವಯಸ್ಕ ಲಸಿಕೆ ಪಡೆದವರ ಪ್ರಮಾಣ ಕೇವಲ ಶೇ.40ರಷ್ಟಿದ್ದು, ಕೆಲವು ಪ್ರದೇಶಗಳಲ್ಲಿ ವೈರಸ್‌ಗೆ ಶೇ.90ರಷ್ಟು ಒಡ್ಡಿಕೊಳ್ಳುತ್ತದೆ," ಎಂದು ಸಾರ್ವಜನಿಕ ಆರೋಗ್ಯ ಸಂಶೋಧಕ ರಮಣನ್ ಲಕ್ಷ್ಮೀನಾರಾಯಣ ಹೇಳಿದ್ದಾರೆ. "ಭಾರತದ ಮೂಲಕ ಓಮಿಕ್ರಾನ್ ಸೋಂಕು ಪ್ರವಾಹದ ರೀತಿ ಹರಡಲಿದೆ. ಲಸಿಕೆ ವಿತರಣೆಯಲ್ಲಿ ಮುಂದಿರುವುದು ಕೊಂಚ ಆಶಾದಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

ಲ್ಯಾಟಿನ್ ಅಮೆರಿಕಾಗೆ ರಷ್ಯಾ, ಚೀನಾ ಲಸಿಕೆಗಳೇ ಗತಿ

ಲ್ಯಾಟಿನ್ ಅಮೆರಿಕಾಗೆ ರಷ್ಯಾ, ಚೀನಾ ಲಸಿಕೆಗಳೇ ಗತಿ

ಲ್ಯಾಟಿನ್ ಅಮೆರಿಕಾದ ಬಹುಪಾಲು ಜನರು ರಷ್ಯಾ ಮತ್ತು ಚೀನಾದ ಕೊವಿಡ್-19 ಲಸಿಕೆಗಳ ಮೇಲೆಯೇ ಅವಲಂಬಿತವಾಗಿವೆ. ಚಿಲಿ ರಾಷ್ಟ್ರದ ಬಹುಪಾಲು ಜನರು ಎರಡು ಲಸಿಕೆಗಳ ಮೇಲೆ ಹೆಚ್ಚು ಅವಲಂಬಿಸಿದ್ದು, ಶೇ.90ರಷ್ಟು ಜನರು ಕೊರೊನಾವ್ಯಾಕ್ ಮತ್ತು ಸಿನೋವ್ಯಾಕ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಓಮಿಕ್ರಾನ್ ವಿರುದ್ಧ ಈ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ಚಿಲಿ ವಿಶ್ವವಿದ್ಯಾನಿಲಯದ ಇಮ್ಯುನೊಲಾಜಿಯ ಪ್ರಾಧ್ಯಾಪಕ ಮಾರಿಯೋ ರೋಸೆಂಬ್ಲಾಟ್ ಹೇಳಿದ್ದಾರೆ.

ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಬ್ರೆಜಿಲ್ ಶಿಫಾರಸ್ಸು

ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಬ್ರೆಜಿಲ್ ಶಿಫಾರಸ್ಸು

ಓಮಿಕ್ರಾನ್ ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಬ್ರೆಜಿಲ್ ಸರ್ಕಾರ ಶಿಫಾರಸ್ಸು ನೀಡಿದೆ. ಫೈಜರ್ ಲಸಿಕೆಯ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದ್ದು, ಶೇ.40ರಷ್ಟು ಜನರು ಮಾತ್ರ ಈವರೆಗೂ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆಯನ್ನೂ ಮೀರಿ ಓಮಿಕ್ರಾನ್ ಸೋಂಕು ಹರಡುವ ಅಪಾಯ ಹೆಚ್ಚಾಗಿದ್ದು, ಇದು ಕಡಿಮೆ ಮತ್ತು ಮಧ್ಯಮ-ಆದಾಯವನ್ನು ಹೊಂದಿರುವ ದೇಶಗಳಿಗೆ ತಲೆನೋವಾಗುತ್ತದೆ. ಏಕೆಂದರೆ ಈ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ಮಾತು ತುಂಬಾ ದೂರದಲ್ಲಿದ್ದು, ಇನ್ನೂ ಮೊದಲ ಡೋಸ್ ಲಸಿಕೆಯನ್ನೇ ನೀಡಲಾಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+