Moringa Leaves Health Benefits: ನುಗ್ಗೆ ಸೊಪ್ಪು ತಿನ್ನೋದರಿಂದ ಆಗುವ ಪ್ರಯೋಜನೆ ತಿಳಿದರೆ ಅಶ್ವರ್ಯಪಡುತ್ತೀರಾ!
ನುಗ್ಗೆ ಸೊಪ್ಪು ಬಹಳ ಪ್ರಾಚೀನ ಕಾಲದಿಂದಲೂ ಇದರ ವಿಶೇಷ ಔಷಧೀಯ ಗುಣಗಳಿಂದ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾದ ಮರ ಇದು. ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದು ಕೆಲವರು ನಂಬಿದ್ದಾರೆ.
ಅಡುಗೆಗೆ ಮಾತ್ರವಲ್ಲದೇ ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು. ನುಗ್ಗೆಕಾಯಿ, ನುಗ್ಗೆ ಸೊಪ್ಪು ಹಲವು ಪೋಷಕಾಂಶಗಳನ್ನು ಹೊಂದಿರುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಒಂದು.

ಆಯುರ್ವೇದದಲ್ಲಿ ಸಹ ಇದನ್ನು ಬಹಳ ವರ್ಷಗಳಿಂದ ಹಲವು ರೋಗಗಳ ಪರಿಹಾರಕ್ಕೆ ಬಳಸಲಾಗುತಿದೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಕಹಿಯ ಅಂಶವಿರುವ ಕಾರಣ ಹಲವಾರು ಜನರು ಸೇವಿಸಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಬಹಳಷ್ಟು ಆರೋಗ್ಯಯುತ ಅಂಶಗಳಿದ್ದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇನ್ನೂ ನುಗ್ಗೆಕಾಯಿ, ನುಗ್ಗೆ ಸೊಪ್ಪು ಹಲವು ಪೋಷಕಾಂಶಗಳನ್ನು ಹೊಂದಿರುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಒಂದಾಗಿದ್ದು, ಆಯುರ್ವೇದದಲ್ಲಿ ಸಹ ಇದನ್ನು ಬಹಳ ವರ್ಷಗಳಿಂದ ಹಲವು ರೋಗಗಳ ಪರಿಹಾರಕ್ಕೆ ಬಳಸಲಾಗುತಿದೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಕಹಿಯ ಅಂಶವಿರುವ ಕಾರಣ ಇಗೀನ ಕಾಲದಲ್ಲಿ ಬಾಯಿ ರುಚಿ ಬಯಸುವ ಹಲವಾರು ಜನರು ಸೇವಿಸಲು ಹಿಂದೆ ಮುಂದೆ ನೋಡುತ್ತಾರೆ.

ಆದರೆ ನುಗ್ಗೆ ಸೊಪ್ಪಿನಲ್ಲಿ ಬಹಳಷ್ಟು ಆರೋಗ್ಯಯುತ ಅಂಶಗಳಿದ್ದು, ಈ ಸೊಪ್ಪು ತಿನ್ನುವುದರಿಂದ ಆಗುವ ಪ್ರಯೋಜನಗಳು ತಿಳಿದರೇ ಖಂಡಿತ ನಿಮಗೆ ಅಶ್ವರ್ಯವಾಗುತ್ತೆ. ಯಾವ ಯಾವ ಆರೋಗ್ಯ ಸಮಸ್ಯೆಗೆ ಇದು ಮದ್ದು ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.
ಇನ್ನೂ ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದೆ. ನುಗ್ಗೆ ಆಂಟಿಫಂಗಲ್, ಆಂಟಿವೈರಲ್, ಖಿನ್ನತೆ ಸೇರಿದಂತೆ ಉರಿಯೂತಗಳನ್ನು ಶಮನ ಮಾಡುವ ಆರೋಗ್ಯಕರ ಗುಣವನ್ನು ಹೊಂದಿದೆ.
ನುಗ್ಗೆ ಸೊಪ್ಪು ಆರೋಗ್ಯಕ್ಕೆ ಮಾತ್ರ ಉಪಯುಕ್ತವಲ್ಲ. ಇದರ ಎಣ್ಣೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ನುಗ್ಗೆ ಸೊಪ್ಪಿನಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಇತ್ಯಾದಿ ಹೆಚ್ಚಿನ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ
ನುಗ್ಗೆ ಸೊಪ್ಪು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಹೆಚ್ಚು ನುಗ್ಗೆ ಸೊಪ್ಪಿನ ಬಳಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಇನ್ನೂ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಮಟ್ಟವಿದ್ದಲ್ಲಿ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ ನುಗ್ಗೆ ಸೊಪ್ಪಿನ ಸೇವನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ದೇಹದ ತೂಕ ಇಳಿಸಲು ಸಹಾಯಕ
ಇನ್ನೂ ಹೆಚ್ಚಾಗಿ ನುಗ್ಗೆ ಸೊಪ್ಪು ಸೇವಿಸುವುದರಿಂದ ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದೇಹದ ತೂಕ ಇಳಿಸುವುದಕ್ಕೂ ಈ ಸೊಪ್ಪು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸನೀರಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ದೇಹದ ತೂಕ ಇಳಿಯಲು ಸಹಾಯಕವಾಗಿದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಹೆಚ್ಚು ರಕ್ತದೊತ್ತಡ ಸಮಸ್ಯೆ ಇರುವವರು ನಿಯಮಿತವಾಗಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗಿದೆ.
ಉತ್ತಮ ಮೂಳೆಗಳ ಆರೋಗ್ಯಕ್ಕೆ
ನುಗ್ಗೆ ಸೊಪ್ಪು ಉತ್ತಮ ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಉರಿಯೂತದ ಗುಣಲಕ್ಷಣಗಳು ಆಸ್ಟಿಯೊಪೊರೋಸಿಸ್ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪು ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದ್ದು, ಇದು ಉತ್ತಮ ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ.
ದೇಹದಲ್ಲಿನ ಹೆಚ್ಚು ಸ್ನಾಯು ಸೆಳೆತ, ನೋವು ಕಂಡು ಬಂದಲ್ಲಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥವನ್ನು ನಿಯಮಿತವಾಗಿ ಸೇವಿಸಿ ನೋಡಿ, ಬೇಗನೆ ನೋವಿನಿಂದ ಮುಕ್ತಿ ಸಿಗುತ್ತದೆ. ಇನ್ನೂ ನುಗ್ಗೆ ಸೊಪ್ಪಿನಲ್ಲಿರುವ ಸಾರಗಳು ಮಲಬದ್ಧತೆ, ಜಠರದಲ್ಲಿ ಕಂಡು ಬರುವ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ರೋಗಗಳಿಗೆ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ವಿಟಮಿನ್ ಬಿ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ನುಗ್ಗೆ ಸೊಪ್ಪಿನ ಅಡ್ಡ ಪರಿಣಾಮಗಳು!
ಕೆಲವರಿಗೆ ನುಗ್ಗೆ ಸೊಪ್ಪು ಕಹಿ ಎಂದು ತಿನ್ನುವುದಿಲ್ಲ. ನುಗ್ಗೆ ಸೊಪ್ಪು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ. ಆದ್ದರಿಂದ ಉಷ್ಣದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಆಮ್ಲತೆ, ರಕ್ತಸ್ರಾವ, ಪೈಲ್ಸ್, ಭಾರೀ ಮುಟ್ಟಿನ ಸಮಸ್ಯೆ, ಮೊಡವೆ ಸಮಸ್ಯೆ ಇರುವವರು ಬೇಸಿಗೆಯಲ್ಲಿ ಇದನ್ನು ತಿನ್ನಬಾರದು.












Click it and Unblock the Notifications