Video: 500 ರೂಪಾಯಿ ನೋಟಿನಲ್ಲಿ ಬೃಹತ್ ಮಾಲೆ ಮಾಡಿಸಿಕೊಂಡ ವರ: ಕದಿಯುವ ಮನಸ್ಸಾದಿತು ಜೋಕೆ....!
ಎಂಥ ಕಾಲ ಬಂತು ನೋಡಿ.. ಇವತ್ತು ನಾಳೆ ದುಡ್ಡು ಇಲ್ದೆ ಇದ್ದರೆ ಜೀವನವೇ ಇಲ್ಲ ಅನ್ನೋ ರೀತಿ ಆಗಿಬಿಟ್ಟಿದೆ. ಹಣ ಇದ್ರೆ ಬಂಧು ಬಳಗ, ಸ್ನೇಹಿತರೆಲ್ಲಾ. ಹಣ ಇದ್ದರೆ ಮಾತ್ರ ಸಂಬಂಧಗಳಿಗೆ ಬೆಲೆ. ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದರೆ ಹಣ ಎಷ್ಟು ಖರ್ಚು ಮಾಡುತ್ತಿದ್ದಾರೆನ್ನುವ ಲೆಕ್ಕಚಾರದ ಮೇಲೆ ಅಲಂಕಾರ ಮಾಡಿಕೊಂಡು ಬರುವವರೇ ಹೆಚ್ಚಾಗಿದ್ದಾರೆ.
ಇನ್ನೂ ಕೆಲವರು ದುಬಾರಿ ಮದುವೆಗಳನ್ನು ಕಣ್ತುಂಬಿಕೊಳ್ಳಲು ಬರುತ್ತಾರೆ. ಇತ್ತೀಚೆಗಂತೂ ನೋಟುಗಳಿಂದ ಕಾರ್ಯಕ್ರಮಗಳ ಸ್ಥಳಗಳನ್ನು ಅಲಂಕಾರ ಮಾಡುವುದು ಹಾಗೂ ನೋಟುಗಳಿಂದಲೇ ಬಟ್ಟೆಯನ್ನು ತಯಾರಿಸಿಕೊಂಡು ಹಾಕಿಕೊಳ್ಳುವುದು ಟ್ರೆಂಡ್ ಆಗಿದೆ. ಅಂಥಹವೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ದೇಸಿ ವರನೊಬ್ಬ ತನ್ನ ಮದುವೆಯಲ್ಲಿ ನೋಟುಗಳಿಂದ ಹಾರವನ್ನು ಮಾಡಿಕೊಂಡು ಹಾಕಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ವರರು ಮದುವೆ ಪಂಟಪಗಳಿಗೆ ಆನೆಗಳು ಅಥವಾ ದುಬಾರಿ ವಾಹನಗಳಲ್ಲಿ ಬರುವ ಮೂಲಕ ನೆರೆದವರನ್ನು ಅಚ್ಚರಿ ಮೂಡಿಸುತ್ತಾರೆ. ಇದೇ ರೀತಿಯಲ್ಲಿ ಪುಟ್ಟ ಹಳ್ಳಿಯೊಂದರ ದೇಸಿ ವರನೊಬ್ಬ ತನ್ನ ಮದುವೆಯ ಸಂಭ್ರಮದಲ್ಲಿ ತನ್ನ ಸಂಪತ್ತನ್ನು ಪ್ರದರ್ಶಿಸಿ ಅಂತರ್ಜಾಲದಲ್ಲಿ ವೈರಲ್ ಆಗಿದ್ದಾನೆ.
ಹೀಗೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಆತ ಹಾಕಿಕೊಂಡ ಹಣದ ಹಾರ. 20 ಲಕ್ಷ ರೂಪಾಯಿಯಿಂದ 500 ರೂಪಾಯಿಯ ನೋಟುಗಳನ್ನು ಅಂದವಾಗಿ ಮಡಚಿ ಈ ಹಾರವನ್ನು ತಯಾರಿಸಲಾಗಿದೆ. ಮದುವೆಗೆ ಬಂದ ಜನ ಅದನ್ನು ಮುಟ್ಟಿ ನೋಡುವ ಮೂಲಕ ಖುಷಿ ಪಟ್ಟಿದ್ದಾರೆ.
ಈ ಬೃಹತ್ ಹಾರವನ್ನು ಹಾಕಿಕೊಂಡ ವರ ಮದುವೆ ವೇದಿಕೆ ಬದಲಿಗೆ ಚಾವಣಿಯಲ್ಲಿ ನಿಂತು ಬಂಧು ಬಳಗದ ಕಡೆಗೆ ಕೈ ಬೀಸಿದ್ದಾನೆ. ನೆಲದಿಂದ ಚಾವಣಿಯವರೆಗೆ ಈ ಮಾಲೆ ವಿಸ್ತರಿಸಿದೆ. ಕ್ಲಿಪ್‌ನ ಶೀರ್ಷಿಕೆಯು ನೋಟಿನ ಮಾಲೆ 20 ಲಕ್ಷ ರೂಪಾಯಿಯದ್ದು ಎಂದು ಹೇಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ.

ವಿಡಿಯೊ 28.6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಪ್ರತಿಕ್ರಿಯೆಗಳನ್ನು ಜನ ನೀಡಿದ್ದಾರೆ. ಶ್ರೀಮಂತಿಕೆಯ ಪ್ರದರ್ಶನ ನೋಡುಗರನ್ನು ಬೆರಗುಗೊಳಿಸಿದೆ. ವರನ ಭವ್ಯವಾದ ಗೆಸ್ಚರ್‌ನಿಂದ ಕೆಲವರು ಆಶ್ಚರ್ಯಪಟ್ಟಿದ್ದಾರೆ.
ಕೆಲವರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ. ಇನ್ನೂ ಹಲವರು ಹಾರದಲ್ಲಿ ಬಳಸಿದ ನೋಟುಗಳು ನಿಜವೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊವನ್ನು Instagram ನಲ್ಲಿ dilshadkhan_kureshipur ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡಾಗಿನಿಂದ 15 ಮಿಲಿಯನ್ ವೀಕ್ಷಣೆಗಳನ್ನು ಮತ್ತು 319,000 ಕ್ಕೂ ಹೆಚ್ಚು ಇಷ್ಟಗಳನ್ನು ವಿಡಿಯೋ ಗಳಿಸಿದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಈ ವಿಡಿಯೋ ಬಗ್ಗೆ ಜನರ ಪ್ರತಿಕ್ರೆಯೆ ಹೇಗಿದೆ ನೋಡಿ:-
"ಇದನ್ನು ಧರಿಸಿದ ನಂತರ ವರ ಹೇಗೆ ನಡೆಯುತ್ತಾನೆ?" ಕಾಮೆಂಟ್ ವಿಭಾಗದಲ್ಲಿ ಬಳಕೆದಾರರನ್ನು ಕೇಳಿದ್ದಾರೆ.
"ನಾವು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕು" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಸಹೋದರ ಈ ಹಣದಿಂದ ಮೊದಲು ನೀವು ನಿಮ್ಮ ಮನೆಯನ್ನು ಸರಿಯಾಗಿ ನಿರ್ಮಿಸಬೇಕು" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications