ವೈರಲ್ ವಿಡಿಯೋ: ಪೋಲಿಗಳಿಗೆ ಪಾಠ ಕಲಿಸಿದ ಮಹಿಳಾ ಬ್ರೂಸ್ಲಿ
ಆಗಾಗ್ಗೆ ಆಸಕ್ತಿದಾಯಕ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ವಿಭಿನ್ನವಾಗಿರುವ ವಿಡಿಯೋಗಳನ್ನು ಜನರು ತುಂಬಾ ಇಷ್ಟಪಟ್ಟು ಶೇರ್ ಮಾಡುತ್ತಾರೆ. ಅಂತಹ ಒಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರೆಸ್ಟೋರೆಂಟ್‌ನಲ್ಲಿ ಇಬ್ಬರು ಗ್ರಾಹಕರಲ್ಲಿ ಒಬ್ಬ ಮಹಿಳಾ ಸಪ್ಲೈಯರ್ ಜೊತೆ ಅನುಚಿತವಾಗಿ ಸ್ಪರ್ಶಿಸುವುದು ಕಂಡುಬರುತ್ತದೆ. ಅವನ ಈ ಕ್ರಿಯೆಯ ಪ್ರತಿಕ್ರಿಯೆ ತುಂಬಾ ಕೆಟ್ಟದಾಗಿರುತ್ತದೆ ಎಂದು ಆತ ಯೋಚಿಸಿರಲಿಲ್ಲ. ಮತ್ತೊಮ್ಮೆ ಈ ರೀತಿ ವರ್ತಿಸಲೂ ಆತ ನೂರು ಬಾರಿ ಯೋಚಿಸುವುದಂತು ಸುಳ್ಳಲ್ಲ.
ರೆಸ್ಟೋರೆಂಟ್‌ನಲ್ಲಿ ಗ್ರಾಹಕನೊಬ್ಬ ಮಹಿಳಾ ಸಪ್ಲೈಯರ್ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಅಷ್ಟೇ ತಕ್ಷಣ ಆಕೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾಳೆ. ಆತನೊಂದಿಗೆ ಬಂದಿದ್ದ ಮತ್ತೊಬ್ಬ ಗ್ರಾಹಕನೊಬ್ಬ ಆಕೆಯ ಮೇಲೆ ದಾಳಿಗೆ ಮುಂದಾಗುತ್ತಾನೆ. ಚೇರಿನಿಂದ ದಾಳಿಗೆ ಮಾಡುತ್ತಾನೆ. ಮಹಿಳೆ ಆತನನ್ನು ಬಿಟ್ಟಿಲ್ಲ. ಮೈಚಳಿ ಬಿಡುವಂತೆ ಥಳಿಸಿದ್ದಾಳೆ.

ಮಹಿಳೆಯ ಸಾಹಸವನ್ನು ಮೆಚ್ಚಿದ ಮಂದಿ
ಟ್ವಿಟ್ಟರ್ ಖಾತೆ @TansuYegen ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಜೂನ್ 10 ರಂದು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 4.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 54 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ. 215.1k ಜನರು ಇದನ್ನು ಇಷ್ಟಪಟ್ಟಿದ್ದಾರೆ. ವಿಡಿಯೋದಲ್ಲಿ ಮಹಿಳೆ ತನ್ನ ಆತ್ಮರಕ್ಷಣೆಯನ್ನು ಕಂಡು ಜನ ದಂಗಾಗಿದ್ದಾರೆ. ಜೊತೆಗೆ ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಇಬ್ಬರು ಗ್ರಾಹಕರಿಂದ ಅನುಚಿತ ವರ್ತನೆ
ರೆಸ್ಟೋರೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ. ಮಹಿಳಾ ಪೂರೈಕೆದಾರಳು ಇಬ್ಬರು ಗ್ರಾಹಕರಿಗೆ ಆಹಾರವನ್ನು ನೀಡಲು ಮೇಜಿನ ಬಳಿಗೆ ತಲುಪುವುದನ್ನು ವಿಡಿಯೊದಲ್ಲಿ ಕಾಣಬಹುದು. ಇವರಲ್ಲಿ ಒಬ್ಬ ಹುಡುಗ ಹುಡುಗಿಯ ಬೆನ್ನನ್ನು ಮುಟ್ಟಲು ಪ್ರಾರಂಭಿಸುತ್ತಾನೆ. ಈ ವೇಲೆ ಅವಳು ಮೇಜಿನ ಮೇಲೆ ಆಹಾರವನ್ನು ನೀಡುತ್ತಿರುತ್ತಾಳೆ. ಹುಡುಗಿ ಅವನ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದಿಲ್ಲ. ತಕ್ಷಣ ಅವಳು ಏನು ಮಾಡುತ್ತಾಳೆಂದು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

'ಸ್ತ್ರೀ ಬ್ರೂಸ್ ಲೀ' ಎಂದ ನೆಟ್ಟಿಗರು
ಕೋಪಗೊಂಡ ಮಹಿಳೆ ತಕ್ಷಣ ಮೈಮೇಲೆ ಕೈ ಹಾಕಲು ಬಂದವನಿಗೆ ಗೂಸಾ ಕೊಟ್ಟಿದ್ದಾಳೆ. ಹುಡುಗರ ಸ್ಥಿತಿ ನೋಡಿ ನೆಟ್ಟಿಗರು ಮನಬಂದಂತೆ ನಗಾಡಿದ್ದಾರೆ. ಮಹಿಳೆಯ ಪಂಜಿಗೆ ಹುಡುಗರಿಬ್ಬರು ಹಾರಿ ಬಿದ್ದಿದ್ದಾರೆ. ಇನ್ನೊಬ್ಬ ಗ್ರಾಹಕ ಆಕೆಯ ಮೇಲೆ ಕುರ್ಚಿಯನ್ನು ಎಸೆಯುತ್ತಾನೆ. ಆದರೆ ಅವನು ಹಿಂದೆ ಹೋಗಿ ಬೀಳುವಷ್ಟು ಬಲವಾಗಿ ಅವಳು ಅವನನ್ನು ಒದೆಯುತ್ತಾಳೆ. ಹುಡುಗಿಯ ಮಾರ್ಷಲ್ ಆರ್ಟ್ಸ್ ನೋಡಿದ ಜನರು ಆಕೆಗೆ ಸ್ತ್ರೀ ಬ್ರೂಸ್ ಲೀ ಎಂದು ಹೆಸರಿಟ್ಟರು. ಜನ ಅವರನ್ನು ತುಂಬಾ ಹೊಗಳುತ್ತಿದ್ದಾರೆ. ಆದರೆ ಈ ವಿಡಿಯೋ ಎಲ್ಲಿಯದೆಂದು ತಿಳಿದು ಬಂದಿಲ್ಲ.
|
ಸ್ಪೂರ್ತಿಯಾದ ಮಹಿಳೆ
ಮನೆಯ ಪರಿಸ್ಥಿತಿ, ಸ್ವಾವಲಂಬಿ ಜೀವನಕ್ಕಾಗಿ ಹಲವಾರು ಮಹಿಳೆಯರು ಕೆಲಸಕ್ಕೆ ಹೋಗುವ ಮೂಲಕ ತಮ್ಮ ಜೀವನ ಕಟ್ಟಿಕೊಂಡಿರುತ್ತಾರೆ. ಈ ವೇಳೆ ಅವರ ರಕ್ಷಣೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಗಲು ರಾತ್ರಿಯನ್ನದೆ ದುಡಿಯುವ ಮಹಿಳೆಯರು ಅನುಚಿತ ವರ್ತನೆಗಳಿಂದ ಪಾರಾಗಲು ಕೆಲವೊಮ್ಮೆ ಸ್ವಯಂ ರಕ್ಷಣೆಗೆ ಮುಂದಾಗಬೇಕಾಗುತ್ತದೆ. ಈ ವೇಳೆ ಅವರ ಬುದ್ಧಿವಂತಿಕೆ, ಕೆಲವೊಮ್ಮೆ ಬಲಪ್ರಯೋಗ ಅವರನ್ನು ಕಾಪಾಡಬಹುದು. ಜೊತೆಗೆ ಕಾಮುಕರಿಗೆ ಪಾಠ ಕೂಡ ಕಲಿಸಬಹುದು ಅನ್ನೋದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.












Click it and Unblock the Notifications