ಥೇಟ್ ಬಿಎಂಡಬ್ಲ್ಯೂ ರೀತಿಯ ಮಾರುತಿ ಸುಜುಕಿಯ ಕಾರು ಶೀಘ್ರದಲ್ಲೆ ಬಿಡುಗಡೆ-ವಿಶೇಷತೆ & ದರಗಳ ಮಾಹಿತಿ ತಿಳಿಯಿರಿ?
ಕಾಲ ಬದಲಾದಂತೆ ಜನರು ಚೇಂಜ್ ಕೇಳ್ತಾರೆ. ಇನ್ನು ಆಟೋ ಮೊಬೈಲ್ ಕ್ಷೇತ್ರದಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಹೊಸ ಬದಲಾವಣೆಗಳು ಆಗುತ್ತಲೇ ಇವೆ. ಇನ್ನು ಇದೀಗ ಥೇಟ್ ಬಿಎಂಡಬ್ಲ್ಯೂ ಕಾರನ್ನು ಹೋಲುವ ಮಾರುತಿ ಸುಜುಕಿಯ ಕಾರೋಂದು ಗ್ರಾಹಕರ ಕೈಟಕುವ ದರದಲ್ಲಿ ಮಾರುಕಟ್ಟೆಗೆ ಬರಲಿದೆ. ಹಾಗಾದರೆ ಈ ಕಾರಿನ ವಿಶೇಷತೆಗಳು ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಾಲ್ಕಿ ವೀಲರ್ ವಾಹನಗಳಲ್ಲಿ ಹೆಸರುವಾಸಿಯಾಗಿರುವ ಮಾರುತಿ ಸುಜುಕಿ ಕಂಪನಿಯು ಹೊಸ ವಿನ್ಯಾಸದಲ್ಲಿ ಕಾರನ್ನು ತಯಾರು ಮಾಡಿ ಗ್ರಾಹಕರನ್ನು ಸೆಳೆಯು ಪ್ರಯತ್ನ ಮಾಡುತ್ತಿದೆ. ಇದೀಗ ಹೊಸ ವಿನ್ಯಾಸದ, ಥೇಟ್ ಬಿಎಂಡಬ್ಲ್ಯೂ ಕಾರನ್ನು ಹೋಲುವ ಮಾರುತಿ ಸುಜುಕಿ ಫ್ರಾಂಕ್ಸ್ ಎಯುವಿ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದರ ಬೆಲೆ ಬರೀ 8,00,000 ರೂಪಾಯಿ ಇರಲಿದೆ ಎನ್ನುವ ಮಾಹಿತಿ ಇದೆ.

ಎಸ್‌ಯುವಿ ವಿಭಾಗದ ಸುಜುಕಿ ಫ್ರಾಂಕ್ಸ್ ಕಾರಿನ ಇಂಧನ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಪನಿ ಮಾಡಿಲ್ಲ. ಇದು 1.2 ಲೀಟರ್ CNG ಇಂಜಿನ್ ಮತ್ತು 1 ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಒದಗಿಸುತ್ತದೆ. 1 ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 30 ಕಿಲೋ ಮೀಟರ್ ಮೈಲೇಜ್ ಕೊಡುವ ಸಾಮರ್ಥ್ಯವನ್ನು ಈ ಕಾರು ಹೊಂದಿದೆ.
ಮಾರುತಿ ಸುಜುಕಿ ಕಂಪನಿಯ ಸಾಕಷ್ಟು ನೂತನ ವಿನ್ಯಾಸದ ಕಾರುಗಳನ್ನು ಬಿಡುಗಡೆ ಮಾಡುತ್ತಾಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿನಲ್ಲಿ 9 ಇಂಚಿನ ಟಚ್ ಸ್ಕ್ರೀನ್, ಕ್ಲೈಮೇಟ್ ಕಂಟ್ರೋಲರ್, ವಯರ್ಲೆಸ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಹ್ಯಾಂಡ್ ಅಪ್ ಡಿಸ್‌ಪ್ಲೇ, ಉತ್ತಮ ದರ್ಜೆಯ ಸೀಟ್‌ಗಳು, ನಾಲ್ಕು ಏರ್‌ಬ್ಯಾಗ್‌ಗಳು ಸೇರಿದಂತೆ ಇನ್ನಿತರ ಆಯ್ಕೆಗಳು ಈ ಕಾರಿನಲ್ಲಿವೆ.
ಆದರೆ ಮಾರುತಿ ಸುಜುಕಿ ಕಂಪನಿ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಅಧಿಕೃತ ದರವನ್ನು ಇನ್ನು ಬಿಡುಗಡೆ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ, ಈ ಕಾರಿನ ದರ ಸುಮಾರು 7.46 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಅಧಿಕೃತ ದರದ ಮಾಹಿತಿ ಬರುವವರೆಗೂ ಕಾಯಬೇಕಿದೆ. ಆದರೆ ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್‌ಜಿ ಕಾರನ್ನು ಕೇವಲ 8,00,000 ರೂಪಾಯಿಗಳಿಗೆ ನೀಡಲು ಕಂಪನಿ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದೇಶದಲ್ಲಿ ಮಾರುತಿ ಸುಜುಕಿ ಕಂಪನಿಯು ಹೊಸ ಹೊಸ ವಿನ್ಯಾಸದ ಕಾರು ಬಿಡುಗಡೆ ಮೂಲಕ ಮೊದಲಿನಿಂದಲೂ ಹೆಸರುವಾಸಿಯಾಗುತ್ತಾ ಗ್ರಾಹಕರವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹಾಗೆಯೇ ಈಗಲೂ ಸಹ ಕೈಗೆಟಕುವ ದರದಲ್ಲು ಉತ್ತಮ ದರ್ಜೆಯ, ನೂತನ ವಿನ್ಯಾಸದ ಕಾರುಗಳನ್ನು ಬಿಡುವ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನೆಡೆಗೆ ಸೆಳೆಯುತ್ತಿದೆ.












Click it and Unblock the Notifications