Maruti Suzuki: ಭಾರತದ ಮಾರುಕಟ್ಟೆಗೆ ಕಾಲಿಟ್ಟ ಹೊಸ ಸ್ವಿಫ್ಟ್: ಬೆಲೆ ಎಷ್ಟು ಗೊತ್ತಾ?
ದೇಶದ ಕಾರು ಉತ್ಪಾದನ ವಲಯದಲ್ಲಿ ತನ್ನ ಗುರುತನ್ನು ಹೊಂದಿರುವ ಮಾರುತಿ ಸುಜುಕಿ ಕಂಪನಿ ತನ್ನ ಮತ್ತೊಂದು ಆಕರ್ಷಕ ಕಾರ್‌ನ್ನು ಮಾರುಕಟ್ಟೆಗೆ ರಿಲೀಸ್ ಮಾಡಿದೆ. ಈ ಕಾರ್ ಲುಕ್ ಸಖತ್ ಆಗಿದ್ದು, ಪ್ರಿ ಬುಕ್ಕಿಂಗ್‌ನಲ್ಲೇ ಭಾರೀ ಸದ್ದು ಮಾಡಿತ್ತು. ಮಾರುತಿ ಸುಜುಕಿ ತನ್ನ 4ನೇ ಜನರೇಷನ್ ಸ್ವಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಕಾರ್ ನೋಡಲು ಅಷ್ಟೇ ಅಂದವಾಗಿಲ್ಲ. ಇದರ ಮೈಲೇಜ್ ಸಹ ಸೂಪರ್ ಆಗಿದೆ. ಹೊಸ ಸ್ವಿಫ್ಟ್ Z ಸರಣಿಯ ಕಾರ್‌ಗಳು ಪೆಟ್ರೋಲ್ ಎಂಜಿನ್ ಹೊಂದಿದ್ದು ಅದು ಶೇಕಡಾ 14 ರಷ್ಟು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಇನ್ನು ಭಾರತದ ಮಾರುಕಟ್ಟೆಯಲ್ಲಿ ಸುಜುಕಿ ತನ್ನ ಮೊದಲ ಜನರೇಷನ್ ಸ್ವಿಫ್ಟ್ ಕಾರ್‌ನ್ನು 2005ರಲ್ಲಿ ಬಿಡುಗಡೆ ಮಾಡಿತ್ತು. ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನದೇ ಹೆಜ್ಜೆಗುರುತು ಹೊಂದಿರುವ ಸ್ವಿಫ್ಟ್ 3 ಮಿಲಿಯನ್ ಗ್ರಾಹಕರನ್ನು ಖುಷಿ ಪಡಿಸಿದೆ.

ಹೊಸ ಸ್ವಿಫ್ಟ್ ಕಾರ್ ಬೆಲೆ ಎಷ್ಟು?
ಸ್ವಿಫ್ಟ್ ಕಾರುಗಳು ಭಾರತಕ್ಕೆ ಕಾಲಿಟ್ಟು 19 ವರ್ಷಗಳೇ ಕಳೆದಿವೆ. ಇನ್ನು ಕಂಪನಿಗೆ ಭಾರತೀಯ ಮಾರುಕಟ್ಟೆಯ ಮಹತ್ವ ಅರಿವಿದೆ. ಹೊಸ ಸ್ವಿಫ್ಟ್ ತಯಾರಿಸಲು ಕಂಪನಿಯು 1450 ಕೋಟಿ ರೂ. ಹೂಡಿದೆ. ಉತ್ತಮ ಇಂಧನ ದಕ್ಷತೆ ಮತ್ತು ತಂತ್ರಜ್ಞಾನದ ವೈಶಿಷ್ಟ್ಯಗಳ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 6.49 ಲಕ್ಷ ರೂ.ಗಳ ಆರಂಭಿಕ ಎಕ್ಸ್ ಶೋ ರೂಂ ಬೆಲೆಯಲ್ಲಿ ಗ್ರಾಹಕರ ಕೈಗೆಟಕಲಿದೆ. ಹಳೆಯ ಸ್ವಿಫ್ಟ್‌ಗೆ ಹೋಲಿಸದರೆ ಹೊಸ ಸ್ವಿಫ್ಟ್‌ನ ಲುಕ್ ಉತ್ತಮವಾಗಿದೆ. ಇನ್ನು ಇದರ ಇನ್ ಡಿಸೈನ್ ಕಪ್ಪು ಬಣ್ಣದಿಂದ ಕೂಡಿದೆ. ಅಲ್ಲದೆ ಚಾಲನೆಯ ಗುಣಮಟ್ಟವನ್ನು ಸುಧಾರಿಸಲು ಕಂಪನಿಯು ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿದೆ.
ಹೊಸ ಎಪಿಕ್ ಸ್ವಿಫ್ಟ್ ಅನ್ನು ನೋವೆಲ್ ಆರೆಂಜ್ ಮತ್ತು ಲುಸ್ಟರ್ ಬ್ಲೂಗಳಂತಹ ಎರಡು ಹೊಸ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡಲಾಗಿದೆ. ನೀವು ಹೊಸ ಸ್ವಿಫ್ಟ್ ಅನ್ನು ತಿಂಗಳಿಗೆ 17,436 ರೂಗಳ ಸಬ್‌ಸ್ಕ್ರಿಪ್ಚನ್ ಮಾಡೆಲ್‌ನಲ್ಲೂ ಲಭ್ಯ.
ಈ ಕಾರ್ ಮೈಲೇಜ್ ಎಷ್ಟು ನೀಡುತ್ತದೆ?
ಹೊಸ ಸ್ವಿಫ್ಟ್ ಹೊಸ Z ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅದು 82hp ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ AMT ಗೇರ್ ಬಾಕ್ಸ್ ಹೊಂದಿದೆ. ಈ ಕಾರ್ ಮ್ಯಾನುವಲ್ ಗೇರ್ ಬಾಕ್ಸ್‌ನಲ್ಲಿ 24.8kmpl ಮತ್ತು ಎಎಂಟಿಯಲ್ಲಿ 25.75 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ಸ್ವಿಫ್ಟ್‌ನ ಎಲ್ಲಾ ರೂಪಾಂತರಗಳು 6 ಏರ್‌ಬ್ಯಾಗ್‌ಗಳು, 3 ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ESC, EBD ಜೊತೆಗೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
ಮಾರುತಿ ಸುಜುಕಿಯ ಹೊಸ ಸ್ವಿಫ್ಟ್‌ನ ಎಕ್ಸ್ ಶೋ ರೂಂ ಬೆಲೆ 6.49 ಲಕ್ಷದಿಂದ 9.64 ಲಕ್ಷದವರೆಗೆ ಆಗಿರಲಿದೆ. ಇದು LXi, VXi, VXi (O), ZXi, ZXi+ ಮತ್ತು ZXi+ ಡ್ಯುಯಲ್ ಟೋನ್ ಅನ್ನು ಒಳಗೊಂಡಿರುವ 6 ರೂಪಾಂತರಗಳಲ್ಲಿ ಲಭ್ಯ.
ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಕ್ಸ್ ರೂಂ ಬೆಲೆ
| ಹೊಸ ಸ್ವಿಫ್ಟ್ LXi MT | 6,49,000 ರೂ |
| ಹೊಸ ಸ್ವಿಫ್ಟ್ VXi MT | ರೂ 7,29,500 |
| ಹೊಸ ಸ್ವಿಫ್ಟ್ VXi AMT | 7,79,500 ರೂ |
| ಹೊಸ ಸ್ವಿಫ್ಟ್ VXi (O) MT | ರೂ 7,56,500 |
| ಹೊಸ ಸ್ವಿಫ್ಟ್ VXi (O) AMT | ರೂ 8,06,500 |
| ಹೊಸ ಸ್ವಿಫ್ಟ್ ZXi MT | 8,29,500 ರೂ |
| ಹೊಸ ಸ್ವಿಫ್ಟ್ ZXi AMT | 8,79,500 ರೂ |
| ಹೊಸ ಸ್ವಿಫ್ಟ್ ZXi (O) MT | ರೂ 8,99,500 |
| ಹೊಸ ಸ್ವಿಫ್ಟ್ ZXi (O) AMT | ರೂ 9,49,500 |












Click it and Unblock the Notifications