ಮಂಚದ ಜೊತೆ ಡ್ಯಾನ್ಸ್ ಮಾಡಿದ ವ್ಯಕ್ತಿ: ಬಿದ್ದು ಬಿದ್ದು ನಕ್ಕ ನೆಟ್ಟಿಗರು- ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಶೈಲಿಯ ನೃತ್ಯವೊಂದು ವೈರಲ್ ಆಗಿದೆ. ಇದನ್ನು ಕಂಡು ಜನ ಹೊಟ್ಟೆಹುಣ್ಣಾಗುವಷ್ಟು ನಗಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಸಿರಿಯಸ್‌ ವಿಚಾರಗಳಿಂದ ರೂಮರ್ಸ್ ವರೆಗೆ ಅಂತರ್ಜಾಲದಲ್ಲಿ ಇಲ್ಲದಂತಹ ವಿಷಯಗಳಿಲ್ಲ. ಸದ್ಯಕ್ಕೆ ಮದುವೆ ಸೀಸನ್ ಮುಗಿದಿದೆ. ಹಿಂದೆ ಮದುವೆಯ ಚಿತ್ರಗಳು ಮತ್ತು ವಿಡಿಯೊಗಳು ಮಾತ್ರ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದವು. ಆದರೀಗ ವಿಭಿನ್ನ ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿವೆ.

ಸಾಮಾನ್ಯವಾಗಿ ತಮ್ಮ ಮದುವೆ ಸಮಾರಂಭಗಳಲ್ಲಿ ಸ್ನೇಹಿತರು ಹಾಗೂ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಬೇಕು. ಮದುವೆ ನೋಡಿ ಖುಷಿ ಪಡಬೇಕು ಅನ್ನೋದು ಎಲ್ಲರ ಆಸೆ. ಇದರೊಂದಿಗೆ ಮೋಜು ಮಸ್ತಿಗೂ ಕೂಡ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಹೀಗೊಂದು ವಿಡಿಯೋದಲ್ಲಿ ಅತಿಥಿಗಳನ್ನು ರಂಜಿಸಲು ಏರ್ಪಡಿಸಲಾಗಿದ್ದ ನೃತ್ಯದಲ್ಲಿ ವಿಶೇಷ ಪ್ರತಿಭೆಯೊಂದು ಬೆಳಕಿಗೆ ಬಂದಿದೆ. ಈ ವಿಡಿಯೋವನ್ನು ನೋಡಿದ ಜನ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ. ಮದುವೆ ಸಮಾರಾಂಭದಲ್ಲಿ ವಿಭಿನ್ನ ಉಡುಪು ಧರಿಸಿದ ಗುಂಪಿನಲ್ಲಿದ್ದ ನೃತ್ಯಗಾರನೊಬ್ಬ ಮಂಜದೊಂದಿಗೆ ನೃತ್ಯ ಮಾಡಿದ್ದಾನೆ.

ಸಾಮಾನ್ಯವಾಗಿ ನೃತ್ಯ ಮಾಡುವಾಗ ಕುರ್ಚಿ, ಪೊರಕೆ ಇನ್ನಿತರ ವಸ್ತುಗಳನ್ನು ಹಿಡಿದು ನೃತ್ಯ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿಭಿನ್ನ ಶೈಲಿಯಲ್ಲಿ ನೃತ್ಯ ಮಾಡಿದ್ದು ನೋಡುಗರನ್ನು ಬೆರಗುಗೊಳಿಸಿದ್ದಾನೆ. ಮಂಚದ ಮೇಲೆ ಕುಳಿತು ಮಂಚದೊಂದಿಗೆ ಸ್ಟೆಪ್ ಹಾಕಿದ್ದಾನೆ. ಮ್ಯೂಸಿಕ್‌ಗೆ ತಕ್ಕಂತೆ ಆಗಾಗ ಅವನೊಂದಿಗೆ ಪದೇ ಪದೇ ಮಂಚ ಎತ್ತುತ್ತಾನೆ. ಇದು ನೋಡುಗರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದೆ.

Man danced with couch: Video Viral

ಖತಿಯಾ ನೃತ್ಯ ವೈರಲ್

'ಡ್ಯಾನ್ಸ್ ಎಷ್ಟು ತಮಾಷೆಯಾಗಿರುತ್ತದೆಯೋ ಅಷ್ಟು ಮಜವಾಗಿದೆ' ಎಂಬ ಶೀರ್ಷಿಕೆಯನ್ನು ಬರೆದು ಹಂಚಿಕೊಳ್ಳಲಾಗಿದೆ. ಈ ತಮಾಷೆಯ ವಿಡಿಯೋವನ್ನು ಕ್ಲಾಸಿಪೀಪೋಫ್ ಪಾಕಿಸ್ತಾನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಸಾವಿರಾರು ಜನರು ಇಷ್ಟಪಟ್ಟಿದ್ದಾರೆ ಮತ್ತು ಅನೇಕರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನಂತರ ಬಳಕೆದಾರರು ತುಂಬಾ ತಮಾಷೆಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ಈ ನೃತ್ಯವನ್ನು ನೋಡಿದ ಅನೇಕ ಜನರು ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ. ಈ ಡ್ಯಾನ್ಸ್ ಕ್ಲಿಪ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+