Male Infertility: ಆರೋಗ್ಯಕರ ಆಹಾರ ಪದ್ಧತಿ ಪುರುಷರ ಫಲವತ್ತತೆ ಹೆಚ್ಚಿಸಬಹುದೇ?
ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿರುವಾಗಲೇ ಪುರುಷ ಬಂಜೆತನವೆಂಬುದು ಹೆಚ್ಚು ಪ್ರಚಲಿತದಲ್ಲಿರುವ ಸಮಸ್ಯೆಯಾಗಿ ಕಾಡುತ್ತಿದ್ದು, ಇದರ ನಿವಾರಣೆಗೆ ಸೂಕ್ತ ಗಮನ ನೀಡುವುದು ಮತ್ತು ಪೂರ್ವಭಾವಿ ಪರಿಹಾರಗಳನ್ನು ಬಯಸುತ್ತದೆ. ಪುರುಷ ಬಂಜೆತನಕ್ಕೆ ಕಾರಣವಾಗುವ ಹಲವಾರು ಅಂಶಗಳ ಸಂಶೋಧನೆಯು ಇನ್ನೂ ಪ್ರಗತಿಯಲ್ಲಿರುವ ಈ ಸಂದರ್ಭದಲ್ಲಿ ಸಮತೋಲಿತ ಆಹಾರ ಯೋಜನೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.
ನಾವು ಸೇವಿಸುವ ಆಹಾರವು ನಮ್ಮ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಒಳಗೊಂಡಂತೆ ನಮ್ಮ ಸಾಮಾನ್ಯ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಪುರುಷ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಮತ್ತು ಉತ್ತಮ ಜೀವನದ ಭವಿಷ್ಯದ ಬಾಗಿಲು ತೆರೆದುಕೊಳ್ಳಬಹುದಾಗಿದೆ.

ಪೌಷ್ಟಿಕಾಂಶಗಳ ಕೊರತೆ, ಆಕ್ಸಿಡೇಟಿವ್ ಒತ್ತಡ, ಹಾರ್ಮೋನ್ ಗಳಲ್ಲಿನ ಅಸಮತೋಲನ ಮತ್ತು ಸಾಮಾನ್ಯ ವೀರ್ಯ ಗುಣಮಟ್ಟವು ಆಹಾರ ಮತ್ತು ಪುರುಷ ಫಲವತ್ತತೆಯ ನಡುವಿನ ಸಂಬಂಧಗಳೊಂದಿಗೆ ಬೆಸೆದುಕೊಂಡಿದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್ ಗಳು ಹಾಗೂ ಆರೋಗ್ಯಕರ ಕೊಬ್ಬುಗಳಿಂದ ಕೂಡಿದ ಸಮತೋಲಿತ ಆಹಾರಗಳ ಸೇವನೆಯಿಂದ ಅಗತ್ಯವಾದ ಪೋಷಕಾಂಶಗಳು, ಆಂಟಿಆಕ್ಸಿಡೆಂಟ್ ಗಳು ಮತ್ತು ಫೈಟೋಕೆಮಿಕಲ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಸಂತಾನೋತ್ಪತ್ತಿ ಆರೋಗ್ಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಆಹಾರಗಳು ವ್ಯಕ್ತಿಯಲ್ಲಿ ಉತ್ತಮ ವೀರ್ಯ ಉತ್ಪಾದನೆ, ಚಲನಶೀಲತೆ ಮತ್ತು ರೂಪವಿಜ್ಞಾನವನ್ನು ಉತ್ತೇಜಿಸುತ್ತದೆ.
ಅತ್ಯುತ್ತಮವಾದ ಹಣ್ಣುಗಳು ಮತ್ತು ತರಕಾರಿಗಳ ಸಮೃದ್ಧತೆಯು ಫಲವತ್ತತೆಯನ್ನು ಹೆಚ್ಚಿಸುವ ಆಹಾರದ ಮೊದಲ ತತ್ತ್ವವಾಗಿದೆ. ಸಾವಯವ ಶಕ್ತಿ ಕೇಂದ್ರಗಳೆನಿಸಿರುವ ಈ ಉತ್ಪನ್ನಗಳು ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಇ ಹಾಗೂ ಇತರ ಆಂಟಿಆಕ್ಸಿಡೆಂಟ್ ಗಳ ಪ್ರಮಾಣ ಹೆಚ್ಚಾಗಿರುತ್ತದೆ. ಇದು ವೀರ್ಯದ ಡಿಎನ್ಎ ಗೆ ಹಾನಿಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಬೆರ್ರಿ, ಸಿಟ್ರಸ್ ಅಂಶವಿರುವ ಹಣ್ಣುಗಳು, ಪಾಲಕ್ ಸೊಪ್ಪು ಮತ್ತು ಕೋಸುಗೆಡ್ಡೆಯಂತಹ ಆಂಟಿಆಕ್ಸಿಡೆಂಟ್ ಗಳಲ್ಲಿನ ಹೆಚ್ಚಿನ ಆಹಾರಗಳನ್ನು ಒಳಗೊಂಡಿರುವ ಆರೋಗ್ಯಕರವಾದ ವೀರ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಅಸಹಜ ವೀರ್ಯ ಬೆಳವಣಿಗೆಯಿಂದ ರಕ್ಷಣೆ ನೀಡುತ್ತದೆ.
ಕಂದು ಬಣ್ಣದ ಅಕ್ಕಿ, ಕ್ವಿನೋವಾ ಮತ್ತು ಓಟ್ಸ್ ನಂತಹ ಧಾನ್ಯಗಳಲ್ಲಿ ಸಂಕೀರ್ಣವಾದ ಕಾರ್ಬೋಗಳು, ಫೈಬರ್ ಗಳು ಮತ್ತು ಪ್ರಮುಖ ಬಿ ವಿಟಮಿನ್ ಗಳು ಕಂಡುಬರುತ್ತವೆ. ಈ ಪೋಷಕಾಂಶಗಳು ಹಾರ್ಮೋನ್ ಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಆರೋಗ್ಯಕರವಾದ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹ ನೆರವಾಗುತ್ತವೆ. ರಕ್ತದಲ್ಲಿರುವ ಸಕ್ಕರೆ ನಿರ್ವಹಣೆಗೂ ನೆರವಾಗುವುದರ ಜೊತೆಗೆ ಧಾನ್ಯಗಳು ಫಲವತ್ತತೆಯನ್ನು ಸುಧಾರಣೆ ಮಾಡಬಹುದಾಗಿದೆ. ಏಕೆಂದರೆ, ಹೆಚ್ಚಿನ ಸಕ್ಕರೆ ಸೇವನೆಯು ಹಾರ್ಮೋನ್ ಗಳ ಸಮತೋಲನವನ್ನು ಅಸ್ತವ್ಯಸ್ತಗೊಳಿಸುತ್ತದೆ.

ಪ್ರೋಟೀನ್ ನ ನೇರ ಮೂಲಗಳೆನಿಸಿರುವ ಮೀನು, ಕೋಳಿ, ಬೀನ್ಸ್, ಕಾಳುಗಳು ಪುರುಷರ ಫಲವತ್ತತೆಗೆ ಉತ್ತಮ ಅಡಿಪಾಯವನ್ನು ಒದಗಿಸುತ್ತವೆ. ಈ ಆಹಾರಗಳು ಪ್ರಮುಖವಾಗಿ ಅಮೈನೋ ಆಮ್ಲಗಳನ್ನು ಒದಗಿಸುತ್ತವೆ. ಇದು ವೀರ್ಯದ ಉತ್ಪಾದನೆಗೆ ಬಿಲ್ಡಿಂಗ್ ಬಾಕ್ಸ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತದೆ. ಸಾಲ್ಮನ್ ಮತ್ತು ಸಾರ್ಡೀನ್ ಗಳಂತಹ ಸಮುದ್ರಾಹಾರದಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ವೀರ್ಯ ಪೊರೆಯಲ್ಲಿನ ಚಲನಶೀಲತೆ ಮತ್ತು ರಚನಾತ್ಮಕ ಸಮಗ್ರತೆಗೂ ಸಹ ಅನುಕೂಲ ಮಾಡಿಕೊಡುತ್ತದೆ
ಇವುಗಳ ಬಗ್ಗೆ ಆಗಾಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದರೂ ಸಹ, ಪುರುಷ ಸಂತಾನೋತ್ಪತ್ತಿ ಆರೋಗ್ಯಕ್ಕೆ ಆರೋಗ್ಯಕರವಾದ ಕೊಬ್ಬುಗಳು ಅತ್ಯಗತ್ಯವಾಗಿವೆ. ಅವಕಾಡೊಗಳು, ಆಲಿವ್ ಎಣ್ಣೆ ಮತ್ತು ಬಾದಾಮಿಗಳಲ್ಲಿರುವ ಮೋನೋಸ್ಯಾಚುರೇಟೆಡ್ ಮತ್ತು ಬಹು ಅಪರ್ಯಾಪ್ತ ಕೊಬ್ಬುಗಳನ್ನು ಸೇವನೆ ಮಾಡುವುದರಿಂದ ಹಾರ್ಮೋನ್ ನ ಸಮತೋಲನವನ್ನು ಕಾಪಾಡುವುದರ ಜೊತೆಗೆ ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ಈ ಕೊಬ್ಬುಗಳು ಕೊಬ್ಬು-ಕರಗಬಲ್ಲಂತಹ ಜೀವಸತ್ವಗಳ ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ. ಫಲವತ್ತತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಪರಿಣಾಮಕಾರಿ ಗುಣವನ್ನು ಹೆಚ್ಚಿಸುತ್ತದೆ.
ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಆಹಾರವು ಮ್ಯಾಜಿಕ್ ಫಿಕ್ಸ್ ಆಗಿರುವುದಿಲ್ಲ. ಆದರೆ, ಆರೋಗ್ಯಕರವಾದ ಜೀವನಶೈಲಿಯ ಅಗತ್ಯ ಅಂಶವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಪುರುಷ ಬಂಜೆತನ ಚಿಕಿತ್ಸೆಗಾಗಿ ಸಮಗ್ರ ತಂತ್ರ, ಸಮಗ್ರ ಫಲವತ್ತತೆಯ ಆರೈಕೆಗಾಗಿ ಸ್ಥಿರವಾದ ವ್ಯಾಯಾಮ, ಒತ್ತಡ ನಿರ್ವಹಣೆ ಮಾಡಿಕೊಳ್ಳುವುದು ಸೂಕ್ತ. ಅದೇ ರೀತಿ, ತಂಬಾಕು ಸೇವನೆ ಮತ್ತು ಅತಿಯಾದ ಮದ್ಯ ಸೇವನೆಯಿಂದ ದೂರ ಇರುವುದು ಉತ್ತಮ. ವಿಟಮಿನ್-ಇ ಮೂಲವಿರುವ ಬಾದಾಮಿ, ವಾಲ್ನಟ್ ಮತ್ತು ಅಂಜೂರವನ್ನು ಹೆಚ್ಚು ಸೇವನೆ ಮಾಡುವುದು ಸೂಕ್ತ.
ಅಂತಿಮವಾಗಿ, ಪುರುಷ ಫಲವತ್ತತೆ ವಿಚಾರದ ಬಗ್ಗೆ ಯೋಚನೆ ಮಾಡುವುದಾದರೆ, ''ನೀವು ಏನನ್ನು ತಿನ್ನುತ್ತೀರಿ'' ಎಂಬ ಪ್ರಶ್ನೆಗೆ ಉತ್ತರ ಬಹು ಮುಖ್ಯವಾಗಿರುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮಾಂಸ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಹೆಚ್ಚಿನ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಸುಧಾರಿತ ಸಂತಾನೋತ್ಪತ್ತಿ ಆರೋಗ್ಯವು ಉಂಟಾಗುತ್ತದೆ. ಹೀಗೆ ಮಾಡುವಾಗ ವೈಯಕ್ತಿಕ ಫಲಿತಾಂಶಗಳು ಬದಲಾಗಬಹುದಾದರೂ ಆರೋಗ್ಯಕರವಾದ ವೀರ್ಯ ಉತ್ಪಾದನೆ ಮತ್ತು ಡಿಎನ್ಎ ಸಮಗ್ರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಗಮನಿಸಬೇಕು. ನಮ್ಮ ದೇಹಕ್ಕೆ ಸರಿಯಾದ ಪೋಷಕಾಂಶಗಳನ್ನು ಒದಗಿಸುವ ಮೂಲಕ ನಾವು ನಮ್ಮ ಒಟ್ಟಾರೆ ಆರೋಗ್ಯದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಭವಿಷ್ಯದ ತಂದೆಯನ್ನು ರೂಪಿಸಬಹುದಾಗಿದೆ.
ಕೃಪೆ
ಡಾ. ಅಮಿತ ಎನ್, ಮದರ್ ಹುಡ್ ಹಾಸ್ಪಿಟಲ್ಸ್












Click it and Unblock the Notifications