Monalisa: ವೈರಲ್‌ ಹುಡುಗಿ ಮೊನಾಲಿಸಾ ಹೊಸ ಹೆಜ್ಜೆ: ತಿಂಗಳಿಗೆ ₹10 ಲಕ್ಷ ಆದಾಯ?

ಉತ್ತರ ಪ್ರದೇಶ ಪ್ರಯಾಗ್‌ ರಾಜ್‌ನಲ್ಲಿ ಜಾಗತೀಕ ಮಟ್ಟದ ಮಹಾ ಕುಂಭಮೇಳ ನಡೆಯುತ್ತಿರುವುದು ಸದ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಕೋಟ್ಯಂತರ ಭಕ್ತರು ಪ್ರಯಾಗ್‌ ರಾಜ್‌ಗೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದರೆ, ಇನ್ನೂ ಅನೇಕರು ಫೋಟೋ ಹಾಗೂ ವಿಡಿಯೋಗಳ ಮೂಲಕ ಪ್ರಯಾಗ್‌ ರಾಜ್‌ನ ಮಹಾ ಕುಂಭಮೇಳದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಮಹಾ ಕುಂಭಮೇಳದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಈ ಬಾರಿ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ವೈರಲ್‌ ಆದರೂ ಅತೀ ಹೆಚ್ಚು ಸದ್ದು ಮಾಡಿರುವುದು ಮಾತ್ರ ಮಣಿ ಸರಗಳ ಮಾರುವ ಹುಡುಗಿ ಮೊನಾಲಿಸಾ ವಿಡಿಯೋಗಳು. ದೇವರೇ ಐಶ್ವರ್ಯಾ ಎಲ್ಲಾ ಶ್ರೀಮಂತರಿಗೆ ಕೊಟ್ಟೆ..ಅಂದವನ್ನು ಬಡವರಲ್ಲಿ ಇಟ್ಟೆ ಎನ್ನುವ ಕ್ಯಾಪ್ಷನ್‌ನೊಂದಿಗೆ ಮೊನಾಲಿಸಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆದವು.

Mahakumbh Mela Viral Girl Monalisa Started Her New Youtube Channel

ಮುಗ್ಧ ನಗು, ಆಕರ್ಷಕ ಕಣ್ಣುಗಳು, ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಳು. ನೂರಾರು ಜನ ಆಕೆಯನ್ನು ಹುಡುಕಿ ಬಂದು ಮಾತನಾಡಿಸಿ ವಿಡಿಯೋ ಮಾಡಿಕೊಳ್ಳಲು ಆರಂಭಿಸಿದರು. ಕೊನೆಗೆ ಇದೇ ಆಕೆಗೆ ಮುಳ್ಳಾಗಿದ್ದು, ಆಕೆ ಹೊಟ್ಟೆಪಾಡಿಗಾಗಿ ಬಂದ ಪ್ರಯಾಗ್‌ ರಾಜ್‌ ಅನ್ನು ತೊರೆದು ತನ್ನ ಊರಿಗೆ ಸೇರುವಂತಾಯಿತು.

ಮೊನಾಲಿಸಾ ಮಹಾ ಕುಂಭಮೇಳದಿಂದ ನಿರ್ಗಮಿಸಿದರೂ ಆಕೆಯ ಹವಾ ಮಾತ್ರ ಕಮ್ಮಿ ಆಗಲಿಲ್ಲ. ಆಕೆಯ ಫೋಟೋಶೂಟ್‌ ವಿಡಿಯೋಗಳು, ಮೇಕಪ್ ವಿಡಿಯೋಗಳು ಹೀಗೆ ಸಾಲು ಸಾಲು ವಿಡಿಯೋಗಳು ವೈರಲ್‌ ಆಗುತ್ತಲೇ ಇದ್ದವು. ಕೊನೆಗೆ ಆಕೆಗೆ ಬಾಲಿವುಡ್‌ನಿಂದ ಆಫರ್‌ ಬಂದಿದೆ ಎನ್ನುವ ಸುದ್ದಿಗಳು ಕೂಡ ಹಾರಿದಾಡುತ್ತಿದೆ. ಸದ್ಯದ ತನ್ನ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡ ಮೊನಾಲಿಸಾ ಬದುಕು ನಡೆಸಲು ಹೊಸ ಬ್ಯುಸಿನೆಸ್‌ ಆರಂಭಿಸಿದ್ದಾಳೆ.

Mahakumbh Mela Viral Girl Monalisa Started Her New Youtube Channel

ಹೌದು, ಹೂ ಹಾಗೂ ಮಣಿಸರ ಮಾರಾಟಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಮೊನಾಲಿಸಾ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮೊನಾಲಿಸಾ ಭೋಂಸ್ಲೆ 08 ಎನ್ನುವ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾಳೆ. ಇದುವರೆಗೂ ಮಾಡಿರುವ ಕೇವಲ ಒಂಬತ್ತು ವಿಡಿಯೋಗೆ ಮೊನಾಲಿಸಾ ಸುಮಾರು 3 ಲಕ್ಷ ಸಬ್​ಸ್ಕ್ರೈಬರ್ಸ್​ ಹೊಂದಿದ್ದಾಳೆ. ಅಲ್ಲದೇ ವಿಡಿಯೋಗಳು ಮಿಲಿಯನ್‌ ಗಟ್ಟಲೆ ವೀಕ್ಷಣೆ ಪಡೆಯುತ್ತಿದೆ. ಸದ್ಯ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ ₹10 ಲಕ್ಷ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ಡಿಜಿಟಲ್‌ ಯುಗದಲ್ಲಿ ವಿಡಿಯೋದಿಂದಲೇ, ಜಾತ್ರೆ, ಉತ್ಸವಗಳಲ್ಲಿ ಹೂ ಹಾಗೂ ಮಣಿಸರ ಮಾರಾಟ ಮಾಡುತ್ತಿದ್ದ ಹುಡುಗಿಯ ಅದೃಷ್ಟವೇ ಬದಲಾದಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+