Maha Kumbh Mela 2025: ವೈರಲ್ ಆಗುತ್ತಿರುವ ಸುಂದರ ಕಣ್ಣಿನ ಹುಡುಗಿಯ ಕಥೆಯೇನು?
ದೇವರೇ ಐಶ್ವರ್ಯಾ ಎಲ್ಲಾ ಶ್ರೀಮಂತರಿಗೆ ಕೊಟ್ಟೆ..ಅಂದವನ್ನು ಬಡವರಲ್ಲಿ ಇಟ್ಟೆ ಎನ್ನುವ ಕ್ಯಾಪ್ಷನ್‌ನೊಂದಿಗೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗಳು ವೈರಲ್ ಆಗುತ್ತಿರುವುದು ಕ್ಯಾಪ್ಷನ್‌ನಿಂದಲೋ ಅಥವಾ ಬಳಸುತ್ತಿರುವ ಹಿನ್ನೆಲೆ ಸಂಗೀತದಿಂದಲೋ ಅಲ್ಲ ಬದಲಿಗೆ ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಸುಂದರ ಕಣ್ಣಿನ ಹುಡುಗಿಗಾಗಿ. ಏನಿದು ಸುಂದರ ಕಣ್ಣಿನ ಹುಡುಗಿಯ ಕಥೆ ಇಲ್ಲಿದೆ ಓದಿ.
ಎಲ್ಲೆಡೆ ಹರ..ಹರ ಮಹಾದೇವ ಝೇಂಕಾರ, ಕಣ್ಣು ಹಾಯಿಸಿದಷ್ಟು ಭಕ್ತ ಸಾಗರ, ಸಾಧು ಸಂತರು, ನಾಗ ಸಾಧುಗಳು, ಜಪ-ತಪ, ಮಹಾದೇವನ ವರ್ಣನೆ, ತಾಂಡವ ನೃತ್ಯ, ಜೊತೆಗೆ ಕೋಟ್ಯಂತರ ಭಕ್ತರಿಂದ ಪವಿತ್ರಾ ಸ್ನಾನ ಈ ಎಲ್ಲಾ ದೃಶ್ಯಗಳಿಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಸಾಕ್ಷಿಯಾಗುತ್ತಿದೆ.

ಜಾಗತೀಕ ಮಟ್ಟದಲ್ಲಿ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಒಂದಾಗಿರುವ ಮಹಾ ಕುಂಭಮೇಳಕ್ಕೆ ಜನವರಿ 13ರಿಂದ ಚಾಲನೆ ಸಿಕ್ಕಿದ್ದು, ಐದು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.
ಸದ್ಯ ಟ್ರೆಂಡಿಂಗ್‌ನಲ್ಲಿರುವ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಕಳೆದ ಎರಡು-ಮೂರು ದಿನಗಳಿಂದ ಮಹಾ ಕುಂಭಮೇಳದಲ್ಲಿ ಮಣಿಗಳ ಸರ ಮಾರುವ ಹುಡುಗಿಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಆಕೆಯ ಆಕರ್ಷಕ ಕಣ್ಣುಗಳು ಎಂತವರನ್ನಾದರೂ ಸೆಳೆಯುವಂತಿದೆ.

ಮಹಾ ಕುಂಭಮೇಳದಲ್ಲಿ ಮಣಿಗಳ ಸರಗಳನ್ನು ಮಾರುತ್ತಿರುವ ಈ ಹುಡುಗಿಯ ಹೆಸರು ಮೊನಾಲಿಸಾ ಅಂತೆ. ಮೊನಾಲಿಸಾ ಹಾಗೂ ಆಕೆಯ ತಂಗಿ ಮಹಾ ಕುಂಭಮೇಳ ಮಾತ್ರವಲ್ಲ ಎಲ್ಲಿ ಜನ ದಟ್ಟಣೆ ಇರುತ್ತದೆಯೋ ಅಲ್ಲಿ ಮಣಿ ಸರಗಳನ್ನು, ಹೂವುಗಳನ್ನು ಮಾರಿ ತಮ್ಮ ಜೀವನ ನಡೆಸುತ್ತಿದ್ದಾರಂತೆ. ನೋಡಲು ಬಹು ಆಕರ್ಷಕವಾಗಿರುವ ಮೊನಾಲಿಸಾ ತಮ್ಮ ನಗು ಮುಖದಿಂದಲೇ ಎಲ್ಲರನ್ನೂ ಮಾತನಾಡಿಸಿ ಮಣಿಗಳ ಸರಗಳು ಹಾಗೂ ರುದ್ರಾಕ್ಷಿ ಸರಗಳ ಮಾರಾಟ ಮಾಡುತ್ತಿದ್ದಾರೆ.
ಸದ್ಯ ಈಕೆಯ ಹಲವು ವಿಡಿಯೋಗಳು ವೈರಲ್ ಆಗುತ್ತಿದ್ದು, ಆಕೆಗೆ ನಟನೆಯಲ್ಲಿ ಆಸಕ್ತಿ ಇದ್ದರೆ, ಯಾರಾದರೂ ಪುಣ್ಯಾತ್ಮ ಆಕೆಗೆ ಒಂದು ಅವಕಾಶ ಕೊಟ್ಟರೆ ಚಿತ್ರರಂಗಕ್ಕೆ ಅಥವಾ ಕಿರುತೆರೆಗೆ ಬೆಸ್ಟ್ ಹಿರೋಯಿನ್ ಎಂದು ನೆಟ್ಟಿಗರು ಮೊನಾಲಿಸಾ ವಿಡಿಯೋಗೆ ಕಮೆಂಟ್ ಹಾಕುತ್ತಿದ್ದಾರೆ.












Click it and Unblock the Notifications