ಮಹಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಈ ಸ್ಪರ್ಧಿ
ಮುಂಬೈ, ಅಕ್ಟೋಬರ್ 04: ಎರಡು ವರ್ಷಗಳ ಹಿಂದೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅತಿ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದ ಪರಾಗ್ ಶಾ ಅವರು ಈಗ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದಾರೆ.
ಘಟ್ ಕೋಪರ್ ನ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಪರಾಗ್ ಕಿಶೋರ್ ಚಂದ್ರ ಶಾ (50) ಅವರು ಚೆಂಬೂರ್ ನಿವಾಸಿಯಾಗಿದ್ದಾರೆ. ಅಫಿಡವಿಟ್ ನಲ್ಲಿ ಹೇಳಿರುವಂತೆ ಮೂರು ಇಮೇಲ್ , ಒಂದು ವೆಬ್ ತಾಣ, ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದಾರೆ. ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಏಕಕಾಲದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರ ಬರಲಿದೆ. ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150,ಶಿವಸೇನೆ 124 ಮತ್ತು ಇತರ ಸಣ್ಣ ಪುಟ್ಟ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. 2014ರಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು, 260 ಕ್ಷೇತ್ರಗಳ ಪೈಕಿ ಬಿಜೆಪಿ 122ರಲ್ಲಿ ಗೆಲುವು ಸಾಧಿಸಿತ್ತು. ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 63ರಲ್ಲಿ ಜಯ ದಾಖಲಿಸಿತ್ತು.
ಒಟ್ಟಾರೆ 690 ಪ್ಲಸ್ ಕೋಟಿ ರು ಹೊಂದಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ. ಆದಾಯ ಮೂಲವನ್ನು ರಿಯಲ್ ಎಸ್ಟೇಟ್ ವಹಿವಾಟು ಎಂದು ತೋರಿಸಿದ್ದಾರೆ.ಪರಾಗ್ ಶಾ ಅವರ ಸ್ಥಿರಾಸ್ತಿ, ಚರಾಸ್ತಿ, ಸಾಲ ವಿವರಗಳು ಮುಂದಿವೆ...

ಪರಾಗ್ ಶಾ ಐಟಿ ರಿಟರ್ನ್ಸ್ ವಿವರ
ಪರಾಗ್ ಶಾ
2018-19: 13,78,93,067 ರು
2014-15:9,42,41,334 ರು
ಪತ್ನಿ
2018-19:11,40,78,375 ರು
2014:25,64,05,293 ರು
* ಪರಾಗ್ ಶಾ ಬಿ.ಕಾಂ ಪದವಿಧರರಾಗಿದ್ದಾರೆ.

ಪರಾಶ್ ಬಳಿ ಇರುವ ಆಸ್ತಿ ಎಷ್ಟು?
* ಪರಾಶ್ ಒಟ್ಟಾರೆ 239,24,19,168 ರು ಚರಾಸ್ತಿ; 20,68,42,601 ರು ಸ್ಥಿರಾಸ್ತಿ ಹೊಂದಿದ್ದಾರೆ.
* ಪರಾಶ್ ಪತ್ನಿ ಬಳಿ 160,13,38,675 ರು ಚರಾಸ್ತಿ; 15,10,40,999 ರು ಸ್ಥಿರಾಸ್ತಿ ಹೊಂದಿದ್ದಾರೆ.
* ಪರಾಶ್ ಕುಟುಂಬಸ್ಥರ ಬಳಿ 23,23,38,631 ಚರಾಸ್ತಿ; 7,37,11,269 ರು ಸ್ಥಿರಾಸ್ತಿ ಇದೆ.
* ಒಟ್ಟಾರೆ 690 ಪ್ಲಸ್ ಕೋಟಿ ರು ಹೊಂದಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ. ಆದಾಯ ಮೂಲವನ್ನು ರಿಯಲ್ ಎಸ್ಟೇಟ್ ವಹಿವಾಟು ಎಂದು ತೋರಿಸಿದ್ದಾರೆ.
***

ಬ್ಯಾಂಕ್ ಹೂಡಿಕೆ ವಿವರ
* ಪರಾಶ್
ಮುಂಬೈ, ಘಟ್ ಕೋಪರ್ ಶಾಖೆಯ ಬ್ಯಾಂಕ್ ಆಫ್ ಬರೋಡಾದಲ್ಲಿ ಎರಡು ಎಫ್ ಡಿ ಖಾತೆ, ಐಸಿಐಸಿಐ ಬ್ಯಾಂಕಿನಲ್ಲಿ ಎಸ್ ಬಿ ಅಕೌಂಟ್ ಗಳಲ್ಲಿ ಒಟ್ಟಾರೆ 54,35, 462 ರು ಹೊಂದಿದ್ದಾರೆ. ಮ್ಯೂಚುಫಲ್ ಫಂಡ್ ನಲ್ಲಿ 2,70,66,739ರು, 199,94,22,195ರು ಲಿಸ್ಟೆಡ್ ಷೇರುಗಳು, 2,22,66,559 ರು ಅನ್ ಲಿಸ್ಟೆಡ್ ಷೇರುಗಳನ್ನು ಹೊಂದಿದ್ದಾರೆ.. ಇವುಗಳ ಮೌಲ್ಯ: 204,86,55,493 ರು.
ಪಿಪಿಎಫ್ 4,73,88,027ರು
* ಪರಾಶ್ ಪತ್ನಿ ವಿವಿಧ ಬ್ಯಾಂಕ್ ಹೂಡಿಕೆ, ಮ್ಯೂಚುವಲ್ ಫಂಡ್ ಹಾಗೂ ಷೇರುಗಳ ಮೌಲ್ಯ 105,16,58,617ರು, ಪಿಪಿಎಫ್ 3,58,00,060 ರು
* ಪರಾಶ್ ಕುಟುಂಬಸ್ಥರ ಹೂಡಿಕೆ ಮೌಲ್ಯ 20,93,12,934 ರು ನಷ್ಟಿದೆ.
ಇದಲ್ಲದೆ, ಪರಾಶ್ ಬಳಿಯಿರುವ ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳ ಮೌಲ್ಯ 32,62,00,000 ರು
ಪರಾಶ್ ಪತ್ನಿ ಬಳಿ 34,64,50,000 ರು ಮೌಲ್ಯದ ಜಮೀನು, ಕುಟುಂಬಸ್ಥರ ಬಳಿ 10,75,00,000 ರು ಮೌಲ್ಯದ ಜಮೀನು.

ವಾಹನ, ಚಿನ್ನಾಭರಣ
ಪರಾಶ್ ಬಳಿ ಸ್ಕೋಡಾ 8,98,884 ರು
ಪತ್ನಿ ಬಳಿ ಫೆರಾರಿ ಕಾರು 2,47,09,500ರು ಮೌಲ್ಯ
ಚಿನ್ನಾಭರಣ
ಪರಾಶ್ ಬಳಿ 1,23,25,917 ರು ಮೌಲ್ಯದ ಚಿನ್ನ, ಬೆಳ್ಳಿ, ವಜ್ರಾಭರಣಗಳಿವೆ.
ಪರಾಶ್ ಪತ್ನಿ ಬಳಿ ಇರುವ ಚಿನ್ನ, ಬೆಳ್ಳಿ, ವಜ್ರಾಭರಣ ಮೌಲ್ಯ 1,37,98,121 ರು.
ಪರಾಶ್ ಕುಟುಂಬಸ್ಥರ ಬಳಿ 83,89,058ರು ಮೌಲ್ಯದ ಚಿನ್ನಾಭರಣವಿದೆ.












Click it and Unblock the Notifications