Maha Kumbh Mela 2025: ಮಹಾ ಕುಂಭಮೇಳದ ಭಕ್ತರು ರೈಲ್ವೆ ಟಿಕೆಟ್‌ ಪಡೆಯುವ ಸುಲಭ ಮಾರ್ಗ ಇಲ್ಲಿದೆ

ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಭರ್ಜರಿ ಸಿದ್ಧತೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಈ ಮಹಾ ಕುಂಭಮೇಳ ನಡೆಯಲಿದ್ದು, ಕೋಟ್ಯಾಂತರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಡೆಗಳಿಂದ ಪ್ರಯಾಗ್‌ ರಾಜ್‌ಗೆ ರೈಲುಗಳು ಸಂಚರಿಸಲಿದ್ದು, ಸಾಮಾನ್ಯ ರೈಲುಗಳು ಮಾತ್ರವಲ್ಲದೇ ವಿಶೇಷ ರೈಲುಗಳ ವ್ಯವಸ್ಥೆ ಕೂಡ ಮಾಡಲಾಗಿದೆ.

ಮಹಾ ಕುಂಭಮೇಳಕ್ಕೆ ರೈಲು ಮಾರ್ಗದ ಮೂಲಕವೇ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಿದ್ದು, ರೈಲ್ವೆ ನಿಲ್ದಾಣಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಮೊದಲೇ ಕಾಯ್ದಿರಿಸಿದ ಟಿಕೆಟ್‌ಗಳನ್ನು ಹೊರತುಪಡಿಸಿ, ರೈಲ್ವೆ ನಿಲ್ದಾಣಗಳಲ್ಲಿಯೇ ಟಿಕೆಟ್‌ ಖರೀದಿಸಬೇಕು ಎಂದುಕೊಂಡವರ ಸ್ಥಿತಿ ಅಧೋಗತಿಯಾಗುತ್ತದೆ. ಒಂದು ಟಿಕೆಟ್‌ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ. ಹೀಗಾಗಿ ಮಹಾ ಕುಂಭಮೇಳದ ಭಕ್ತರ ಈ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಜನದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

Maha Kumbh Mela 2025 Railways Department Introduces Digital Ticket Booking

ಮಹಾ ಕುಂಭಮೇಳಕ್ಕೆ ಬರುವ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್‌ಅನ್ನು ಡಿಜಿಟಲೀಕರಿಸುವ ಉದ್ದೇಶದಿಂದ ರೈಲ್ವೆ ಇಲಾಖೆ QR ಸ್ಕ್ಯಾನರ್‌ಗಳನ್ನು ಹೊಂದಿರುವ ಜಾಕೆಟ್‌ಗಳನ್ನು ಪರಿಚಯಿಸಿದೆ. ಈ ಜಾಕೆಟ್‌ಗಳನ್ನು ಮಹಾ ಕುಂಭಮೇಳದಲ್ಲಿರುವ ಸ್ವಯಂಸೇವಕರಿಗೆ ನೀಡಲಾಗುತ್ತದೆ. ಮಹಾ ಕುಂಭಮೇಳದ ಸಮಯದಲ್ಲಿ ಉತ್ತರ ರೈಲ್ವೆಯ ಸಿಬ್ಬಂದಿಯು ಸ್ವಯಂಸೇವಕರಾಗಿ QR ಸ್ಕ್ಯಾನರ್‌ಗಳನ್ನು ಹೊಂದಿರುವ ಜಾಕೆಟ್‌ಗಳನ್ನು ಧರಿಸಿ ವಿಶೇಷ ಕರ್ತವ್ಯದಲ್ಲಿ ಹಾಜರಾಗುತ್ತಾರೆ.

ರೈಲಿನಲ್ಲಿ ಪ್ರಯಾಣಿಸಬೇಕೆಂದುಕೊಂಡ ಭಕ್ತರು, ಈ ಜಾಕೆಟ್‌ಗಳ ಮೇಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ರೈಲ್ವೆಯ ಮೊಬೈಲ್ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು. ಯುಟಿಎಸ್‌ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು. ಇದರಿಂದ ಭಕ್ತರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ ಪಡೆಯುವ ಕಷ್ಟ ತಪ್ಪುತ್ತದೆ.

Maha Kumbh Mela 2025 Railways Department Introduces Digital Ticket Booking

'ಮಹಾ ಕುಂಭ ಮೇಳದ ಸಮಯದಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಗರಾಜ್‌ನ ರೈಲು ನಿಲ್ದಾಣಗಳಲ್ಲಿ ಸೇರುವುದರಿಂದ ಜನದಟ್ಟಣೆ ಉಂಟಾಗುತ್ತದೆ. ಹೀಗಾಗಿ ವರ್ಚುವಲ್ ಬುಕಿಂಗ್ ಮತ್ತು ಟಿಕೆಟ್‌ ಪಡೆಯುವುದರಿಂದ ಜನಸಂದಣಿಯನ್ನು ಕಡಿಮೆ ಮಾಡಬಹುದು' ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 'ಈ QR ಕೋಡ್ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳುವ ಆ್ಪ್‌ ಪ್ರತಿದಿನ 10 ಲಕ್ಷ ಟಿಕೆಟ್‌ಗಳನ್ನು ಬುಕ್‌ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ತಾಂತ್ರಿಕ ದೋಷಗಳು ಅತಿ ಕಡಿಮೆ ಮಟ್ಟದಲ್ಲಿ ಇರುತ್ತದೆ' ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+