ನ್ಯೂಸ್ ಎಕ್ಸ್ ಸಮೀಕ್ಷೆ: ಯಾರಿಗೂ ಇಲ್ಲ ಬಹುಮತ, ಮಹಾಘಟಬಂಧನ್‌ಗೆ ಅವಕಾಶ
Recommended Video
ನವದೆಹಲಿ, ಮೇ 19: ಲೋಕಸಭೆ ಚುನಾವಣೆ 2019 ಇದೀಗಷ್ಟೆ ಮುಗಿದಿದ್ದು, ಹಲವು ಚಾನೆಲ್‌ಗಳು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸುತ್ತಿವೆ.
ನ್ಯೂಸ್ ಎಕ್ಸ್ ಮತ್ತು ನೇತಾ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಪ್ರಕಾರ ಒಟ್ಟು 542 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯು ಮುಂಚೂಣಿಯಲ್ಲಿದೆಯಾದರೂ ಯಾರಿಗೂ ಸ್ಪಷ್ಟಬಹುಮತ ಸಿಗುತ್ತಿಲ್ಲ.
ನ್ಯೂಸ್ ಎಕ್ಸ್ ಮತ್ತು ನೇತಾ ಸಮೀಕ್ಷೆ ಪ್ರಕಾರ ಎನ್‌ಡಿಎಗೆ 242 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಯು 165 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇತರೆ ಪಕ್ಷಗಳು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ನ್ಯೂಸ್ ಎಕ್ಸ್ ಮತ್ತು ನೇತಾ ಒಟ್ಟು ಒಟ್ಟಿಗೆ ಈ ಸಮೀಕ್ಷೆ ನಡೆಸಿದ್ದು, ಇದರ ಪ್ರಕಾರ ಯಾರಿಗೂ ಸಹ ಸ್ಪಷ್ಟ ಬಹುಮಸತ ಸಿಗುತ್ತಿಲ್ಲ, ಸಮೀಕ್ಷೆ ಪ್ರಕಾರ, ಮಹಾಘಟಬಂಧನ್ ಮತ್ತು ಕಾಂಗ್ರೆಸ್ ಒಟ್ಟು ಸೇರಿ ಅಥವಾ ಬಿಜೆಪಿಯ ಮೈತ್ರಿ ಪಕ್ಷಗಳು ಒಟ್ಟು ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
ಒಟ್ಟು 542 ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಸರ್ಕಾರ ರಚಿಸಲು 272 ಸೀಟುಗಳ ಅವಶ್ಯಕತೆ ಇದೆ. ಮಹಾಘಟಬಂಧನ್ ಮತ್ತು ಕಾಂಗ್ರೆಸ್ ಒಟ್ಟಾದರೆ ಇದು ಸಾಧ್ಯವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಿಂದ ತಿಳಿದುಬರುತ್ತಿದೆ.













Click it and Unblock the Notifications