ರಿಪಬ್ಲಿಕ್ ಭಾರತ್-ಸಿ ವೋಟರ್ ಸಮೀಕ್ಷೆ: NDA 287, UPA 128
ನವದೆಹಲಿ, ಮೇ 19: ಜಗತ್ತಿನ ಅತೀ ಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ 17ನೇ ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಸಿ ವೋಟರ್ ಸಮೀಕ್ಷೆಯ ಪ್ರಕಾರ್ ಎನ್ ಡಿಎ 287, ಯುಪಿಎ 128 ಮತ್ತು ಇತರರು 127 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಯಾವ ರಾಜ್ಯದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ಅಪ್ಡೇಟ್ಸ್ ಅನ್ನು 'ಒನ್ ಇಂಡಿಯಾ ಕನ್ನಡ' ನೀಡುತ್ತಿದೆ. 'ರಿಪಬ್ಲಿಕ್ ಭಾರತ್-ಸಿ ವೋಟರ್' ಸಮೀಕ್ಷೆ ಮಾಡಿದ್ದ ಸಮೀಕ್ಷೆಯ ಫಲಿತಾಂಶ ಇಲ್ಲಿದೆ.
ಅತೀ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದದೊಂದಿಗೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶಗಳ ಫಲಿತಾಂಶವೂ ಕುತೂಹಲ ಕೆರಳಿಸಿದೆ.
ಲೋಕಸಭಾ ಚುನಾವಣೆ ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಚುನಾವಣೋತ್ತರ ಸಮೀಕ್ಷೆಗಳು ಎಷ್ಟು ನಿಖರವಾಗಿವೆ ಎಂಬುದು ಅಂದು ತಿಳಿಯಲಿದೆ.
ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ 542 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಭಾರೀ ಮೌಲ್ಯದ ಅಕ್ರಮ ಹಣ ಪತ್ತೆಯಾದ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ.

ಯಾರಿಗೆಷ್ಟು ಸ್ಥಾನ
ಎನ್ ಡಿಎ:287
ಯುಪಿಎ: 128
ಇತರರು: 127
ಒಟ್ಟು: 542 (543)
2014 ರಲ್ಲಿ
ಎನ್ ಡಿಎ: 336 (ಬಿಜೆಪಿ- 286)
ಯುಪಿಎ: 60 (ಕಾಂಗ್ರೆಸ್-40)
ಇತರರು: 147
ಒಟ್ಟು: 543

ಉತ್ತರ ಪ್ರದೇಶ
ಬಿಜೆಪಿ:38
ಕಾಂಗ್ರೆಸ್:2
ಎಸ್ಪಿ-ಬಿಎಸ್ಪಿ:40
ಇತರರು: 0
ಒಟ್ಟ: 80

ಮಹಾರಾಷ್ಟ್ರ
ಎನ್ ಡಿಎ:34
ಯುಪಿಎ: 14
ಇತರರು: 0
ಒಟ್ಟ: 48

ಪಶ್ಚಿಮ ಬಂಗಾಳ
ಎನ್ ಡಿಎ: 11
ತೃಣಮೂಲ ಕಾಂಗ್ರೆಸ್: 29
ಯುಪಿಎ: 2
ಪಕ್ಷೇತರ: 0
ಒಟ್ಟ: 42

ಬಿಹಾರ
ಎನ್ ಡಿಎ: 33
ಯುಪಿಎ: 7
ಪಕ್ಷೇತರ: 0
ಒಟ್ಟ: 40

ತಮಿಳುನಾಡು
ಎನ್ ಡಿಎ(ಎಐಎಡಿಎಂಕೆ-ಬಿಜೆಪಿ+): 11
ಯುಪಿಎ(ಡಿಎಂಕೆ-ಕಾಂಗ್ರೆಸ್+): 27
ಇತರರು: 0
ಒಟ್ಟು: 38(39)

ಮಧ್ಯಪ್ರದೇಶ
ಎನ್ ಡಿಎ: 24
ಯುಪಿಎ: 05
ಇತರರು: 0
ಒಟ್ಟು: 29

ಗುಜರಾತಿನಲ್ಲಿ ಎಷ್ಟು?
ಎನ್ ಡಿಎ 22
ಯುಪಿಎ 04
ಇತರರು 0
ಒಟ್ಟು: 26











Click it and Unblock the Notifications