2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ
Recommended Video
ಲೋಕಸಭೆ ಚುನಾವಣೆ 2019ರ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಬಂದಿರುವ ಸಮೀಕ್ಷೆಗಳ ಸಾರ ಸಂಗ್ರಹ ಇಲ್ಲಿದೆ. ಏಪ್ರಿಲ್ 11 ರಿಂದ ಮೇ19ರ ತನಕ ಮತದಾನ ಪ್ರಕ್ರಿಯೆಯನ್ನು ನಡೆಸಲಾಗಿದೆ.
ಮತದಾನ ಮುಕ್ತಾಯವಾದ ಬಳಿಕ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆ ವರದಿಗಳ ಸಂಗ್ರಹ ಪುಟ ಇದಾಗಿದೆ.
ಮೇ 19ರಂದು ಏಳನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದ ಬಳಿಕ(ಸಂಜೆ 6.30ರ ನಂತರ), ಚುನಾವಣೋತ್ತರ ಸಮೀಕ್ಷೆ ಪ್ರಸಾರ ಮಾಡುವಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು.
543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದರ ಮುನ್ಸೂಚನೆ ಸಿಗಲಿದೆ.

2014ರ ಮತದಾನೋತ್ತರ ಸಮೀಕ್ಷೆಯಲ್ಲಿ
2014ರ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ಡಿಎಗೆ ಬಹುಮತ ಎಂದು ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳು ಘೋಷಿಸಿದ್ದವು, ಟುಡೇಸ್ ಚಾಣಕ್ಯ ಅತ್ಯಂತ ನಿಖರ ಅಂಕಿ ಅಂಶ ನೀಡಿ ಗಮನ ಸೆಳೆದಿತ್ತು. ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ವಿವಿಧ ಸಂಸ್ಥೆಗಳಿಂದ ಬಂದಿರುವ ಎಕ್ಸಿಟ್ ಪೋಲ್
ನ್ಯೂಸ್ 18-ಐಪಿಎಸ್ಒಎಸ್, ಇಂಡಿಯಾ ಟುಡೇ-ಆಕ್ಸಿಸ್, ಟೈಮ್ಸ್ ನೌ- ವಿಎಂಆರ್, ನ್ಯೂಸ್ ಎಕ್ಸ್ -ನೇತಾ, ರಿಪಬ್ಲಿಟ್ ಭಾರತ್- ಜನ್ ಕಿ ಬಾತ್, ರಿಪಬ್ಲಿಕ್ ಟಿವಿ-ಸಿ ವೋಟರ್, ಎಬಿಪಿ-ಸಿಎಸ್ ಡಿಎಸ್, ಟುಡೇಸ್ ಚಾಣಕ್ಯ, ಇಂಡಿಯಾ ಟಿವಿ-ಸಿಎನ್ ಎಕ್ಸ್, ಎಬಿಪಿ ನ್ಯೂಸ್- ನೆಲ್ಸನ್ ಮುಂತಾದ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ವರದಿ ನೀಡಿವೆ.

2019ರಲ್ಲಿ ಟುಡೇಸ್ ಚಾಣಕ್ಯ
ನ್ಯೂಸ್ 24-ಚಾಣಕ್ಯ ಎಕ್ಸಿಟ್ ಪೋಲ್ ಪ್ರಕಾರ ಎನ್ಡಿಎಗೆ ಭಾರಿ ಬಹುಮತ ಸಿಗಲಿದೆ. 340 ಸ್ಥಾನಗಳು ಎಂದು ವರದಿ ಬಂದಿದೆ. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎಗೆ 70 ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಇತರೆ 133 ಸ್ಥಾನ ಗೆಲ್ಲಬಹುದು.

ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ವರದಿ ಇಲ್ಲಿದೆ
2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.
ಸಿಎನ್ ಎಕ್ಸ್ : ಎನ್ಡಿಎ 275, ಯುಪಿಎ 126, ಇತರೆ 142
ಟೈಮ್ಸ್ ನೌ : ಎನ್ಡಿಎ 306, ಯುಪಿಎ 132, ಇತರೆ 104
ರಿಪಬ್ಲಿಕ್ ಜನ್ ಕೀ ಬಾತ್ : ಎನ್ಡಿಎ 305, ಯುಪಿಎ 124,ಎಸ್ಪಿ-ಬಿಎಸ್ಪಿ, ಇತರೆ 87
ರಿಪಬ್ಲಿಕ್ ಸಿವೋಟರ್: ಎನ್ಡಿಎ 287, ಯುಪಿಎ 128, ಎಸ್ ಪಿ-ಬಿಎಸ್ಪಿ 40, ಇತರೆ 87

ಮ್ಯಾಜಿಕ್ ನಂಬರ್ 272 ದಾಟಲಿರುವ ಎನ್ಡಿಎ
ಸಿ ವೋಟರ್ : ಎನ್ಡಿಎ 287, ಯುಪಿಎ 128, ಇತರೆ 138
ಟುಡೇಸ್ ಚಾಣಕ್ಯ : ಎನ್ಡಿಎ 340, ಯುಪಿಎ 70, ಇತರೆ 133
ನೀಲ್ಸನ್ : ಎನ್ಡಿಎ 274, ಯುಪಿಎ 97, ಇತರೆ 165
ಹನ್ಸಾ ರಿಸರ್ಚ್ : ಎನ್ಡಿಎ 279, ಯುಪಿಎ 103, ಇತರೆ 161
ನ್ಯೂಸ್ ನೇಷನ್: ಎನ್ಡಿಎ 282-290, ಯುಪಿಎ 118-126, ಇತರೆ 130-138











Click it and Unblock the Notifications