ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸೋಲು: ಚಿಂತಾಮಣಿ ಸಮೀಕ್ಷೆ

ನವದೆಹಲಿ, ಏಪ್ರಿಲ್ 10: ಚಿಂತಾಮಣಿ-5 ಡಾಟ್ಸ್ ನಡೆಸಿದ ಚುನಾವಣಾ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು ಈ ಬಾರಿ ಸೋಲಬಹುದು ಎನ್ನಲಾಗಿದೆ.

ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ 2014 ರಲ್ಲಿ ಎರಡಉ ಸ್ಥಾನವನ್ನಷ್ಟೇ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಅಷ್ಟು ಸ್ಥಾನವನ್ನೂ ಗೆಲ್ಲಲಾಗದೆ, ಕೇವಲ ಒಂದೇ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

ಅಂದರೆ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಸೋಲುವ ಸಂಭವ ತೀರಾ ಕಡಿಮೆ. ಆದ್ದರಿಂದ ಬಿಜೆಪಿಯ ಸ್ಮೃತಿ ಇರಾನಿ ಅವರ ಎದುರು ರಾಹುಲ್ ಗಾಂಧಿ ಅವರು ಸೋಲಬಹುದು ಎಂಬ ವದಂತಿಗೆ ಈ ಸಮೀಕ್ಷೆ ಪುಷ್ಠಿ ನೀಡಿದೆ. ರಾಹುಲ್ ಗಾಂಧಿ ಅವರೂ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದೂ ಇದೇ ಆತಂಕದಿಂದಲೇ ಎಂಬ ಪ್ರಶ್ನೆಯೂ ಎದ್ದಿದೆ!

Lok Sabha elections 2019: Chintamani opinion polls: Rahul Gandhi may lose Amethi seat

ಈ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ಬಿಜೆಪಿ+ 56 ಸ್ಥಾನಗಳನ್ನು ಗೆದ್ದರೆ, ಬಿಎಸ್ಪಿ-ಎಸ್ಪಿ ಮೈತ್ರಿಕೂಟ ಒಟ್ಟು 23 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. 2014 ರಲ್ಲಿ ಬಿಜೆಪಿ ಒಟ್ಟು 71 ಮತ್ತು ಅದರ ಮೈತ್ರಿ ಪಕ್ಷ ಅಪ್ನಾದಳ 2 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಕೇವಲ 2ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಕೇವಲ ಒಂದೇ ಒಂದು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ.

2014 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ 408,651 ಮತಗಳನ್ನು ಪಡೆದು 107,903 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸ್ಮೃತಿ ಇರಾನಿ ಅವರು 300,748 ಮತಗಳನ್ನು ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+