ಕಡಿಮೆ ಅವಧಿ ಸಿಎಂಗಳ ಪಟ್ಟಿ ಸೇರಿದ ದೇವೇಂದ್ರ ಫಡ್ನವೀಸ್

ಮುಂಬೈ, ನವೆಂಬರ್ 26: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ 'ಮಹಾ'ನಾಟಕ ನವೆಂಬರ್ 26ರಂದು ತಿರುವು ಪಡೆದುಕೊಂಡಿದೆ. ನವೆಂಬರ್ 27ರಂದು ವಿಶ್ವಾಸಮತ ಯಾಚನೆಗೆ ಸಜ್ಜಾಗಬೇಕಿದ್ದ ಮಹಾರಾಷ್ಟ್ರದ ಹಾಲಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಶಿವಸೇನಾ- ಎನ್ಸಿಪಿ- ಕಾಂಗ್ರೆಸ್ ಸರ್ಕಾರ ರಚನೆ ಹಾದಿ ಸುಗುಮವಾಗಿವೆ. ಉದ್ಧವ್ ಠಾಕ್ರೆ ಸಿಎಂ ಆಗುವ ಕಾಲ ಕೊನೆಗೂ ಕೂಡಿ ಬಂದಿದೆ.

ಸಂವಿಧಾನದ 164ನೇ ವಿಧಿಯಂತೆ ರಾಜ್ಯವೊಂದರ ಮುಖ್ಯಮಂತ್ರಿಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡುತ್ತಾರೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಅಧಿಕಾರ ಅವಧಿ 5 ವರ್ಷಗಳ ಅವಧಿ ಇರುತ್ತದೆ. ಭಾರತದಲ್ಲಿ ಎರಡು ದಶಕಗಳ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದವರೂ ಇದ್ದಾರೆ, ಅತಿ ಕಡಿಮೆ ಅವಧಿ ಸಿಎಂ ಆಗಿದ್ದವರು ಇದ್ದಾರೆ.

ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಅವರು ಡಿಸಿಎಂಆಗಿ ಶನಿವಾರ(ನವೆಂಬರ್ 23) ದಂದು ಬೆಳಗ್ಗೆ 8 ಗಂಟೆ ವೇಳೆಗೆ ರಾಜ್ಯಪಾಲರ ಕಚೇರಿಯಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಬೆಳಗ್ಗೆ 5-47ಕ್ಕೆ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು, ಬಿಜೆಪಿ ಸರ್ಕಾರ ಸ್ಥಾಪನೆಗೆ ಅನುವು ಮಾಡಿಕೊಟ್ಟಿದ್ದರು.

Devendra Fadnavis joins Shortest tenures Chief Ministers list

ಅತಿ ಕಡಿಮೆ ಅವಧಿ ಮುಖ್ಯಮಂತ್ರಿಗಳು
1. ಜಗದಾಂಬಿಕ ಪಾಲ್ -(21-23 ಫೆಬ್ರವರಿ 1998)-1 ದಿನ(44 ಗಂಟೆ)-ಉತ್ತರಪ್ರದೇಶ
2. ಬಿ.ಎಸ್ ಯಡಿಯೂರಪ್ಪ-(17-19 ಮೇ 2018)-55 ಗಂಟೆ-ಕರ್ನಾಟಕ
3. ದೇವೇಂದ್ರ ಫಡ್ನವೀಸ್ -(23-26 ನವೆಂಬರ್ 2019)-80 ಗಂಟೆ- ಮಹಾರಾಷ್ಟ್ರ
4. ಓಂ ಪ್ರಕಾಶ್ ಚೌಟಾಲ (12-17 ಜುಲೈ 1990)-ಹರ್ಯಾಣ.
5. ನಿತೀಶ್ ಕುಮಾರ್ (03-10 ಮಾರ್ಚ್ 2000) -ಬಿಹಾರ.
6. ಬಿ.ಎಸ್ ಯಡಿಯೂರಪ್ಪ(12-19 ನವೆಂಬರ್ 2017)-ಕರ್ನಾಟಕ
7. ಸತೀಶ್ ಪ್ರಸಾದ್ ಸಿಂಗ್- 1 ವಾರ- ಬಿಹಾರ
8 ಎಸ್ ಸಿ ಮಾರಕ್-(27 ಫೆಬ್ರವರಿ-10 ಮಾರ್ಚ್, 1998)-12 ದಿನಗಳು-ಮೇಘಾಲಯ
9. ಜಾನಕಿ ರಾಮಚಂದ್ರನ್-23 ದಿನಗಳು-ತಮಿಳುನಾಡು
10. ಸಿ.ಎಚ್ ಮೊಹಮ್ಮದ್ ಕೊಯಾ-45 ದಿನಗಳು- ಕೇರಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+