Lava Yuva 5G: ಇಂದು ಲಾಂಚ್ ಆಗಲಿದೆ ಭಾರತದ ಕಂಪನಿಯ ಲಾವಾ ಯುವ
ಭಾರತೀಯ ಮೊಬೈಲ್ ಮಾರ್ಕೆಟ್‌ನಲ್ಲಿ ಹಲವು ದೇಶದ ಕಂಪನಿಗಳು ತಮ್ಮ ಛಾಪು ಮೂಡಿಸಿವೆ. ಈ ಕ್ಷೇತ್ರದಲ್ಲಿ ಸ್ವದೇಶಿ ಕಂಪನಿಗಳ ಸಂಖ್ಯೆ ಕಡಿಮೆ ಇದೆ. ಆದರೆ ಈಗ ಭಾರತದ ಕಂಪನಿಯ ಮೊಬೈಲ್ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲು ಸಜ್ಜಾಗಿದೆ. ಲಾವಾ ಯುವ ಇಂದು (ಮೇ 30) ಲಾಂಚ್ ಆಗಲಿದೆ.
ಈಗಾಗಲೇ ಲಾವಾ ಕಂಪನಿ ಈ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ನೀಡಿದೆ. ಸಾಮಾಜಿಕ ತಾಣದಲ್ಲಿ ಪೋಸ್ಟ್ ಮೂಲಕ ಲಾವಾ ಈ 5G ಸ್ಮಾರ್ಟ್ ಫೋನ್ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದೆ. ಈ 5G ಫೋನ್ ಹೋಲ್ ಪಂಚ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಈ ಫೋನ್ ಹಿಂಭಾಗದಲ್ಲಿ ಆಕರ್ಷಕ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್‌ನಲ್ಲಿ ಏನೆಲ್ಲಾ ವಿಶೇಷತೆಗಳು ಇವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈ ಮೊಬೈಲ್ ಬೆಲೆ ಎಷ್ಟು?
ಮ್ಯಾಟ್ ಫಿನಿಷ್ ಹೊಂದಿರುವ ಸಖತ್ ಲುಕ್ ಹೊಂದಿರುವ ಫೋನ್ ಇದ್ದಾಗಿದ್ದು, ಈ ಫೋನ್ ಪಡೆಯಲು ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುವುದು ಗ್ಯಾರಂಟಿ. ಈ ಫೋನ್ ಸಹ ಎರಡು ರೂಪಾಂತರಗಳಲ್ಲಿ ಬರಲಿದೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಧಮಾಕಾ ಮಾಡಲು ಲಾವಾ ಮೊಬೈಲ್ ಸಿದ್ಧವಾಗಿದೆ. 15 ಸಾವಿರ ರೂಪಾಯಿಗಳ ಒಳಗೆ ಈ ಫೋನ್ ಲಾಂಚ್ ಮಾಡಲು ಕಂಪನಿ ನಿರ್ಧರಿಸಿದೆ.
ಲಾವಾ ಯುವ 5 ಜಿ ಬಿಡುಗಡೆಯು ಮೇ 30 ರಂದು ಮಧ್ಯಾಹ್ನ 12:00 ಗಂಟೆಗೆ ಆಗಲಿದೆ. ಈ ಪೋಸ್ಟ್‌ನಲ್ಲಿ ಟೀಸರ್ ವೀಡಿಯೊವನ್ನು ಸಹ ಹಂಚಿಕೊಳ್ಳಲಾಗಿದೆ, ಇದು ಹ್ಯಾಂಡ್‌ಸೆಟ್‌ನ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ಈ ಫೋನ್ ಅಮೆಜಾನ್‌ನಲ್ಲಿ ಲಭ್ಯ ಇದೆ.

ಕ್ಯಾಮೆರಾ ಹೇಗಿದೆ?
ಲಾವಾ ಕಂಪನಿಯ ಈ ಮೊಬೈಲ್ ನಲ್ಲಿ ಎರಡು ಕ್ಯಾಮೆರಾ ಸೆಟಪ್ ನೋಡಬಹುದು. ಅಲ್ಲದೆ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದ್ದು AI ತಂತ್ರಜ್ಞಾನವನ್ನು ಸಹ ಈ ಮೊಬೈಲ್ ಹೊಂದಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ.
ಡಿಸ್‌ಪ್ಲೇ ಹೇಗಿರಲಿದೆ?
ಲಾವಾ ಯುವ 5ಜಿ ಫೋನಿನ ಡಿಸ್‌ಪ್ಲೇ 6.56 ಇಂಚನ್ನು ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ 90 hz ರಿಫ್ರೆಶ ದರವನ್ನು ಈ ಫೋನ್ ಹೊಂದಿರುವ ಸಂಭವ ಇದೆ. ಅಲ್ಲದೆ ಈ ಫೋನಿನ ಡಿಸ್ ಪ್ಲೇನಲ್ಲಿ ಎಚ್‌ಡಿ ಪ್ಲಸ್ ನದ್ದಾಗಿರಬಹುದು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಷನ್ ಪ್ರೊಸೆಸರ್ ಅನ್ನು ಹೊಂದಿರ ಬಹುದು. Lava Yuva 5G ಯ ಇತ್ತೀಚಿನ Geekbench ವೆಬ್‌ಸೈಟ್‌ನಲ್ಲಿ ಇದು 6GB ಅಥವಾ 8GB RAM ಅನ್ನು ಪಡೆಯಬಹುದು ಎಂದು ಬಹಿರಂಗಪಡಿಸಿದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಎಂದು ವರದಿಯಾಗಿದೆ.
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಾವಾ ಕಂಪನಿಯ ಹಲವು ಮೊಬೈಲ್‌ಗಳು ಸದ್ದು ಮಾಡುತ್ತಿವೆ. ಲಾವಾ ಅಗ್ನಿ, ಲಾವಾ ಯುವ 2 ಪ್ರೊ, ಲಾವಾ ಸ್ಟ್ರೋಮ್ 5 ಜಿ, ಲಾವಾ ಬ್ಲೇಜ್ ಕರ್ವ್ 5 ಜಿ ಫೋನ್‌ಗಳನ್ನು ಸದ್ಯ ಗ್ರಾಹಕರನ್ನು ಆಕರ್ಷಿಸುತ್ತಿದ್ದು ಈ ಸಾಲಿಗೆ ಈಗ ಮತ್ತೊಂದು ಫೋನ್ ಸೇರುವ ಸಾಧ್ಯತೆ ಇದೆ.












Click it and Unblock the Notifications