ಜುಲೈ 10ರಂದು ಭಾರತದಲ್ಲಿ ಲಾಂಚ್ ಆಗಲಿದೆ ಲಾವಾ ಹೊಸ ಮೊಬೈಲ್
ಭಾರತೀಯ ಮೊಬೈಲ್ ಮಾರುಕಟ್ಟೆಗೆ ವಿವಿಧ ಕಂಪನಿಯ ಮೊಬೈಲ್‌ಗಳು ಕಾಲಿಡಲಿವೆ. ಈ ವೇಳೆ ಲಾವಾ ಕಂಪನಿ ಸಹ ತನ್ನ ಮತ್ತೊಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಭರ್ಜರಿ ಫೀಚರ್ಸ್ ಹಾಗೂ ಸ್ಮಾರ್ಟ್ ಲುಕ್ ಹೊಂದಿರುವ Lava Blaze X 5G ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿದೆ.
ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಈ ಫೋನ್ ಕೆಗ್ಗೊಳುವವರಿಗೆ ಇದು ಬೆಸ್ಟ್ ಫೋನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಲಾವಾ ಬ್ಲೇಜ್ ಬಗ್ಗೆ ಸೋರಿಕೆ ಇದೀಗ ಇದರ ಬೆಲೆ ಕೂಡ ಬಿಡುಗಡೆಗೂ ಮುನ್ನವೇ ಬಹಿರಂಗವಾಗಿದೆ. ಈ ಫೋನ್ ಮುಂದಿನ ಜುಲೈ 10 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ.

ಲಾವಾ ಬ್ಲೇಜ್ ಎಕ್ಸ್ 5ಜಿಯನ್ನು ಬುಧವಾರ ಬಿಡುಗಡೆ ಆಗಲಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಫೋನ್ MediaTek ಡೈಮೆನ್ಸಿಟಿ 7050 ಪ್ರೊಸೆಸರ್ನೊಂದಿಗೆ ಗ್ರಾಹಕರ ಕೈ ಸೇರಬಹುದು. ಈ ಫೋನ್‌ನಲ್ಲಿ ದೊಡ್ಡ ಬ್ಯಾಟರಿ ಸಹ ಸಿಗುವ ಸಾಧ್ಯತೆ ಇದೆ. ಒಂದು ಬಾರಿ ಈ ಫೋನ್ ಚಾರ್ಜ್ ಮಾಡಿದರೆ ಸಾಕು ದಿನ ಪೂರ್ತಿ ಯೂಸ್ ಮಾಡಬಹುದು.
ಡಿಸ್ ಪ್ಲೇ ಹೇಗಿದೆ?
ಲಾವಾ ಬ್ಲೇಜ್ ಎಕ್ಸ್ 5ಜಿ ಫೋನ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಫೋನ್ 120 HZ ರಿಫ್ರೇಶ್ ದರವನ್ನು ಹೊಂದಿದ್ದು, 800 ನೀಟ್ಸ್ ಗರಿಷ್ಠ ಹೊಳಪನ್ನು ನೀಡುವ ಸಾಧ್ಯತೆ ಇದೆ.
ಕ್ಯಾಮೆರಾ ಹೇಗಿದೆ?
ಲಾವಾ ಮೊಬೈಲ್‌ನ ಟೀಸರ್‌ನ್ನು ಕಂಪನಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಸಹ ಬಿಡುಗಡೆ ಮಾಡಿದೆ.ಈ ಫೋನ್‌ನ ಹಿಂಭಾಗದಲ್ಲಿ, ಕಂಪನಿಯು ವೃತ್ತಾಕಾರದ ವಿನ್ಯಾಸದ ಕ್ಯಾಮೆರಾ ಮಾಡ್ಯೂಲ್ ನೀಡಿದೆ. ಈ ಫೋನ್ 64 ಮೆಗಾ ಪಿಕ್ಸಲ್ ಪ್ರೈಮರಿ ಕ್ಯಾಮೆರಾ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆ ಇದೆ.
ಈ ಬಜೆಟ್ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ವರ್ಚುವಲ್ RAM ಆಯ್ಕೆಯನ್ನು ಲಾವಾ ನೀಡಬಹುದು. ನೀವು ಅದರ RAM ಅನ್ನು 16GB ವರೆಗೆ ವಿಸ್ತರಿಸಬಹುದು. ಅಂದರೆ, ನೀವು ಅದರಲ್ಲಿ 8GB ವರೆಗಿನ ವರ್ಚುವಲ್ RAM ನ ಆಯ್ಕೆಯನ್ನು ಪಡೆಯಬಹುದು. ಇದರಲ್ಲಿ ನೀವು ಹಲವಾರು ಬಣ್ಣದ ಆಯ್ಕೆಗಳನ್ನು ಸಹ ಪಡೆಯಬಹುದು.
ಲಾವಾ ಬ್ಲೇಜ್ ಎಕ್ಸ್ 5ಜಿ ಎಷ್ಟು ವಿಧದಲ್ಲಿ ಲಭ್ಯ?
ಕಂಪನಿಯು ಅಮೆಜಾನ್ ಪ್ರೈಮ್ ಡೇ ಸಮಯದಲ್ಲಿ ಲಾವಾ ಬ್ಲೇಜ್ ಎಕ್ಸ್ 5ಜಿ ಮಾರಾಟವನ್ನು ಪ್ರಾರಂಭಿಸುತ್ತದೆ. ಲಾವಾ ಬ್ಲೇಜ್ ಎಕ್ಸ್ 5ಜಿ ಸ್ಮಾರ್ಟ್‌ಫೋನ್ ಅನ್ನು 4GB, 6GB ಮತ್ತು 8GB RAM ಆಯ್ಕೆಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಬಹುದು. ಇದರಲ್ಲಿ, ಕಂಪನಿಯು 256GB ವರೆಗೆ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಗ್ರಾಹಕರ ಕೈಗೆ ಸಿಗಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ. 15 ಸಾವಿರಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಗೆ ರಿಲೀಸ್ ಮಾಡಬಹುದು.
ಬಾಕ್ಸ್‌ನಲ್ಲಿ ಏನೆಲ್ಲಾ ಇದೆ?
ಮೊಬೈಲ್ ಫೋನ್
ಸಿಮ್ ಕಾರ್ಡ್ ಟೂಲ್
ಟೈಪ್ ಸಿ ಟು ಟೈಪ್ ಸಿ ಚಾರ್ಜರ್
33 ವ್ಯಾಟ್ ಚಾರ್ಜರ್
ಬ್ಯಾಕ್ ಕವರ್
ಟೈಪ್ ಸಿ ಟು 3.5 ಎಂಎಂ ಜಾಕ್
ಡಾಕ್ಯೂಮೆಂಟ್
ಮೊಬೈಲ್ ಕೆಳಭಾಗದಲ್ಲಿ ಏನಿದೆ?
ಸಿಮ್ ಕಾರ್ಡ್ ಟ್ರೇ
ಮೈಕ್
ಟೈಪ್ ಸಿ ಚಾರ್ಜರ್
ಸ್ಪೀಕರ್ ಗ್ರಿಲ್
ಮೊಬೈಲ್ ಬಲಭಾಗದಲ್ಲಿ ವ್ಯಾಲ್ಯೂಮ್ ಕಂಟ್ರೋಲ್
ಪವರ್ ಬಟನ್












Click it and Unblock the Notifications