ಅದಾನಿ ಈಗ ವಿಶ್ವ ನಂ.3- ಇಲ್ಲಿದೆ ಅತಿದೊಡ್ಡ ಶ್ರೀಮಂತರ ಪಟ್ಟಿ

ಬಹಳ ವರ್ಷಗಳಿಂದ ಹೆಚ್ಚು ಸುದ್ದಿಗೆ ಬಾರದೇ ತೆರೆಮರೆಯಲ್ಲಿದ್ದುಕೊಂಡು ತನ್ನ ವ್ಯಾವಹಾರಿಕ ಸಾಮ್ರಾಜ್ಯ ವಿಸ್ತರಿಸುತ್ತಿದ್ದ ಗೌತಮ್ ಅದಾನಿ ಇತ್ತೀಚಿನ ಕೆಲ ವರ್ಷಗಳಿಂದ ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಸುದ್ದಿ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ನಂಬರ್ ಒನ್ ಶ್ರೀಮಂತ ಎನಿಸಿದ್ದರು. ನಂತರ ವಿಶ್ವದ ಟಾಪ್-5 ಶ್ರೀಮಂತರ ಗುಂಪಿಗೆ ಸೇರಿದರು. ಈಗ ಅವರು ಟಾಪ್-3 ಶ್ರೀಮಂತರ ಪೈಕಿ ಒಬ್ಬರಾಗಿದ್ದಾರೆ.

ಗೌತಮ್ ಅದಾನಿ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ಹಂತಕ್ಕೆ ಏರಿದ ಮೊದಲ ಭಾರತೀಯ ಮಾತ್ರವಲ್ಲ, ಮೊದಲ ಏಷ್ಯನ್ ಕೂಡ ಹೌದು. ಏಷ್ಯಾದ ಯಾವ ವ್ಯಕ್ತಿಯೂ ಹಿಂದೆ ವಿಶ್ವದ ಮೂರನೇ ಅತಿಶ್ರೀಮಂತ ಎಂಬ ಸ್ತರಕ್ಕೆ ಏರಿದ್ದಿಲ್ಲ. ಚೀನಾದ ಕೋಟ್ಯಾಧಿಪತಿ ಜ್ಯಾಕ್ ಮಾ ಅವರಿಗೂ ಇದು ಸಾಧ್ಯವಾಗಿಲ್ಲ.

ಗೌತಮ್ ಅದಾನಿ ಆಸ್ತಿ ಮೌಲ್ಯ ಒಟ್ಟಾರೆ 137 ಬಿಲಿಯನ್ ಡಾಲರ್ (11 ಲಕ್ಷ ಕೋಟಿ ರೂ) ಇದೆ. ಅತಿ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಫ್ರಾನ್ಸ್‌ನ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪರಿಣಾಮವಾಗಿ ಅದಾನಿ ಒಂದು ಸ್ಥಾನಕ್ಕೆ ಮೇಲಕ್ಕೇರಿದ್ದಾರೆ. ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಮಾತ್ರವೇ ಅದಾನಿಗಿಂತ ಮೇಲಿರುವುದು.

ಕಾಲೇಜು ಓದನ್ನು ಅರ್ಧಕ್ಕೆ ಬಿಟ್ಟು ವ್ಯವಹಾರಕ್ಕೆ ಇಳಿದ ಗೌತಮ್ ಅದಾನಿ ಇಷ್ಟು ಸಂಪತ್ತು ಕ್ರೋಢೀಕರಿಸಿದ ಹಾದಿ ಸೋಜಿಗವೇ. ರಾಜಕೀಯ ಕೃಪಾಕಟಾಕ್ಷದಿಂದ ಈ ಹಂತಕ್ಕೇರಿದ್ದಾರೆ ಎಂಬ ಆರೋಪ ಏನೇ ಇರಲಿ ಒಬ್ಬ ಉದ್ಯಮಿಯಾಗಿ ಅಪಾರ ಯಶಸ್ಸು ಗಳಿಸಿರುವುದಂತೂ ಹೌದು.

ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ, ಅವರ ಆಸ್ತಿ ಮೌಲ್ಯ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ಅಮೆರಿಕನ್ನರದ್ದೇ ಪ್ರಾಬಲ್ಯ

ಅಮೆರಿಕನ್ನರದ್ದೇ ಪ್ರಾಬಲ್ಯ

ವಿಶ್ವದ ಅತಿ ಶ್ರೀಮಂತರ ಟಾಪ್-10 ಪಟ್ಟಿಯಲ್ಲಿ ಇಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಅಮೆರಿಕನ್ ಉದ್ಯಮಿಗಳೇ. ಭಾರತದ ಗೌತಮ್ ಅದಾನಿ ಮತ್ತು ಫ್ರಾನ್ಸ್‌ನ ಬೆರ್ನಾರ್ಡ್ ಆರ್ನಾಲ್ಟ್ ಮಾತ್ರವೇ 3 ಮತ್ತು 4ನೇ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.

ಭಾರತದ ಮುಕೇಶ್ ಅಂಬಾನಿ 11ನೇ ಸ್ಥಾನ ಪಡೆದಿದ್ದಾರೆ. ಚೀನಾದ ಝೋಂಗ್ ಶಾನ್‌ಶನ್ 13ನೇ ಸ್ಥಾನದಲ್ಲಿದ್ದಾರೆ. ಬಿಲ್ ಗೇಟ್ಸ್, ವಾರನ್ ಬಫೆಟ್, ಲ್ಯಾರಿ ಪೇಜ್ ಮೊದಲಾದ ಪ್ರಮುಖರೆಲ್ಲರೂ ಟಾಪ್-10 ಪಟ್ಟಿಯಲ್ಲಿದ್ದಾರೆ. ಟಾಪ್-10 ಲಿಸ್ಟ್‌ನಲ್ಲಿ ತಂತ್ರಜ್ಞಾನ ಉದ್ದಿಮೆದಾರರೇ ಏಳು ಮಂದಿ ಇರುವುದು ಕುತೂಹಲ.

ಎಲಾನ್ ಮಸ್ಕ್ ನಂ. 1

ಎಲಾನ್ ಮಸ್ಕ್ ನಂ. 1

ಎಲಾನ್ ಮಸ್ಕ್ ಆಸ್ತಿ ಮೌಲ್ಯ: 251 ಬಿಲಿಯನ್ ಡಾಲರ್ (ಸುಮಾರು 20 ಲಕ್ಷಕೋಟಿ ರೂ)

ಅಮೆರಿಕದ ಎಲಾನ್ ಮಸ್ಕ್ ಹಲವು ಪ್ರಮುಖ ಕಂಪನಿಗಳ ಒಡೆಯ. ಟೆಸ್ಲಾ ಕಾರುಗಳಿಂದ ಹಿಡಿದು ರಾಕೆಟ್ ತಯಾರಿಕೆಯವರೆಗೂ ಇವರ ಉದ್ಯಮ ಇದೆ. ಇವರ ಸ್ಪೇಸ್‌ಎಕ್ಸ್ ಕಂಪನಿಯಿಂದ ನಾಸಾ ರಾಕೆಟ್‌ಗಳನ್ನು ಎರವಲು ಪಡೆಯುತ್ತದೆ. ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಮಹತ್ವಾಕಾಂಕ್ಷೆ ಯೋಜನೆ ಎಲಾನ್ ಮಸ್ಕ್ ಅವರದ್ದು.

ಅಷ್ಟೇ ಅಲ್ಲ, ಭವಿಷ್ಯದ ತಂತ್ರಜ್ಞಾನಗಳ ಬೆಳವಣಿಗೆಯತ್ತ ಮಸ್ಕ್ ಗಮನ ಹೆಚ್ಚಿರುತ್ತದೆ. ಹೈಪರ್‌ಲೂಪ್‌ನಂತಹ ಸಾರಿಗೆ ವ್ಯವಸ್ಥೆಯ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟಿದ್ದು ಎಲಾನ್ ಮಸ್ಕ್. ಸದ್ಯ ಇವರಿಗೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಭಾರೀ ಲಾಭದಾಯಕ ಉದ್ದಿಮೆಗಳಾಗಿವೆ.

ಜೆಫ್ ಬೆಜೋಸ್ ನಂ. 2

ಜೆಫ್ ಬೆಜೋಸ್ ನಂ. 2

ಜೆಫ್ ಬೆಜೋಸ್ ಅಸ್ತಿ ಮೌಲ್ಯ: 153 ಬಿಲಿಯನ್ ಡಾಲರ್ (ಸುಮಾರು 12.2 ಲಕ್ಷಕೋಟಿ ರೂ)

ಅಮೆರಿಕದ ಜೆಫ್ ಬೆಜೋಸ್ ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುವರಾದರೂ ಅಮೇಜಾನ್ ಇವರ ಟ್ರಂಪ್ ಕಾರ್ಡ್. ಅಮೇಜಾನ್ ಇಂದು ವಿಶ್ವದ ಪ್ರಮುಖ ಆನ್‌ಲೈನ್ ಶಾಪಿಂಗ್ ಮಳಿಗೆಯಾಗಿ ಬೆಳೆದಿದೆ. ಬ್ಲೂ ಆರಿಜಿನ್, ಆಲ್ಟೋಸ್ ಲ್ಯಾಬ್ಸ್, ಬೇಜೋಸ್ ಎಕ್ಸ್‌ಪೆಡಿಶನ್ಸ್ ಇತ್ಯಾದಿ ಸಂಸ್ಥೆಗಳನ್ನೂ ಅವರು ನಡೆಸುತ್ತಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯನ್ನೂ ಅವರು ಖರೀದಿಸಿದ್ದಾರೆ.

ಗೌತಮ್ ಅದಾನಿ ನಂ. 3

ಗೌತಮ್ ಅದಾನಿ ನಂ. 3

ಗೌತಮ್ ಅದಾನಿ ಆಸ್ತಿ ಮೌಲ್ಯ: 137 ಬಿಲಿಯನ್ ಡಾಲರ್ (ಸುಮಾರು 11 ಲಕ್ಷಕೋಟಿ ರೂ).

ಗುಜರಾತ್‌ನ ಗೌತಮ್ ಅದಾನಿ ಜವಳಿ ಕ್ಷೇತ್ರದಿಂದ ಆರಂಭಿಸಿ ಸಿಮೆಂಟ್, ಉಷ್ಣ ವಿದ್ಯುತ್ ಸ್ಥಾವರ, ಬಂದರು, ವಿಮಾನ ನಿಲ್ದಾಣ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ತನ್ನ ಉದ್ದಿಮೆ ಸಾಮ್ರಾಜ್ಯ ವಿಸ್ತರಿಸಿದ್ದಾರೆ.

ಬರ್ನಾರ್ಡ್ ಆರ್ನಾಲ್ಟ್ ನಂ. 4

ಬರ್ನಾರ್ಡ್ ಆರ್ನಾಲ್ಟ್ ನಂ. 4

ಬರ್ನಾರ್ಡ್ ಆರ್ನಾಲ್ಟ್ ಆಸ್ತಿ ಮೌಲ್ಯ: 136 ಬಿಲಿಯನ್ ಡಾಲರ್ (10.8 ಲಕ್ಷಕೋಟಿ ರೂ)

ಫ್ರಾನ್ಸ್ ದೇಶದ ಬರ್ನಾರ್ಡ್ ಆರ್ನಾಲ್ಟ್ ಎಲ್‌ವಿಎಂಎಚ್ ಎಂಬ ಕಂಪನಿಯ ಒಡೆಯ. ಅನೇಕ ಮದ್ಯ ಬ್ರ್ಯಾಂಡ್‌ಗಳು, ಲಕ್ಸುರಿ ಮತ್ತು ಫ್ಯಾಷನ್ ವಸ್ತುಗಳು, ಪರ್ಫ್ಯೂಮ್ ಮತ್ತು ಕಾಸ್ಮೆಟಿಕ್ಸ ವಸ್ತುಗಳು, ವಾಚು, ಒಡವೆ ಇತ್ಯಾದಿ ಬಹಳ ವಿಸ್ತೃತವಾದ ವ್ಯವಹಾರಗಳನ್ನು ಬರ್ನಾರ್ಡ್ ಹೊಂದಿದ್ದಾರೆ. ವಿಶ್ವದ ಪ್ರತಿಷ್ಠಿತ ವಾಚ್ ಬ್ರ್ಯಾಂಡ್ ಆಗಿರುವ ಊಬ್ಲೋ(Hublot) ಕೂಡ ಇವರ ಕಂಪನಿಯದ್ದೇ.

ಬಿಲ್ ಗೇಟ್ಸ್ ನಂಬರ್ 5

ಬಿಲ್ ಗೇಟ್ಸ್ ನಂಬರ್ 5

ಬಿಲ್ ಗೇಟ್ಸ್ ಆಸ್ತಿ ಮೌಲ್ಯ: 117 ಬಿಲಿಯನ್ ಡಾಲರ್ (ಸುಮಾರು 9.3 ಲಕ್ಷಕೋಟಿ ರೂ)

ಅಮೆರಿಕದ ಬಿಲ್ ಗೇಟ್ಸ್ ಹೆಸರು ಭಾರತೀಯರಿಗೆ ಹೆಚ್ಚು ಪರಿಚಿತ. ಅವರು ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯಸ್ಥ. ಭಾರತದಲ್ಲಿ ಬಳಸಲಾಗುತ್ತಿರುವ ಬಹುತೇಕ ಕಂಪ್ಯೂಟರುಗಳಿಗೆ ಮೈಕ್ರೋಸಾಫ್ಟ್‌ನ ತಂತ್ರಾಂಶಗಳೇ ಶಕ್ತಿ ತುಂಬಿರುವುದು.

ಬಿಲ್ ಗೇಟ್ಸ್ ದಾನ ಮಾಡುವುದರಲ್ಲೂ ಎತ್ತಿದ ಕೈ ಎಂದು ಖ್ಯಾತರಾಗಿದ್ದಾರೆ. ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಮೂಲಕ ಕೋಟಿ ಕೋಟಿ ಹಣವನ್ನು ಇವರು ಸಾಮಾಜಿಕ ಕಾರ್ಯಗಳಿಗೆ ಮೀಡಲಿಡುತ್ತಾರೆ. ವಿಶ್ವದ ಅನೇಕ ದೇಶಗಳಲ್ಲಿ ಇವರು ವಿವಿಧ ಎನ್‌ಜಿಒಗಳಿಗೆ ಧನಸಹಾಯ ಮಾಡುತ್ತಾರೆ.

ಇತರ ಶ್ರೀಮಂತರು ಮತ್ತು ಭಾರತೀಯರು

ಇತರ ಶ್ರೀಮಂತರು ಮತ್ತು ಭಾರತೀಯರು

6) ವಾರನ್ ಬಫೆಟ್, ಅಮೆರಿಕ: 100 ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂ)
7) ಲಾರಿ ಪೇಜ್, ಅಮೆರಿಕ: 100 ಬಿಲಿಯನ್ ಡಾಲರ್ (8 ಲಕ್ಷ ಕೋಟಿ ರೂ)
8) ಸೆರ್ಗೇಯ್ ಬ್ರಿನ್, ಅಮೆರಿಕ: 95.8 ಬಿಲಿಯನ್ ಡಾಲರ್ (7.65 ಲಕ್ಷ ಕೋಟಿ ರೂ)
9) ಸ್ಟೀವ್ ಬಾಲ್ಮರ್, ಅಮೆರಿಕ: 93.7 ಬಿಲಿಯನ್ ಡಾಲರ್ (ಸುಮಾರು 7.5 ಲಕ್ಷ ಕೋಟಿ ರೂ)
10) ಲ್ಯಾರಿ ಎಲಿಸನ್, ಅಮೆರಿಕ: 93.3 ಬಿಲಿಯನ್ ಡಾಲರ್ (ಸುಮಾರು 7.4 ಲಕ್ಷ ಕೋಟಿ ರೂ)

ಟಾಪ್-100ನಲ್ಲಿರುವ ಇತರ ಭಾರತೀಯರು
11) ಮುಕೇಶ್ ಅಂಬಾನಿ: 91.9 ಬಿಲಿಯನ್ ಡಾಲರ್
47) ಅಜೀಮ್ ಪ್ರೇಮ್‌ಜೀ: 25.3 ಬಿಲಿಯನ್ ಡಾಲರ್
54) ಶಿವ್ ನಾದರ್: 22.7 ಬಿಲಿಯನ್ ಡಾಲರ್
59) ರಾಧಾಕಿಶನ್ ದಾಮಾನಿ: 21.8 ಬಿಲಿಯನ್ ಡಾಲರ್
94) ಲಕ್ಷ್ಮೀ ಮಿತ್ತಲ್: 16.3 ಬಿಲಿಯನ್ ಡಾಲರ್

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+