• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1 ಕೋಟಿ ಬಳಕೆದಾರರನ್ನು ತಲುಪಿದ ಸಂಭ್ರಮದಲ್ಲಿ Koo (ಕೂ)

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಮೊಟ್ಟ ಮೊದಲ ಬಾರಿಗೆ ಭಾರತೀಯರ ಆದ್ಯತೆಯ ಸ್ಥಳೀಯ ಭಾಷೆಗಳಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಅವಕಾಶವನ್ನು ಸೃಷ್ಟಿಸುವ ಮೂಲಕ Koo (ಕೂ) ಸಂಚಲನ ಮೂಡಿಸಿದೆ.

ಭಾರತದ ಬಹು ಭಾಷೆಯ ಮೈಕ್ರೋ ಬ್ಲಾಗಿಂಗ್ ಅಪ್ಲಿಕೇಶನ್ Koo (ಕೂ), 1 ಕೋಟಿ (10 ಮಿಲಿಯನ್) ಡೌನ್‌ಲೋಡ್‌ಗಳನ್ನು ದಾಟಿದೆ, ಮಾರ್ಚ್ 2020 ರಲ್ಲಿ ಪ್ರಾರಂಭವಾದಾಗಿನಿಂದ ಭಾರೀ ಬೆಳವಣಿಗೆಯನ್ನು ದಾಖಲಿಸಿದ ವೇದಿಕೆಯು ಈಗ ಭಾಗಶಃ ಎಲ್ಲಾ ವರ್ಗದ ಜನರನ್ನು ಹೊಂದಿದೆ. ಚಲನಚಿತ್ರ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು, ಲೇಖಕರು, ಪತ್ರಕರ್ತರಂತಹ ಹಲವು ಪ್ರಖ್ಯಾತರು - ತಮ್ಮ ಮನದ ಮಾತುಗಳನ್ನು ಪ್ರತಿನಿತ್ಯ ತಮ್ಮ ಫಾಲೋವರ್ಸ್ ಗಳೊಂದಿಗೆ ಎಂಟು ಭಾಷೆಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ.

ಸರಣಿ ಉದ್ಯಮಿಗಳಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡಾವತ್ಕ ಅವರ ಕನಸಿನ ಕೂಸಾದ Koo (ಕೂ) ಈಗ, ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಅಸ್ಸಾಮಿ, ಬಾಂಗ್ಲಾ ಮತ್ತು ಇಂಗ್ಲಿಷ್ ಸೇರಿದಂತೆ 8 ಭಾಷೆಗಳಲ್ಲಿ ಲಭ್ಯವಿದೆ. ಭಾರತದಲ್ಲೇ-ಮೊದಲು ಎಂಬ ಪರಿಕಲ್ಪನೆಯೊಂದಿಗೆ ವೇದಿಕೆಯನ್ನು ನಿರ್ಮಿಸಲಾಗಿದ್ದು, Koo (ಕೂ)ನಲ್ಲಿ ಹಲವಾರು ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದಾರೆ, ಇದು ಹೆಚ್ಚಿನ ಭಾರತೀಯರು ಆನ್‌ಲೈನ್ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ವೇದಿಕೆಯ ಮೂಲಕ ತಮ್ಮನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ.

ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?

ಒಂದೇ ಭಾಷೆಯಲ್ಲಿ ಒಂದೇ ರೀತಿಯ ಆಸಕ್ತಿ ಹೊಂದಿರುವ Koo (ಕೂ) Users (ಬಳಕೆದಾರರನ್ನು) ಹುಡುಕಲು ಸಹಾಯ ಮಾಡುವ ಮೂಲಕ ವಿವಿಧ ಭಾಷಾ ಸಮುದಾಯಗಳಲ್ಲಿ Koo (ಕೂ) ಆಳವಾದ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಮುಂಬರುವ ದಿನಗಳಲ್ಲಿ ಭಾರತ ಯೋಚಿಸುವ ರೀತಿಯಲ್ಲಿ ಭಾರತೀಯರಿಗೆ ಹಲವಾರು ವೈಶಿಷ್ಟ್ಯಗಳನ್ನು ಬಿಡುಗಡೆಮಾಡಲು Koo (ಕೂ) ಬದ್ಧವಾಗಿದೆ.

ಆತ್ಮನಿರ್ಭರ್ ಡಿಜಿಟಲ್ ಇಂಡಿಯಾ

ಆತ್ಮನಿರ್ಭರ್ ಡಿಜಿಟಲ್ ಇಂಡಿಯಾ

Koo (ಕೂ) ವಕ್ತಾರರು ಹೇಳಿದಂತೆ, "ಡಿಜಿಟಲ್ ಪ್ಲಾಟ್‌ಫಾರ್ಮ್ ರಚಿಸುವ ಕನಸಿನೊಂದಿಗೆ Koo (ಕೂ)ವನ್ನು ಪ್ರಾರಂಭಿಸಲಾಯಿತು, ಇಲ್ಲಿ ಲಕ್ಷಾಂತರ ಭಾರತೀಯರು ಮುಕ್ತವಾಗಿ ತಮ್ಮ ಮನದಾಳವನ್ನು ವ್ಯಕ್ತಪಡಿಸಬಹುದು ಮತ್ತು ಅವರ ಆದ್ಯತೆಯ ಭಾಷೆಯಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು. ನಾವು ಮಾರ್ಚ್ 2020 ರಲ್ಲಿ Koo (ಕೂ)ವನ್ನು ಪ್ರಾರಂಭಿಸಿದಾಗಿನಿಂದ, Users (ಬಳಕೆದಾರರ) ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿದೆ. Koo (ಕೂ) ಈಗ 1 ಕೋಟಿ ಡೌನ್‌ಲೋಡ್‌ಗಳನ್ನು ಸಾಧಿಸಿದ್ದು ಭವಿಷ್ಯದಲ್ಲಿ ನಮ್ಮ ಬೆಳವಣಿಗೆಯು ನಾವು ಈ ಹಿಂದೆ ನೋಡಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿರುತ್ತದೆ. "ಆತ್ಮನಿರ್ಭರ್ ಡಿಜಿಟಲ್ ಇಂಡಿಯಾ" ಕನಸನ್ನು ನನಸಾಗಿಸಲು ಮತ್ತು ತಂತ್ರಜ್ಞಾನ ಮತ್ತು ಭಾಷೆಗಳ ಮೂಲಕ ದೇಶವನ್ನು ಒಗ್ಗೂಡಿಸಲು ಭಾರತವು ಬಯಸುತ್ತಿರುವುದರಿಂದ ನಾವು ದೇಶೀಯ ಡಿಜಿಟಲ್ ಕಂಪನಿಗಳು ಜಾಗತಿಕವಾಗುವುದಕ್ಕಾಗಿ ದಾರಿ ಮಾಡಿಕೊಡಲು ವಿನಮ್ರ ಮತ್ತು ಉತ್ಸುಕರಾಗಿದ್ದೇವೆ.

ಅನೇಕ ಗಣ್ಯರನ್ನು ಹೊಂದಿದೆ

ಅನೇಕ ಗಣ್ಯರನ್ನು ಹೊಂದಿದೆ

Koo (ಕೂ) ವೇದಿಕೆ ಅನೇಕ ಗಣ್ಯರನ್ನು ಹೊಂದಿದೆ. ಅನುಪಮ್ ಖೇರ್, ಟೈಗರ್ ಶ್ರಾಫ್, ಕಂಗನಾ ರಣಾವತ್ ಮುಂತಾದ ಪ್ರಮುಖ ನಟರಷ್ಟೇಅಲ್ಲದೆ, ನಿತಿನ್ ಗಡ್ಕರಿ, ಕಮಲ್ ನಾಥ್, ಅಶೋಕ್ ಗೆಹ್ಲೋಟ್, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಸುಪ್ರಿಯಾ ಸುಲೆ, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ರವಿ ಶಂಕರ್ ಪ್ರಸಾದ್, ಸಂಜಯ್ ಸಿಂಗ್, ವೈಎಸ್ ಜಗನ್ ಮೋಹನ್ ರೆಡ್ಡಿ, ಬಸವರಾಜ ಬೊಮ್ಮಾಯಿ, ಹೆಚ್. ಡಿ. ಕುಮಾರಸ್ವಾಮಿ, ಭೂಪಿಂದರ್ ಸಿಂಗ್ ಹೂಡಾ ಮತ್ತು ಚಂದ್ರಶೇಖರ್ ಆಜಾದ್ ರಂತಹ ಪ್ರಮುಖ ಮಂತ್ರಿಗಳು ಮತ್ತು ರಾಜಕಾರಣಿಗಳು, ಮೊಹಮ್ಮದ್ ಶಮಿ, ವೃದ್ಧಿಮಾನ್ ಸಹಾ, ಆಕಾಶ್ ಚೋಪ್ರಾ, ಜಾವಗಲ್ ಶ್ರೀನಾಥ್, ಸೈನಾ ನೆಹ್ವಾಲ್, ಅಭಿನವ್ ಬಿಂದ್ರಾ, ರವಿಕುಮಾರ್ ದಹಿಯಾ, ಮೇರಿ ಕೋಮ್ ಮತ್ತು ಅನೇಕ ಕ್ರೀಡಾ ಪಟುಗಳು.

ಹಲವು ಸಚಿವಾಲಯಗಳಿವೆ

ಹಲವು ಸಚಿವಾಲಯಗಳಿವೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY), ಪತ್ರಿಕಾ ಮಾಹಿತಿ ಬ್ಯೂರೋ (PIB), ರೈಲ್ವೇ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮೈಗೋವ್, ಡಿಜಿಟಲ್ ಇಂಡಿಯಾ, ಬಿ.ಎಸ್.ಎನ್.ಎಲ್ , ಇಂಡಿಯಾ ಪೋಸ್ಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (NIELIT) Koo (ಕೂ) ನಲ್ಲಿ ಉಪಸ್ಥಿತರಿದ್ದಾರೆ.

ಭಾರತದ 14 ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳ ರಾಜಕಾರಣಿಗಳು - ಪ್ರಾದೇಶಿಕ, ರಾಷ್ಟ್ರೀಯ - ಮತ್ತು ಮಾಧ್ಯಮ ಸಂಸ್ಥೆಗಳು ಕೂಡ Koo (ಕೂ) ನಲ್ಲಿ ಸಕ್ರಿಯವಾಗಿವೆ. Koo(ಕೂ) ಪ್ಲಾಟ್‌ಫಾರ್ಮ್ ಈಗ ಸರ್ಕಾರಿ ಇಲಾಖೆಗಳು ಮತ್ತು ಗಣ್ಯ ವ್ಯಕ್ತಿಗಳ ಆತಿಥ್ಯವನ್ನು ಹೊಂದಿದ್ದು ಅವರು ಈ ವೇದಿಕೆಯನ್ನು ಹಲವು ಭಾರತೀಯ ಭಾಷೆಗಳಲ್ಲಿ ತಮ್ಮ ಪ್ರಗತಿಯನ್ನು ಪ್ರದರ್ಶಿಸಲು ಮತ್ತು ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಬಳಸುತ್ತಾರೆ.

Koo (ಕೂ) ಬಗ್ಗೆ:

Koo (ಕೂ) ಬಗ್ಗೆ:

Koo (ಕೂ) ಮಾರ್ಚ್ 2020 ರಲ್ಲಿ ಇಂಗ್ಲಿಷ್ ಹಾಗು ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸುವ ಲಕ್ಷಾಂತರ ಭಾರತೀಯರಿಗೆ ಧ್ವನಿ ನೀಡುತ್ತದೆ.

Koo (ಕೂ) ಪ್ರಸ್ತುತ ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಅಸ್ಸಾಮಿ, ಗುಜರಾತಿ, ಬಾಂಗ್ಲಾ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಲಭ್ಯವಿದ್ದು, ಭಾರತದಾದ್ಯಂತದ ಜನರು ತಮ್ಮ ಮಾತೃಭಾಷೆಯಲ್ಲಿ ಆನ್‌ಲೈನ್‌ನಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ Users (ಬಳಕೆದಾರರಿಗೆ) ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ Koo (ಕೂ) ಒಂದು ವೇದಿಕೆಯನ್ನು ಒದಗಿಸುತ್ತದೆ.

ಫೆಬ್ರವರಿ ಮತ್ತು ಆಗಸ್ಟ್ 2021 ರ ನಡುವೆ, 85 ಲಕ್ಷ Users (ಬಳಕೆದಾರರು) (8.5 ಮಿಲಿಯನ್) Koo (ಕೂ) ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. Koo (ಕೂ) ಆ್ಯಪ್ ಗುಜರಾತಿ ಮತ್ತು ಪಂಜಾಬಿಯಲ್ಲಿ ಲಭ್ಯವಾಗಲಿದೆ. Koo (ಕೂ) ಆ್ಯಪ್ ಶೀಘ್ರದಲ್ಲೇ ಗುಜರಾತಿ ಮತ್ತು ಪಂಜಾಬಿಯಲ್ಲಿ ಲಭ್ಯವಾಗಲಿದೆ.

English summary
India’s multi-language micro-blogging app Koo has crossed 1 Crore (10 million) downloads, registering a massive growth since its launch in March 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion