ಸಾಮಾಜಿಕ ಮಾಧ್ಯಮ ದಿನ: ಬಳಕೆದಾರರನ್ನು ಆಹ್ವಾನಿಸುತ್ತಿದೆ 'ಕೂ' ಹೊಸ ಅಭಿಯಾನ!
ಬೆಂಗಳೂರು, ಜೂ.30: ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸುತ್ತಾ, ಭಾರತದ ಅತ್ಯಂತ ಆತ್ಮೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳಲ್ಲಿ ಒಂದಾದ ಕೂ ವೇದಿಕೆ ರೋಮಾಂಚಕ ಅಭಿಯಾನವನ್ನು ಪ್ರಾರಂಭಿಸಿದೆ - #ತುಸುಹೆಚ್ಚುಸಾಮಾಜಿಕವಾಗೋಣ.
ಪ್ರೀತಿ ಇರಲಿ, ಅಪೇಕ್ಷೆ ಇರಲಿ ನಾವು ಭಾರತೀಯರು ಎಲ್ಲಾ ವಿಷಯದಲ್ಲೂ ಒಂದು ಮುಷ್ಟಿ ಹೆಚ್ಚು ತೋರ್ಪಡಿಸುತ್ತೇವೆ ಎನ್ನುವುದನ್ನು ಈ ಅಭಿಯಾನ ಸಾರುತ್ತದೆ. ಒಂದು ಅದ್ಭುತ ವಿಡಿಯೋ ಮೂಲಕ ಜನರು ತಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲ ಹೆಚ್ಚಿನದನ್ನ ಮೆಲುಕುಹಾಕುವುದನ್ನು ಮತ್ತು ನೈಜ ಸಮಯದಲ್ಲಿ 10 ಭಾಷೆಗಳಲ್ಲಿ ಕೂ ಮಾಡುವ ಮೂಲಕ ತುಸು ಹೆಚ್ಚು ಅಭಿವ್ಯಕ್ತಿಸುವುದನ್ನು ಈ ಅಭಿಯಾನ ಪ್ರೇರೇಪಿಸುತ್ತದೆ.
ತಾಯಿಯೊಂದಿಗಿನ ತುಸು ಹೆಚ್ಚೆನಿಸುವ ನಾಟಕೀಯ ಮಾತುಗಳು, ಸಿನಿಮಾದ ವಿಶೇಷ ಹೆಚ್ಚುವರಿ ಡೈಲಾಗ್ ಗಳು, ಹೆಚ್ಚುವರಿ ನಿದ್ರೆ, ಗೋಲ್ ಗಪ್ಪಾಗಳನ್ನು ಸವಿಯುವಾಗ ಬಾಯಿ ಸೇರುವ ಹೆಚ್ಚುವರಿ ಪಾನಿ ಪೂರಿಗಳು..! ಹೀಗೆ ದಿನನಿತ್ಯದ ಜೀವನದ ಸನ್ನಿವೇಶಗಳು ಮತ್ತು ಸಂಭಾಷಣೆಗಳನ್ನು ಚಿತ್ರಿಸುವ ವಿಡಿಯೋ ಭಾರತೀಯರು ನಲುಮೆಯಿಂದ ಆನಂದಿಸುವ ಹೆಚ್ಚುವರಿಗಳನ್ನು ಆನಂದಗಳನ್ನು ಬಿಂಬಿಸುತ್ತದೆ.

ಬದುಕಿನ ಎಲ್ಲಾ ಹೆಚ್ಚುವರಿ ಆಂಶಗಳನ್ನು ಸಂಭ್ರಮಿಸುತ್ತ ಜೀವಿಸುವ ಬಳಕೆದಾರರನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸುವ ಮೂಲಕ #ತುಸುಹೆಚ್ಚುಸಾಮಾಜಿಕವಾಗೋಣ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಕವನಗಳು, ಆಧ್ಯಾತ್ಮಿಕತೆ, ಸಂಗೀತ ಅಥವಾ ಪಾಕವಿಧಾನಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುವ ಬಳಕೆದಾರರನ್ನು ಕೂ ವೇದಿಕೆ ಒಳಗೊಂಡಿದೆ, ಹಾಗಾಗಿ ಈ ಅಭಿಯಾನ ಇಡೀ ಭಾರತದೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.
ಭಾಷೆಯ ಗಡಿಯನ್ನು ಮೀರಲು ಈ ಅಭಿಯಾನವು ಪ್ರೇರಣೆ ನೀಡುವ ಮೂಲಕ ಇತರ ರಾಜ್ಯಗಳ, ಸಂಸ್ಕೃತಿಗಳ ಜನರೊಂದಿಗೆ ಸಂವಹನ ನಡೆಸಲು ಮತ್ತು ಭಾರತವನ್ನು ಅರಿಯಲು ಕೂ ವೇದಿಕೆ ಆಳವಾದ ಸಾಮಾಜಿಕ ಸಂಪರ್ಕವನ್ನು ನಿರ್ಮಿಸುತ್ತದೆ. ಈಗ ಕೂ ಜೊತೆಗೆ ಭಾರತ ಯಾವಾಗಲೂ ತುಸುಹೆಚ್ಚು ಸಾಮಾಜಿಕವಾಗಿರಲಿದೆ ಎಂಬ ಸಂದೇಶದ ಸುತ್ತ #ತುಸು ಹೆಚ್ಚುಸಾಮಾಜಿಕವಾಗೋಣ ಅಭಿಯಾನವನ್ನು ಹೆಣೆಯಲಾಗಿದೆ.
#ತುಸುಹೆಚ್ಚುಸಾಮಾಜಿಕವಾಗೋಣ - ವೇದಿಕೆಯ ಅಂತರ್ಗತ ಸ್ವರೂಪವನ್ನು ಎತ್ತಿ ತೋರಿಸುತ್ತದೆ, ಇದು ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರರಿಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮವನ್ನು ಅನುಭವಿಸಲು ಮತ್ತು ಆನಂದಿಸಲು ಮುಕ್ತ ಅವಕಾಶ ನೀಡುತ್ತದೆ. ಆರಾಮದಾಯಕ ಭಾಷೆಯಲ್ಲಿ ಮತ್ತು ಆಯ್ಕೆಯ ವಿಷಯದಲ್ಲಿ ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನೂ ಒದಗಿಸುತ್ತದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications