Get Updates
Get notified of breaking news, exclusive insights, and must-see stories!

ಕುಡುಕರು ಖುಷಿಪಡೋ ಸುದ್ದಿ: ಬುಕ್ ಮಾಡಿದರೆ 10 ನಿಮಿಷದಲ್ಲೇ ಮನೆ ಬಾಗಿಲಿಗೆ ಮದ್ಯ!

ಕೋಲ್ಕತ್ತಾ, ಜೂನ್ 2: ಕೊರೊನಾ ವೈರಸ್ ಕಾಲದಲ್ಲಿ ಕುಡುಕರ ಪಾಡು ಕೇಳುವವರೇ ಇರಲಿಲ್ಲ. ಬೇಕು ಬೇಕು ಅಂದರೂ ಎಣ್ಣೆ ಖರೀದಿ ಮಾಡುವುದಕ್ಕೆ ಪರದಾಡುವಂತಾ ದುಸ್ಥಿತಿ ನಿರ್ಮಾಣವಾಗಿ ಬಿಟ್ಟಿತ್ತು. ಲಾಕ್ ಡೌನ್ ಸಂದರ್ಭದಲ್ಲಂತೂ ಕುಡುಕರ ಪಾಡು ಆ ದೇವರಿಗೇ ಪ್ರೀತಿ, ಆದರೆ ಈಗ ಕಾಲ ಬದಲಾಗಿದೆ.

ಕೋವಿಡ್-19 ಭೀತಿ ತಗ್ಗಿದೆ, ಲಾಕ್ ಡೌನ್ ಕಾಲ ಮುಗಿದಿದೆ. ಎಣ್ಣೆ ಅಂಗಡಿಗಳ ಬಾಗಿಲೂ ತೆಗೆದಿದೆ. ಇದರ ಮಧ್ಯೆ ಕುಡುಕರಿಗೆ ಖುಷಿ ಕೊಡುವ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಎಣ್ಣೆಯ ದಾಹ ನೀಗಿಸಿಕೊಳ್ಳುವುದಕ್ಕೆ ಕುಡುಕರಿಗೆ ಕಂಪನಿಯೊಂದು ಬಂಪರ್ ಆಫರ್ ಕೊಟ್ಟಿದೆ.

ಕೋಲ್ಕತ್ತಾದಲ್ಲಿ ಹೈದ್ರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ನೀವು ಬಯಸಿದರೆ ನಿಮ್ಮ ಮನೆ ಬಾಗಿಲಿಗೆ ಎಣ್ಣೆಯನ್ನು ಸರಬರಾಜು ಮಾಡುವುದಕ್ಕೆ ಸೈ ಎನ್ನುತ್ತಿದೆ. ನೀವು ಆರ್ಡರ್ ಮಾಡಿದ ಜಸ್ಟ್ 10 ನಿಮಿಷದಲ್ಲೇ ನಿಮ್ಮಿಷ್ಟದ ಎಣ್ಣೆ ಬಾಟಲಿ ನಿಮ್ಮ ಮನೆಗೆ ತಲುಪುತ್ತದೆ.

ಹಾಗಿದ್ದರೆ ಆನ್‌ಲೈನ್‌ನಲ್ಲಿ ಎಣ್ಣೆ ಬುಕ್ಕಿಂಗ್ ಮಾಡುವುದು ಹೇಗೆ?, ಎಣ್ಣೆ ಬುಕ್ಕಿಂಗ್ ಮಾಡುವುದಕ್ಕೆ ಇರುವ ಮಾರ್ಗವೇನು?, ಆನ್‌ಲೈನ್‌ನಲ್ಲಿ ಎಣ್ಣೆ ಬುಕ್ ಮಾಡುವುದರಿಂದ ಏನೇನು ಲಾಭವಾಗುತ್ತದೆ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಹಾಗೂ ಮದ್ಯಪ್ರಿಯರಿಗೆ ಮಜಾ ಕೊಡುವ ಸುದ್ದಿಯಿದು.

ಮನೆ ಬಾಗಿಲಿಲ್ಲೇ ಸಿಗುವುದು ಎಣ್ಣೆಯ ಬಾಟಲಿ

ಮನೆ ಬಾಗಿಲಿಲ್ಲೇ ಸಿಗುವುದು ಎಣ್ಣೆಯ ಬಾಟಲಿ

ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ವಿನೂತನ ಪ್ರಯತ್ನದ ಮೂಲಕ ಮದ್ಯಪ್ರಿಯರ ಮನಸ್ಸು ಗೆಲ್ಲುವುದಕ್ಕೆ ಮುಂದಾಗಿದೆ. ಆನ್‌ಲೈನ್‌ನಲ್ಲಿ ನೀವು ಎಣ್ಣೆಯನ್ನು ಬುಕ್ ಮಾಡಿದರೆ, ನೀವು ನೀಡಿದ ವಿಳಾಸಕ್ಕೆ ಎಣ್ಣೆಯನ್ನು ತಲುಪಿಸಲಾಗುವುದು ಎಂದು ಕಂಪನಿಯು ಹೇಳಿಕೊಂಡಿದೆ. ಆ ಮೂಲಕ ಅಂಗಡಿಗಳಿಗೆ ಹೋಗಲಾಗದೇ ಎಣ್ಣೆಗಾಗಿ ಮನೆಯಲ್ಲೇ ಕುಳಿತು ಪರಿತಪಿಸುವ ಮದ್ಯಪ್ರಿಯರಿಗೆ ತಮ್ಮದೇ ಬ್ರ್ಯಾಂಡ್ ಅನ್ನು ಪರಿಚಯಿಸುವುದಕ್ಕೆ ಹೊಸ ಐಡಿಯಾವೊಂದನ್ನು ಮಾಡಿಕೊಂಡಿದೆ.

ಕೇವಲ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಎಣ್ಣೆ

ಕೇವಲ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಎಣ್ಣೆ

ಮದ್ಯವನ್ನು ಗ್ರಾಹಕರ ಮನೆಯ ಬಾಗಿಲಿಗೆ ಕೇವಲ 10 ನಿಮಿಷಗಳಲ್ಲಿ ತಲುಪಿಸಲಾಗುತ್ತದೆ. ಇನ್ನೋವೆಂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಮುಖ ಬ್ರ್ಯಾಂಡ್ ಬೂಜಿಯಾಗಿದ್ದು, ಇದು ಭಾರತದಲ್ಲಿ 10 ನಿಮಿಷದಲ್ಲೇ ಮದ್ಯವನ್ನು ವಿತರಿಸುವ ಮೊದಲ ಮದ್ಯ ವಿತರಣಾ ವೇದಿಕೆಯಾಗಿದೆ. ಆನ್‌ಲೈನ್ ಮದ್ಯದ ವಿತರಣೆಯನ್ನು ಈಗಾಗಲೇ ದೇಶದ ಹಲವಾರು ಭಾಗಗಳಲ್ಲಿ ಶುರು ಮಾಡಲಾಗಿದೆ. ಆದರೆ ಯಾವುದೇ ಕಂಪನಿಗಳು ಬೂಜಿ ಮಾಡುವಷ್ಟು ವೇಗವಾಗಿ ಮದ್ಯವನ್ನು ವಿತರಣೆಯನ್ನು ಮಾಡುವುದಿಲ್ಲ ಎಂದು ಸ್ಟಾರ್ಟ್‌ಅಪ್ ಹೇಳಿಕೊಂಡಿದೆ. ಪಶ್ಚಿಮ ಬಂಗಾಳ ರಾಜ್ಯ ಅಬಕಾರಿ ಇಲಾಖೆಯಿಂದ ಅನುಮೋದನೆ ಪಡೆದ ನಂತರ ಪೂರ್ವ ಮಹಾನಗರದಲ್ಲಿ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಗ್ರಾಹಕರ ಸುತ್ತಮುತ್ತಲಿನ ಅಂಗಡಿಯಲ್ಲೇ ಖರೀದಿ

ಗ್ರಾಹಕರ ಸುತ್ತಮುತ್ತಲಿನ ಅಂಗಡಿಯಲ್ಲೇ ಖರೀದಿ

"ಬೂಜಿ ಎಂಬುದು ವಿತರಣಾ ಸಂಗ್ರಾಹಕವಾಗಿದೆ. 10 ನಿಮಿಷದಲ್ಲೇ ಎಣ್ಣೆಯನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಗ್ರಾಹಕರ ಮನೆಗೆ ಹತ್ತಿರದಲ್ಲಿರುವ ಎಣ್ಣೆ ಅಂಗಡಿಯಿಂದ ಅಂಗಡಿಯನ್ನು ಖರೀದಿ ಮಾಡಲಾಗುತ್ತದೆ, ಆ ಮೂಲಕ ಸೂಕ್ತ ಸಮಯದಲ್ಲಿ ಮದ್ಯವನ್ನು ತಲುಪಿಸು ಸಾಧ್ಯವಾಗುತ್ತದೆ," ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಂಪನಿಯ ಪ್ರಕಾರ, ಮದ್ಯದ ವಿತರಣೆಯು ಸೂಪರ್ ಫಾಸ್ಟ್ ಆಗಿರುವುದು ಮಾತ್ರವಲ್ಲದೆ, ಕೋಲ್ಕತ್ತಾದ ಜನರಿಗೆ ಕೈಗೆಟುಕುವ ದರದಲ್ಲಿಯೂ ಇರುತ್ತದೆ. "ಗ್ರಾಹಕ ಬೇಡಿಕೆ ಮತ್ತು ಮಾರುಕಟ್ಟೆಯಲ್ಲಿನ ಪ್ರಸ್ತುತ ಪೂರೈಕೆಯಲ್ಲಿನ ಕೊರತೆಯನ್ನು ತಗ್ಗಿಸಲು ಅಗ್ರಿಗೇಟರ್‌ಗಳಿಗೆ ಬಾಗಿಲು ತೆರೆಯುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ" ಎಂದು ಕಂಪನಿ ಹೇಳಿದೆ.

ಅಧಿಕೃತ ವೆಬ್‌ಸೈಟ್‌ಗೆ ವಿಸಿಟಿ ಕೊಡಿ ಎಣ್ಣೆ ಬುಕ್ ಮಾಡಿ

ಅಧಿಕೃತ ವೆಬ್‌ಸೈಟ್‌ಗೆ ವಿಸಿಟಿ ಕೊಡಿ ಎಣ್ಣೆ ಬುಕ್ ಮಾಡಿ

"ಅತ್ಯಾಧುನಿಕ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಜವಾಬ್ದಾರಿಯುತ ಮದ್ಯಪಾನಕ್ಕೆ ಬೂಜಿಯ ಬದ್ಧತೆ, ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ವಿತರಣೆ, ಕಲಬೆರಕೆ, ಅತಿಯಾದ ಸೇವನೆ, ಇತ್ಯಾದಿಗಳಂತಹ ಮದ್ಯದ ವಿತರಣೆಯೊಂದಿಗೆ ಸಂಬಂಧಿಸಿದ ಹೆಚ್ಚಿನ ಆತಂಕಗಳನ್ನು ಪರಿಹರಿಸಲಾಗಿದೆ," ಎಂದು ಬೂಜಿ ಸಹ-ಸಂಸ್ಥಾಪಕ ಮತ್ತು ಸಿಇಒ ವಿವೇಕಾನಂದ ಬಲಿಜೆಪಲ್ಲಿ ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಆನ್‌ಲೈನ್‌ ಮದ್ಯವನ್ನು ಆರ್ಡರ್ ಮಾಡಲು ಆಸಕ್ತಿ ಹೊಂದಿರುವವರು ಬೂಜಿಯ ಅಧಿಕೃತ ವೆಬ್‌ಸೈಟ್‌ಗೆ ವಿಸಿಟ್ ಕೊಡಿ ನಿಮ್ಮಿಷ್ಟದ ಎಣ್ಣೆಯನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಅದು ಕೇವಲ 10 ನಿಮಿಷಗಳಲ್ಲಿ ಮದ್ಯವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಕಂಪನಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+