Kawasaki Ninja 300: ಭಾರತದಲ್ಲೇ ತಯಾರಾಗುತ್ತಿರುವ ಕವಾಸಕಿಯ ನಿಂಜಾ 300 ದರ, ವಿಶೇಷತೆ ತಿಳಿಯಿರಿ

ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ನಡುವೆಯೇ ಜಪಾನ್‌ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಕವಾಸಕಿ ಭಾರತದಲ್ಲೂ ವಿವಿಧ ಬೈಕ್ ಮಾದರಿಗಳನ್ನು ತಯಾರು ಮಾಡುತ್ತಿದೆ. ಹಾಗೆಯೇ ಇತ್ತೀಚೆಗಷ್ಟೇ ಈ ಕಂಪನಿಯ ಹೊಸ ಮಾದರಿಯ ಬೈಕ್‌ ಅನ್ನು ಬಿಡುಗಡೆ ಮಾಡಿತ್ತು. ಹಾಗಾದರೆ ಇದಕ್ಕೆ ಬೇಡಿಕೆ ಹೇಗಿದೆ ಹಾಗೂ ದರ, ವಿಶೇಷತೆಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕವಾಸಕಿ ಅಂದರೆ ಸಾಕು ಅದಕ್ಕೆ ಯಮಹಾ, ಬಿಎಂಡಬ್ಲ್ಯೂಗೆ ರೀತಿಯಲ್ಲಿ ಕಾಣಲಾಗುತ್ತದೆ. ಇನ್ನು ಇದರ ಉದ್ಪಾದನೆ ಮೊದಲು ಜಪಾನ್‌ನಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದ್ದರಿಂದ ಭಾರತಕ್ಕೆ ಬರುವಷ್ಟರಲ್ಲಿ ತೆರಿಗೆ ಎಲ್ಲಾ ಸೇರಿದಂತೆ ಹೆಚ್ಚುವರಿ ದರ ಆಗುತ್ತಿತ್ತು. ಆದರೆ ಇದೀಗ ಭಾರತಲ್ಲೆಯೇ ಇದನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಕಡಿಮೆ ದರದಲ್ಲಿ ಹೊಸ ಸೌಲಭ್ಯಗಳೊಂದಿಗೆ ಸಿಗಲಿದೆ. ಹಾಗಾದರೆ ಇದು ಹೊಸದಾಗಿ ಏನೆಲ್ಲ ಸೌಲಭ್ಯಗಳನ್ನು ಹೊಂದಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Know Special Features of Made-in-India Kawasaki Ninja 300

ಕವಾಸಕಿಯ ನಿಂಜಾ 300 ಬೈಕ್ ಬಿಡುಗಡೆಯಾಗಿದ್ದು, ಇದಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಗ್ರಾಹಕರನ್ನು ಸೆಳೆಯುವ ಮೂಲಕ ಈ ಬೈಕ್‌ ಹವಾ ಕ್ರಿಯೆಟ್‌ ಸೃಷ್ಟಿಸಿದೆ. ಇನ್ನು ಈ ಬೈಕ್ ಇನ್ಮುಂದೆ ಭಾರತದಲ್ಲಿಯೇ ಉತ್ಪಾದನೆ ಆಗುತ್ತಿದ್ದು, ಹೊಸ ಬೈಕ್ ಎಕ್ಸ್ ಶೋರೂಂ ಪ್ರಕಾರ ದರ 3.43 ಲಕ್ಷ ರೂಪಾಯಿ ಬೆಲೆ ಆಗಿದೆ.

2013ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಆಗಿದ್ದ ಬೇಳೆ ಸಂಪೂರ್ಣವಾಗಿ ಸಿಬಿಯು ಆವೃತ್ತಿಯಾಗಿ ಮಾರಾಟ ಆಗುತ್ತಿದ್ದ ನಿಂಜಾ 300 ಬೈಕ್ ಮಾದರಿಯು ತುಂಬಾ ದುಬಾರಿ ದರದೊಂದಿಗೆ ಮಾರಾಟ ಆಗುತ್ತಿತ್ತು. ಸುಮಾರು 10 ವರ್ಷಗಳ ಹಿಂದೆಯೇ ಎಕ್ಸ್ ಶೋರೂಂ ದರ 3.50 ಲಕ್ಷ ಬೆಲೆ ಹೊಂದಿದ್ದ ನಿಂಜಾ 300 ಬೈಕ್ ಮಾದರಿಯು ಇದೀಗ ಭಾರದಲಲ್ಲಿಯೇ ಉತ್ಪಾದನೆ ಆಗುತ್ತಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ಹೊಂದಿದೆ.

ಈ ಮಾದರಿಯ ಬೈಕ್‌ ಅನ್ನು ಭಾರತ ಸೇರಿ ಇನ್ನಿತರ ಪ್ರಮುಖ ರಾಷ್ಟ್ರಗಳಲ್ಲಿ ಕವಾಸಕಿ ಕಂಪನಿಯು ನಿಂಜಾ 400 ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಭಾರತದಲ್ಲಿ ಮಾರಾಟ ಆಗುತ್ತಿರುವ ನಿಂಜಾ 300 ಬೈಕ್ ಮಾದರಿಯೇ ಬೇರೆ ದೇಶಗಳಲ್ಲಿ ನಿಂಜಾ 400 ಹೆಸರಿನಲ್ಲಿ ಸೇಲ್‌ ಮಾಡಲಾಗುತ್ತಿದೆ. ಅದರಲ್ಲೂ ಇದೀಗ ದೇಶಿಯ ಮಾರುಕಟ್ಟೆಯಲ್ಲಿನ ಹೊಸ ಆವೃತ್ತಿಯಲ್ಲಿ ಹೊದ ವಿನ್ಯಾಸದೊಂದಿದೆ ಮಾರಾಟ ಮಾಡಲಾಗುತ್ತಿದೆ.

2024ರ ನಿಂಜಾ 300 ಬೈಕ್ ಮಾದರಿಯು ಕ್ಯಾಂಡಿ ಲೈಮ್ ಗ್ರೀನ್ ಮತ್ತು ಮೂನ್ ಡಸ್ಟ್ ಗ್ರೇ ಬಣ್ಣಗಳಲ್ಲಿ ಸಿಗಲಿದೆ. ಇದು ಈ 300 ಸಿಸಿ ವಿಭಾಗದಲ್ಲಿರುವ ಮೊದಲ ಟ್ವಿನ್ ಸಿಲಿಂಡರ್ ಸೌಲಭ್ಯದ ಬೈಕ್ ಆವೃತ್ತಿ ಆಗಿದೆ. ಹೊಸ ಬೈಕ್ ಮಾದರಿಯಲ್ಲಿ 296 ಸಿಸಿ ಪ್ಯಾರಾಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ 38.88 ಹಾರ್ಸ್ ಪವರ್ ಮತ್ತು 26.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಜೊತೆಗೆ ಹೊಸ ಬೈಕ್ ಮಾದರಿಯ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪೋರ್ಕ್ಸ್ ಮತ್ತು ಹಿಂಬದಿಯಲ್ಲಿ ಮೊನೊಶಾಕ್ ಸಸ್ಷೆಂಷನ್ ನೀಡಲಾಗಿದ್ದು, ಸುರಕ್ಷತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್, 17 ಇಂಚಿನ ಅಲಾಯ್ ವ್ಹೀಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+