BMW Bike: ಭಾರತದಲ್ಲಿ ಬಿಡುಗಡೆಯಾದ ಅತೀ ಕಡಿಮೆ ದರದ ಜೆರ್ಮನ್‌ ಮೂಲದ ಬಿಎಂಡಬ್ಲ್ಯೂ ಬೈಕ್‌ನ ವಿಶೇಷತೆ ತಿಳಿಯಿರಿ

ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಬದಲಾವಣೆ ಕ್ರಾಂತಿಯೇ ಆಗುತ್ತಿದೆ. ಎಲ್ಲಾ ಕಂಪನಿಗಳು ತಾವೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಕಡಿಮೆ ದರದಲ್ಲಿ, ಅತ್ಯುತ್ತಮ ಸೌಲಭ್ಯಗಳುಳ್ಳ ಹೊಸ ಹೊಸ ಮಾದರಿಯ ಕಾರು, ಬೈಕ್‌ಗಳನ್ನು ಪರಿಚಯಿಸುತ್ತಲೇ ಇವೆ. ಇನ್ನೂ ಜಗತ್ತಿನಲ್ಲೇ ಭಾರೀ ಸದ್ದು ಮಾಡುತ್ತಿರುವ ಬಿಎಂಡಬ್ಲ್ಯೂ ಕೂಡ ಯುವ ಪೀಳಿಗೆಗೆ ಇಷ್ಟಕ್ಕೆ ತಕ್ಕಂತೆ ನೂತನ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಲೇ ಇದೆ.

ಜಗತ್ತಿನಾದ್ಯಂತ ಬಿಎಂಡಬ್ಲ್ಯೂ ಕಂಪನಿ ಜನಪ್ರಿಯ ಐಷಾರಾಮಿ ವಾಹನಗಳ ಬ್ರಾಂಡ್ ಎಂದು ಹೆಸರುವಾಸಿಯಾಗಿದೆ. ಈ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರೀಮಿಯಂ ಕಾರುಗಳು ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. 2 ವರ್ಷಗಳ ಹಿಂದೆ ಕಂಪನಿಯು BMW G 310 RR ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ ಹೆಚ್ಚಾಗಿದೆ. ಇನ್ನು ಬಿಎಂಡಬ್ಲ್ಯೂ ಇತ್ತೀಚೆಗೆ ನೂತನ G 310 RR ಮಾದರಿಯನ್ನು ಬಿಡುಗಡೆಗೊಳಿಸಿದೆ.

Know low price BMW bike s features details

BMW G 310 RR ಬೈಕ್ ಹಲವು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ವಾಹನದ ವಿನ್ಯಾಸವನ್ನು ಸುಧಾರಿಸಲು ಕೆಲವು ಬದಲಾವಣೆ ಮಾಡಲಾಗಿದ್ದು, ಈ ಮೋಟಾರ್‌ ಸೈಕಲ್ ಅನ್ನು ಇತ್ತೀಚೆಗೆ ರೇಸಿಂಗ್ ಮೆಟಾಲಿಕ್ ಬ್ಲೂ ಕಲರ್ ಸ್ಕೀಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ಕಾಸ್ಮಿಕ್ ಬ್ಲಾಕ್ ಮತ್ತು ಸ್ಟೈಲ್ ಸ್ಪೋರ್ಟ್ ರೂಪದಲ್ಲೂ ಕೂಡ ಲಭ್ಯ ಇದೆ. ಆದರೆ ವಾಹನದ ಪೀಚರ್ಸ್‌ಗಳು ಮಾತ್ರ ಬದಲಾವಣೆ ಆಗಿಲ್ಲ. ಆದರೂ ಅದರ ಗತ್ತು ಮಾತ್ರ ಇನ್ನೂ ಕಳೆದುಕೊಂಡಿಲ್ಲ.

BMW G 310 RR ಬೈಕ್ 313 cc ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್‌ ಹೊಂದಿದ್ದು, ಇದು 9,700 RPMನಲ್ಲಿ 33.52 bhpಯ ಗರಿಷ್ಠ ಶಕ್ತಿ ಮತ್ತು 7,700 RPMನಲ್ಲಿ 25.3 NMನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್‌ಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಇದ್ದು, ಗಂಟೆಗೆ 160 ಕಿಲೋ ಮೀಟರ್‌ ವೇಗವನ್ನು ಹೊಂದಿದೆ.

ಹಿಂದಿನ ಬೈಕ್‌ಗಳಿಗೆ ಹೋಲಿಕೆ ಮಾಡಿದರೆ, ಈ ಹೊಸ ಬಣ್ಣದ ಬೈಕ್‌ ಮಾತ್ರ ಭಾರೀ ಸೂಪರ್‌ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದು ಹಿಂದಿನ ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿಶಿಷ್ಟವಾದ ಸೀಟ್‌ ವ್ಯವಸ್ಥೆ ಮತ್ತು ಪಿಲಿಯನ್ ಅಡಿಯಲ್ಲಿ ಎಲ್‌ಇಡಿ ಲೈಟ್ ಅನ್ನು ಒಳಗೊಂಡಿದೆ.
ಇನ್ನು BMW G 310 RR ಬೈಕ್‌ ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯ ಇದ್ದು, ಇದರ ಎಕ್ಸ್‌ಶೋರೂಂ ದರ 3.05 ಲಕ್ಷ ರೂಪಾಯಿ ಆಗಿದೆ. ಇದನ್ನು BMW Motorrad ಅಧಿಕೃತ ಡೀಲರ್‌ಶಿಪ್‌ಗಳಿಂದ/ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+