Jawa 42 FJ: ಜಾವಾ 42 ಎಫ್‌ಜೆ ಬೈಕ್‌ನ ವಿಶೇಷತೆ, ದರಗಳ ಮಾಹಿತಿ ತಿಳಿಯಿರಿ
ರಾಯಲ್ ಎನ್‌ಫೀಲ್ಡ್ ಸೈಲೆನ್ಸರ್ ಸೌಂಡ್ ಕಡಿಮೆಯಾಗಿರಬಹುದು, ಆದರೆ ಎಲ್ಲಾ ಬೈಕ್ ಗಳಿಗೆ ಹೋಲಿಕೆ ಮಾಡಿದ್ರೆ ಮೊದಲಿನಿಂದಲೂ ಅದೇ ಗೇಜ್, ಶೇಪ್ ಉಳಿಸಿಕೊಂಡುಬಂದಿರುವ ಬೈಕ್ ಇದಾಗಿದೆ. ಇನ್ನು ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಜಾವಾದ ಈ ಬೈಕ್ ರಾಯಲ್ ಎನ್‌ಫೀಲ್ಡ್‌ಗೆ ಉತ್ತಮ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರ ವಿಶೇಷತೆ, ದರಗಳ ಮಾಹಿತಿ ಇಲ್ಲಿದೆ ತಿಳಿಯಿರಿ.
ಈಗಾಗಲೇ ರಾಯನ್ ಎನ್‌ಫೀಲ್ಡ್ ಲುಕ್‌ನಲ್ಲಿ ಬಿಡುಗಡೆಯಾದ ಹಲವು ಬೈಕ್‌ಗಳನ್ನು ಕ್ರೇಜ್ ಕಳೆದುಕೊಂಡುಬಿಟ್ಟಿವೆ. ಆದರೆ ಎನ್‌ಫೀಲ್ಡ್ ಮಾತ್ರ ಮೊದಲಿನಂತೆ ಕ್ರೇಜ್ ಹೊಂದಿದ್ದು, ಗ್ರಾಹಕರನ್ನು ತನ್ನೆಡೆಡೆ ಸೆಳೆಯುತ್ತಲೇ ಇದೆ. ಇನ್ನು ಇದೀಗ ಇದಕ್ಕೆ ಪ್ರತಿಸ್ಪರ್ಧಿಯಾಗಿ ಜಾವಾದ ಹೊಸ ಮಾದರಿ ಬೈಕ್‌ವೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದ ಬೈಕ್ ಮಾದರಿಗಳೊಂದಿಗೆ ರಾಯಲ್ ಎನ್‌ಫೀಲ್ಡ್‌ಗೆ ಉತ್ತಮ ಪೈಪೋಟಿ ನೀಡುತ್ತಿರುವ ಕ್ಲಾಸಿಕ್ ಲೆಜೆಂಡ್ಸ್ ಒಡೆತನದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಹೊಸದಾಗಿ ಜಾವಾ 42 ಎಫ್‌ಜೆ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
ಈ ಹೊಸ ಬೈಕ್ ಮಾದರಿಯು ವಿವಿಧ ವೆರಿಯೆಂಟ್‌ಗಳಲಗಲಿ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ಇದರ ದರ 1.99 ಲಕ್ಷದಿಂದ 2.20 ಲಕ್ಷ ರೂಪಾಯಿ ಬೆಲೆ ಇದೆ ಎಂದು ತಿಳಿದುಬಂದಿದೆ. ಸ್ಪೋರ್ಟಿಯರ್ ಮತ್ತು ಹೆಚ್ಚು ಶಕ್ತಿಶಾಲಿ ಜಾವಾ 42 ಎಫ್‌ಜೆ ಬೈಕ್ ಮಾದರಿಯು ಅರೊರಾ ಗ್ರೀನ್ ಮ್ಯಾಟೆ ಸ್ಪೋಕ್, ಅರೊರಾ ಗ್ರೀನ್ ಮ್ಯಾಟೆ ಅಲಾಯ್, ಮಿಸ್ಟಿಕ್ಯೂ ಕಾಪರ್ ಮತ್ತು ಕ್ಮಾಸ್ಮೊ ಬ್ಯೂ ಮ್ಯಾಟೆ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.
ಇದು ಸಾಮಾನ್ಯ ಜಾವಾ 42 ಬೈಕಿಗಿಂತಲೂ 26,000 ರೂಪಾಯಿನಷ್ಟು ದುಬಾರಿ ಬೆಲೆ ಆಗಿರಲಿದೆ. ಈ ಮಾದರಿಯು ಯೆಜ್ಡಿ ರೋಡ್ ಸ್ಟರ್ ಬೈಕ್‌ನ ವಿನ್ಯಾಸದಲ್ಲಿ ತಯಾರಾಗಿದ್ದು, ಜಾವಾ ಮೋಟಾರ್ ಸೈಕಲ್‌ಗಳ ಸಂಸ್ಥಾಪಕರಾಗಿದ್ದ ಫ್ರಾಂಟಿಸೆಕ್ ಜಾನೆಕೆಕ್ ಅವರ ನೆನಪಿಗಾಗಿ ಎಫ್‌ಜೆ ಬ್ಯಾಡ್ಜ್ ಬಳಕೆ ಮಾಡಲಾಗಿದೆ.
ಜೊತೆಗೆ ಅತ್ಯಾಧುನಿಕ ರೆಟ್ರೊ ವಿನ್ಯಾಸದೊಂದಿಗೆ ಮಿಂಚುತ್ತಿರುವ ಈ ಹೊಸ ಬೈಕ್‌ನಲ್ಲಿ ಅಲ್ಯುನಿಯಂನಿಂದ ನಿರ್ಮಾಣದ ಟ್ಯಾಂಕ್ ಕ್ಲಾಡಿಂಗ್, ಎಲ್ಇಡಿ ಹೆಡ್ ಲ್ಯಾಂಪ್, ಯೆಜ್ಡಿ ಬೈಕ್‌ನಲ್ಲಿರುವಂತೆ ಇನ್ಸ್ಟುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್ ಗೇರ್ ನೀಡಲಾಗಿದೆ.
ಡಬಲ್ ಕ್ರೇಡಲ್ ಫ್ರೇಮ್ ಚಾಸಿಸ್ ಹೊಂದಿರುವ ಜಾವಾ 42 ಎಫ್‌ಜೆ ಬೈಕ್‌ನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಪೋಕ್ ಅಥವಾ ಅಲಾಯ್ ವ್ಹೀಲ್ಸ್ ಆಯ್ಕೆ ಸಹ ಲಭ್ಯವಿದೆ. ಅಲ್ಲದೆ, ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನಲ್ ಎಬಿಎಸ್, ಬ್ಲ್ಯಾಕ್ಡ್ ಔಟ್ ಎಂಜಿನ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಪೈಪ್ ಸೇರಿದಂತೆ ಹಲವಾರು ಸ್ಪೋರ್ಟಿ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಸಸ್ಪೆನ್ಷನ್ ನೀಡಲಾಗಿದ್ದು, ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸಾರ್ವರ್ ನೀಡಲಾಗಿದೆ. ಇದು 790 ಎಂಎಂ ಸೀಟ್ ಎತ್ತರ ಮತ್ತು 178 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಬರೋಬ್ಬರಿ 184 ಕೆ.ಜಿ ಒಟ್ಟಾರೆ ತೂಕವನ್ನು ಒಳಗೊಂಡದೆ.
ಆದರೆ, ಇದರ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡದ ಯೆಜ್ಡಿ ಮೋಟಾರ್ ಸೈಕಲ್ಸ್ ಕಂಪನಿಯು ಸಾಮಾನ್ಯ ಜಾವಾ 42 ಬೈಕಿನಲ್ಲಿರುವಂತೆಯೇ 334 ಸಿಸಿ ಎಂಜಿನ್ ಜೋಡಣೆ ಮಾಡಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ 22.57 ಹಾರ್ಸ್ ಪವರ್ ಮತ್ತು 28.1 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಉತ್ತಮ ರೈಡಿಂಗ್ ಅನುಭವ ಕೊಡಲಿದ ಎಂದು ತಿಳಿದುಬಂದಿದೆ.












Click it and Unblock the Notifications