• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀನ್‌ಹೌಸ್ ಎಫೆಕ್ಟ್: ನಾವೆಷ್ಟು ಮಾಂಸ ತಿನ್ನಬೇಕು?

|
Google Oneindia Kannada News

ಹವಾಮಾನ ಬದಲಾವಣೆ ಎಂಬುದು ನಮ್ಮನ್ನು ಜಾಗತಿಕವಾಗಿ ಕಾಡುತ್ತಿರುವ ಮಹತ್ತರ ಸಮಸ್ಯೆಗಳಲ್ಲಿ ಪ್ರಮುಖವಾದುದು. ಇದು ಮನುಕುಲದ ಅಳಿವು ಉಳಿವಿನ ಪ್ರಶ್ನೆ ಮಾತ್ರವಲ್ಲ, ಭೂಮಿಯ ಜೀವ ಸಂಕುಲದ ಉಳಿವಿನ ಪ್ರಶ್ನೆಯೂ ಹೌದು.

ಹವಾಮಾನ ಬದಲಾವಣೆ, ಅಥವಾ ಕ್ಲೈಮೇಟ್ ಚೇಂಜ್‌ಗೆ ಮಾಂಸಾಹಾರ ಕಾರಣ ಎಂಬುದು ಬಹಳ ದಿನಗಳಿಂದ ಇರುವ ವಾದ. ಇದು ಹೌದು. ಮಾಂಸಾಹಾರವು ಪರೋಕ್ಷವಾಗಿ ಪರಿಸರಕ್ಕೆ ಮಾರಕವಾಗುತ್ತಿದೆ ಎಂಬ ತಜ್ಞರ ವಾದವನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ.

ಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿ

ಹವಾಮಾನ ಬದಲಾವಣೆಗೆ ಹಸಿರು ಅನಿಲ ಹೊರಸೂಸುವಿಕೆ ಪ್ರಮುಖ ಕಾರಣ. ಒಂದು ಅಂದಾಜು ಪ್ರಕಾರ, ಜಾಗತಿಕವಾಗಿ ಶೇ. 14.5ರಷ್ಟು ಗ್ರೀನ್‌ಹೌಸ್ ಗ್ಯಾಸ್ ಬಿಡುಗಡೆಗೆ ಹಸು, ಕುರಿ, ಕೋಳಿ ಇತ್ಯಾದಿ ಸಾಕುಪ್ರಾಣಿಗಳೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣ ಎನ್ನಲಾಗುತ್ತದೆ. ಅಂದರೆ, ಇಡೀ ವಿಶ್ವದಲ್ಲಿ ಲಾರಿ, ಬಸ್ಸು, ಕಾರು ಇತ್ಯಾದಿ ವಾಹನಗಳೆಲ್ಲವರೂ ಸೇರಿ ಹೊರಸೂಸುವ ಹಸಿರು ಅನಿಲಕ್ಕಿಂತ ಇದು ಹೆಚ್ಚು. ಮಾಂಸಕ್ಕಾಗಿ ಮನುಷ್ಯ ಸಾಕುವ ಪ್ರಾಣಿಗಳಿಂದಲೇ ಪರಿಸರಕ್ಕೆ ಮಾರಕವಾಗುತ್ತಿದೆ.

ಚಿಂತೆಯ ಸಂಗತಿ ಎಂದರೆ, ಮಾಂಸಾಹಾರ ಸೇವನೆ ಪ್ರಮಾಣ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ವಿಶ್ವಸಂಸ್ಥೆ ಮಾಡಿರುವ ಅಂದಾಜು ಪ್ರಕಾರ 2030ರಷ್ಟರಲ್ಲಿ ಮಾಂಸಾಹಾರಿಗಳ ಸಂಖ್ಯೆ ಈಗಿರುವುದಕ್ಕಿಂತ ಶೇ. 14ರಷ್ಟು ಹೆಚ್ಚಾಗುತ್ತದಂತೆ. ಮಧ್ಯಮ ಆದಾಯದ ದೇಶಗಳು ಬೆಳವಣಿಗೆ ಹೊಂದಿದಷ್ಟೇ ಮಾಂಸಾಹಾರಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ, ಹವಾಮಾನ ಬದಲಾವಣೆ ಸಮಸ್ಯೆ ಇನ್ನಷ್ಟು ಕ್ಲಿಷ್ಟಕರಗೊಳ್ಳಲಿದೆ.

ಪ್ರಾಣಿಗಳಿಂದ ಹವಾಮಾನ ಬದಲಾವಣೆ ಹೇಗೆ?

ಪ್ರಾಣಿಗಳಿಂದ ಹವಾಮಾನ ಬದಲಾವಣೆ ಹೇಗೆ?

ಇದಕ್ಕೆ ಒಂದೇ ಆಯಾಮದಲ್ಲಿ ಉತ್ತರ ಅಸಾಧ್ಯ. ಏನಾದರೂ ಆಗಬಹುದು. ನಾವು ಸಾಕುವ ಪ್ರಾಣಿಗಳು, ಅದರಲ್ಲೂ ಹಸು, ಕುರಿಗಳು ಮೇಯಲು ಸಾಕಷ್ಟು ಹುಲ್ಲುಗಾವಲು ಬೇಕು. ಅಥವಾ ಈ ಸಸ್ಯಾಹಾರಿ ಸಾಕು ಪ್ರಾಣಿಗಳಿಗೆ ಆಹಾರ ಒದಗಿಸಲು ಬಹಳಷ್ಟು ಹಸಿರು ಪ್ರದೇಶಗಳ ಅಗತ್ಯ ಇರುತ್ತದೆ. ಅದಕ್ಕಾಗಿ ಅನೇಕ ಅರಣ್ಯ ಪ್ರದೇಶಗಳು ನಾಶವಾಗುತ್ತಿವೆ, ಅಥವಾ ಕೃಷಿ ಪ್ರದೇಶಗಳಾಗಿ ಮಾರ್ಪಡುತ್ತಿವೆ.

ರೈತರು ಬೆಳೆ ಬೆಳೆಯುವ ಪ್ರದೇಶದಲ್ಲಿ ಶೇ. 35ಕ್ಕಿಂತ ಹೆಚ್ಚಿನ ಭಾಗ ಪಶುಗಳಿಗೆ ಮೇವು ಪೂರೈಸಲು ಬಳಕೆಯಾಗುತ್ತಿದೆ. ಅಮೆರಿಕದಲ್ಲಿ ಅರಣ್ಯ ಪ್ರದೇಶಗಳು ನಶಿಸುತ್ತಿವೆ ಎಂದು ಕೆಲ ವರದಿಗಳು ಹೇಳುತ್ತವೆ.

ನಮ್ಮ ಭೂಮಿಗೆ ಮಾರಕವಾಗುವ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗುವ ಗ್ರೀನ್ ಹೌಸ್ ಗ್ಯಾಸ್ ಅನ್ನು ನುಂಗಲು ಅರಣ್ಯ ಪ್ರದೇಶಗಳು ಅಗತ್ಯ.

UK-India Week 2022 ಎರಡನೇ ದಿನ: ಹವಾಮಾನ ಬದಲಾವಣೆ ಸಮಸ್ಯೆ ಮತ್ತು ತಂತ್ರಜ್ಞಾನ ಪರಿಹಾರ ಬಗ್ಗೆ ಚರ್ಚೆUK-India Week 2022 ಎರಡನೇ ದಿನ: ಹವಾಮಾನ ಬದಲಾವಣೆ ಸಮಸ್ಯೆ ಮತ್ತು ತಂತ್ರಜ್ಞಾನ ಪರಿಹಾರ ಬಗ್ಗೆ ಚರ್ಚೆ

ಪ್ರಾಣಿಗಳಿಂದ ಹೇಗೆ ಅಪಾಯ?

ಪ್ರಾಣಿಗಳಿಂದ ಹೇಗೆ ಅಪಾಯ?

ಒಂದು ಕೋಳಿ ಪ್ರತೀ ನೂರು ಗ್ರಾಂ ತೂಕ ಹೆಚ್ಚಲು ಇನ್ನೂರು ಗ್ರಾಂ ಆಹಾರ ಸೇವಿಸುತ್ತದೆ. ಹಾಗೆಯೇ, ಒಂದು ದನ ಒಂದು ಕಿಲೋ ತೂಕ ಹೆಚ್ಚಾಗಲು ಸುಮಾರು 10 ಕಿಲೋ ಆಹಾರ ಸೇವಿಸುತ್ತದೆ. ಹಂದಿಗೆ 5 ಕಿಲೋ ಬೇಕಾಗುತ್ತದೆ. ಇಲ್ಲಿ ತೂಕ ಹೆಚ್ಚಳದಲ್ಲಿ ಬಹುಪಾಲು ಹೋಗುವುದು ಆ ಪ್ರಾಣಿಯ ಮೂಳೆ, ಚರ್ಮ, ಹೊಟ್ಟೆಗೆ ಹೊರತು ಮಾಂಸಕ್ಕೆ ಹೆಚ್ಚೇನೂ ದಕ್ಕುವುದಿಲ್ಲ. ಈ ಪ್ರಾಣಿಗಳ ಮಾಂಸಕ್ಕಾಗಿ ಮನುಷ್ಯರು ಶೇ. 40ರಷ್ಟು ಕೃಷಿ ಪ್ರದೇಶಗಳನ್ನು ವಿನಿಯೋಗಿಸುತ್ತಿದ್ದಾರೆ.

ಇದರ ಅಡ್ಡಪರಿಣಾಮ ಎಂದರೆ ಅರಣ್ಯ ಪ್ರದೇಶದ ನಾಶ, ಅಧಿಕ ಜಲ ಬಳಕೆ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಇಂಧನ ಬಳಕೆ ಇತ್ಯಾದಿ ಎಲ್ಲ ಅಂಶಗಳನ್ನೂ ಗಣಿಸಬೇಕಾಗುತ್ತದೆ.

ಹುಲ್ಲು ತಿನ್ನುವ ಹಸು

ಹುಲ್ಲು ತಿನ್ನುವ ಹಸು

ಹಾಗೆಯೇ, ಹಲ್ಲು ತಿನ್ನುವ ಪ್ರಾಣಿಗಳಿಂದ ಮೀಥೇನ್ ಅನಿಲ ಬಿಡುಗಡೆಯಾಗುತ್ತದೆ. ಈ ಮೀಥೇನ್ ಅನಿಲ ಒಂದು ಪ್ರಮುಖ ಗ್ರೀನ್ ಹೌಸ್ ಗ್ಯಾಸ್. ಅದರಲ್ಲೂ ದನಗಳಿಂದ ಈ ಅನಿಲ ಹೆಚ್ಚು ಉತ್ಪತ್ತಿಯಾಗುತ್ತದೆ. ಇದಕ್ಕೆ ಕಾರಣ ಹುಲ್ಲು ಇತ್ಯಾದಿಯನ್ನು ಜೀರ್ಣಿಸಲು ಸಹಾಯವಾಗುವ ಮೈಕ್ರೋಬ್‌ಗಳು ಈ ಮೀಥೇನ್ ಅನ್ನು ಬಿಡುಗಡೆ ಮಾಡುತ್ತವೆ.

ಹುಲ್ಲು ತಿನ್ನುವ ಹಸುವಿನ ಬೆಳವಣಿಗೆ ನಿಧಾನವಾಗಿರುತ್ತದೆ. ದನದ ಮಾಂಸ ಹೆಚ್ಚಾಗಿ ಸೇವಿಸುವ ವಿದೇಶಗಳಲ್ಲಿ ಹುಲ್ಲು ತಿನ್ನುವ ಒಂದು ದನ ಮಾಂಸಕ್ಕಾಗಿ ಬಳಕೆಯಾಗಲು 3-4 ವರ್ಷ ಬೇಕಾಗುತ್ತದೆ. ಅಷ್ಟು ವರ್ಷ ಅದು ಹೊರಹಾಕುವ ಮೀಥೇನ್ ಗ್ಯಾಸ್ ಬಹಳ ಆಗುತ್ತದೆ. ಅದೇ ಜೋಳ ಇತ್ಯಾದಿ ಕಡ್ಡಿ ಕಾಳುಗಳನ್ನು ತಿನ್ನುವ ದನ ಒಂದೂವರೆ ವರ್ಷಕ್ಕೆ ಬೆಳವಣಿಗೆ ಹೊಂದುತ್ತದೆ. ಈ ದನಗಳು ಪ್ರತಿದಿನ ಬಿಡುಗಡೆ ಮಾಡುವ ಮೀಥೇನ್ ಪ್ರಮಾಣವೂ ಕಡಿಮೆ ಇರುತ್ತದೆ. ಹೀಗಾಗಿ, ಹುಲ್ಲು ತಿನ್ನುವ ದನಗಳು ಪರಿಸರಕ್ಕೆ ಹೆಚ್ಚು ಹಾನಿಕಾರಕ ಎನ್ನುತ್ತಾರೆ ಅಮೆರಿಕದ ತಜ್ಞರು.

ಮಾಂಸಾಹಾರವನ್ನೇ ಬಿಡಬೇಕಾ?

ಮಾಂಸಾಹಾರವನ್ನೇ ಬಿಡಬೇಕಾ?

ಇಡೀ ಪ್ರಪಂಚವೇ ಸಸ್ಯಾಹಾರಿಗಳಾಗಿಬಿಟ್ಟರೆ ಪರಿಸರ ಹಾನಿ ತಪ್ಪಿಸಬಹುದಾ? ಪಶುಗಳ ಮೇವಿಗಾಗಿ ಬಳಸಲಾಗುವ ಪ್ರದೇಶಗಳು ಅರಣ್ಯ ಪ್ರದೇಶಗಳಾಗಿ ಪರಿವರ್ತನೆಯಾಗಲು ಇದರಿಂದ ಸಾಧ್ಯವಾಗುತ್ತದೆ. ಗ್ರೀನ್ ಹೌಸ್ ಗ್ಯಾಸ್ ಎನಿಸಿದ ಮೀಥೇನ್ ಹೊರಸೂಸುವಿಕೆಯೂ ಕಡಿಮೆ ಆಗುತ್ತದೆ ಎಂಬುದು ನಿಜ. ಆದರೆ, ಸೀಮಿತ ಮಟ್ಟದಲ್ಲಿ ಪಶುಗಳು ಅಗತ್ಯ ಎನ್ನುತ್ತಾರೆ ತಜ್ಞರು.

ಮನುಷ್ಯನ ದೇಹಕ್ಕೆ ಪ್ರೋಟೀನ್ ಅಗತ್ಯ. ಮನುಷ್ಯ ತಿನ್ನಲು ಸಾಧ್ಯವಿಲ್ಲ ಹುಲ್ಲು ಇತ್ಯಾದಿ ಸಸ್ಯಗಳನ್ನು ತಿನ್ನುವ ಪಶುಗಳ ಮಾಂಸದಲ್ಲಿ ಮನುಷ್ಯನಿಗೆ ಪ್ರೋಟೀನ್ ಸಿಗುತ್ತದೆ. ಪ್ರೋಟೀನ್ ಮಾತ್ರವಲ್ಲ ಐರನ್, ವೈಟಮಿನ್ ಬಿ12 ಇತ್ಯಾದಿ ಪೋಷಕಾಂಶಗಳನ್ನೂ ಮಾಂಸ ಒದಗಿಸುತ್ತದೆ. ಇವು ಸಸ್ಯಾಹಾರದಲ್ಲಿ ಸಿಗುವುದು ಕಷ್ಟಸಾಧ್ಯ. ಹೀಗಾಗಿ, ಮನುಷ್ಯನಿಗೆ ಮಾಂಸಾಹಾರವೂ ಅಗತ್ಯವೇ. ಪ್ರಾಣಿಯಿಂದ ದಿನಕ್ಕೆ 20 ಗ್ರಾಂ ಪ್ರೋಟೀನ್ ಅನ್ನು ಮನುಷ್ಯ ಸೇವಿಸಬಹುದು. ಅದಕ್ಕಿಂತ ಹೆಚ್ಚು ಸೇವಿಸುವುದು ಅನಗತ್ಯ. ಹಾಗೆಯೇ, ಹಾಲು, ಗೊಬ್ಬರ ಇತ್ಯಾದಿಗಾಗಿಯೂ ಪಶುಗಳ ಅಗತ್ಯ ಇರುತ್ತದೆ.

ಗ್ರೀನ್‌ಹೌಸ್ ಎಫೆಕ್ಟ್ ಬಗ್ಗೆ

ಗ್ರೀನ್‌ಹೌಸ್ ಎಫೆಕ್ಟ್ ಬಗ್ಗೆ

ಗ್ರೀನ್‌ಹೌಸ್ ಎಫೆಕ್ಟ್ ಬಗ್ಗೆ ನೀವು ಬಹಳ ವರ್ಷಗಳಿಂದ ಕೇಳಿರಬಹುದು. ಭೂಮಿಯ ಮೇಲ್ಮೈ ಸಮೀಪ ಗ್ರೀನ್‌ಹೌಸ್ ಅನಿಲಗಳು ಉಷ್ಣತೆಯನ್ನು ಹಿಡಿದಿಡುವುದೇ ಗ್ರೀನ್‌ಹೌಸ್ ಎಫೆಕ್ಟ್ ಎನ್ನುವುದು. ಉಷ್ಣತೆಯನ್ನು ಹಿಡಿದಿಡುವ ಗ್ರೀನ್‌ಹೌಸ್ ಗ್ಯಾಸ್‌ಗಳು ಭೂಮಿಯನ್ನು ಆವರಿಸುತ್ತವೆ. ಇದೊಂದು ರೀತಿಯಲ್ಲಿ ಬೇಸಿಗೆಯಲ್ಲಿ ಭಾರ ದಪ್ಪದ ಕಂಬಳಿ ಹೊದ್ದಂತಿರುತ್ತದೆ. ಗ್ರೀನ್ ಹೌಸ್ ಅನಿಲದ ಕವಚದಿಂದಾಗಿ ಭೂಮಿಯಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಪರಿಣಾಮವಾಗಿ ಹಿಮಗಡ್ಡೆಗಳೆಲ್ಲಾ ಕರಗಿ ನೀರಾಗುವುದು, ಸಮುದ್ರಮಟ್ಟ ಏರುವುದು, ಭೂಭಾಗಗಳು ಜಲಾವೃತವಾಗುವುಉದು ಸೇರಿದಂತೆ ಹಲವು ರೀತಿಯ ಅಪಾಯಗಳು ಎದುರಾಗುತ್ತವೆ.

ಕಾರ್ಬನ್ ಡೈಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಇತ್ಯಾದಿ ಕೆಲ ಅನಿಲಗಳು ಗ್ರೀನ್‌ಹೌಸ್ ಗ್ಯಾಸ್ ಎಂದು ಪರಿಗಣಿತವಾಗಿವೆ. ಗ್ರೀನ್‌ಗೌಸ್ ಅನಿಲಗಳಿಂದ ಅಪಾಯ ಹೇಗಿದೆಯೋ, ಹಾಗೆಯೇ, ಭೂಮಿಯ ವಾತಾವರಣ ಸಮತೋಲನಕ್ಕೆ ಅವು ಅಗತ್ಯವೂ ಹೌದು. ಹೀಗಾಗಿ, ಸೀಮಿತ ಮಟ್ಟದಲ್ಲಿ ಗ್ರೀನ್ ಹೌಸ್ ಗ್ಯಾಸ್ ಬೇಕಾಗುತ್ತದೆ.

ಉದಾಹರಣೆಗೆ, ಕಾರ್ಬನ್ ಡೈ ಆಕ್ಸೈಡ್ ಅನಿಲ ಸಂಪೂರ್ಣವಾಗಿ ನಿರ್ಮೂಲವಾಗಿಬಿಟ್ಟರೆ ಭೂಮಿಯ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದುಬಿಡುತ್ತದೆ. ಇದರಿಂದ ವಿಪರೀತ ಚಳಿಯಾಗಿ ಮನುಷ್ಯನ ಬದುಕಿಗೆ ದುಸ್ತರವಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Animals that we eat are causing more damage to the environment and greenhouse gas effect is posing serious problems for earth. Here is one way to mitigate this danger, through eating less meat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X