• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಣ್ಣದಲ್ಲಿ ಹುಡುಗೀರು ಸೂಪರೋ ಸೂಪರ್; ಹುಡುಗ್ರಿಗೆ ಕಿತ್ತಳೆಯೂ ಕೆಂಪೇ- ಯಾಕೆ ಹೀಗೆ?

|
Google Oneindia Kannada News

ಒಂದು ಹುಡುಗ ಮತ್ತು ಒಂದು ಹುಡುಗಿ ಬಟ್ಟೆ ಅಂಗಡಿಗೆ ಶಾಪಿಂಗ್ ಮಾಡಲು ಹೋದರೆ ಏನಾಗುತ್ತೆ? ಹುಡುಗ ಹಾಗೆ ಸುಮ್ಮನೆ ಕಣ್ಣಾಡಿಸಿ ಯಾವುದೋ ಒಂದು ಬಟ್ಟೆ ಆಯ್ಕೆ ಮಾಡಿಕೊಳ್ಳುತ್ತಾನೆ. ಅಬ್ಬಬ್ಬಾ ಅಂದ್ರೆ ಐದು ನಿಮಿಷ ಆಗಬಹುದು. ಅದೇ ಆ ಹುಡುಗಿ ಶಾಪಿಂಗ್ ಮುಗಿಯೋದೇ ಇಲ್ಲ. ಒಂದು ಗಂಟೆ, ಎರಡು ಗಂಟೆ, ಕೊನೆಗೆ ಮೂರು ಗಂಟೆಯಾದರೂ ಸೆಲೆಕ್ಷನ್ ಫೈನಲ್ ಅಗಲ್ಲ. ಅಂಗಡಿಯವ ಸೀರೆ ಬಿಚ್ಚಿ ಬಿಚ್ಚಿ ತೋರಿಸಿ ತೋರಿಸಿ ಹೈರಾಣಾಗಿರುತ್ತಾನೆ. ಕೊನೆಗೆ ಒಂದಾದರೂ ಸೀರೆಯನ್ನು ಹುಡುಗಿ ಖರೀದಿಸುತ್ತಾಳೆ ಎನ್ನುವುದು ಡೌಟು. ಯಾಕೆ ಹೀಗೆ?

ಹುಡುಗರಿಗೆ ಬಟ್ಟೆ ವಿಚಾರದಲ್ಲಿ ಆಪ್ಷನ್ಸ್ ಇಲ್ಲ. ಅಂದ್ರೆ ಬಣ್ಣಗಳ ವ್ಯತ್ಯಾಸ ಅಷ್ಟಾಗಿ ಗೊತ್ತಾಗಲ್ಲ. ದಟ್ಟ ನೀಲಿ, ಆಕಾಶ ನೀಲಿ, ಕಡು ನೀಲಿ ಹೀಗೆ ಎಲ್ಲಾ ನೀಲಿ ಬಣ್ಣ ಒಂದೇ ನೀಲಿ ಬ್ರ್ಯಾಕೆಟ್‌ಗೆ ಸೇರುತ್ತದೆ. ಆದರೆ, ಹುಡುಗಿಗೆ ಒಂದೊಂದು ನೀಲಿ ಶೇಡ್ ಬಣ್ಣ ಕೂಡ ಪ್ರತ್ಯೇಕ ಬಣ್ಣವಾಗಿ ಕಾಣುತ್ತದೆ. ಹೀಗಾಗಿ ಆಕೆಗೆ ಹೆಚ್ಚು ಆಪ್ಷನ್ಸ್ ಇರುತ್ತದೆ. ಹುಡುಕಾಟಕ್ಕೆ ಹೆಚ್ಚು ಸಮಯ ತಗುಲುತ್ತದೆ.

ಕೃಷ್ಣ ಜನ್ಮಾಷ್ಟಮಿ: ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗಿಯರು ಭಾಗಿಕೃಷ್ಣ ಜನ್ಮಾಷ್ಟಮಿ: ದಹಿ ಹಂಡಿ ಸ್ಪರ್ಧೆಯಲ್ಲಿ ಹುಡುಗಿಯರು ಭಾಗಿ

ವಿಜ್ಞಾನ ಕೂಡ ಇದನ್ನು ಒಪ್ಪುತ್ತದೆ. ಅಲ್ಲ, ಸ್ವತಃ ವಿಜ್ಞಾನವೇ ಈ ವಿಚಾರವನ್ನು ಹೇಳುತ್ತಿದೆ. ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿರುವ ಬ್ರೂಕ್‌ಲಿನ್ ಕಾಲೇಜಿನ ಸೈಕಾಲಜಿ ಪ್ರೊಫೆಸರ್ ಇಸ್ರೇಲ್ ಅಬ್ರಮೋವ್ ನೇತೃತ್ವದಲ್ಲಿ ನಡೆದ ಅಧ್ಯಯನವೊಂದು ಹುಡುಗಿಯರ ಬಣ್ಣ ಗುರುತಿಸುವ ವಿಶೇಷತೆ ಬಗ್ಗೆ ಬೆಳಕು ಚೆಲ್ಲಿದೆ.

ಬಣ್ಣದಲ್ಲಿ ಸಣ್ಣ ವ್ಯತ್ಯಾಸಗಳನ್ನೂ ಹೆಂಗಸರು ಗುರುತಿಸಬಲ್ಲರು. ಒಂದು ಬಣ್ಣದ ವಿವಿಧ ಶೇಡ್‌ಗಳನ್ನು ಅವರು ಗ್ರಹಿಸಬಲ್ಲರು. ಗಂಡರು ಈ ವಿಷಯದಲ್ಲಿ ಬಹಳ ವೀಕ್ ಎಂಬುದನ್ನು ಬ್ರೂಕ್ಲಿನ್ ಸಂಶೋಧಕರು ಕಂಡುಹಿಡಿದಿದ್ದಾರೆ.

ಕಿತ್ತಳೆ ಕೆಂಪಾಗಿ ಕಾಣುತ್ತಾ?

ಕಿತ್ತಳೆ ಕೆಂಪಾಗಿ ಕಾಣುತ್ತಾ?

ನಮ್ಮ ಕಣ್ಣಿಗೆ ಗೋಚರವಾಗುವ ಬಣ್ಣದ ಸ್ಪೆಕ್ಟ್ರಂನಲ್ಲಿ ಬಣ್ಣದ ಶೇಡ್ ಗುರುತಿಸಲು ಹುಡುಗಿಗಿಂತ ಹುಡುಗನಿಗೆ ತುಸು ಹೆಚ್ಚು ದೀರ್ಘದ ವೇವ್‌ಲೆಂತ್ ಅಗತ್ಯ ಇರುತ್ತದೆ. ಆರೆಂಜ್ ಇತ್ಯಾದಿ ಬಣ್ಣಗಳು ದೀರ್ಘದ ವೇವ್ ಲೆಂತ್ ಹೊಂದಿರುವಂಥವು. ಹೀಗಾಗಿ, ಆರೆಂಜ್ ಅಥವಾ ಕಿತ್ತಳೆ ಬಣ್ಣವು ಹುಡುಗರ ಕಣ್ಣಿಗೆ ಬಹುತೇಕ ಕೆಂಪು ಬಣ್ಣದಂತೆ ಗೋಚರವಾಗುತ್ತದೆ.

ಅದೇ ಹುಡುಗಿಯರಿಗೆ ಹುಲ್ಲು ಪಕ್ಕಾ ಹಸಿರು ಬಣ್ಣವಾಗಿಯೇ ಕಾಣುತ್ತದೆ. ಅದೇ ಹುಡುಗನಾದರೆ ಹುಲ್ಲು ತುಸು ಹಳದಿ ಮಿಶ್ರಿತ ಹಸಿರಾಗಿ ಕಾಣುತ್ತದೆ.

ಹಾಗೆಯೇ, ಮೂಲಭೂತ ಬಣ್ಣಗಳಾದ ನೀಲಿ, ಹಸಿರು, ಕೆಂಪು, ಹಳದಿ ಬಣ್ಣಗಳ ವಿವಿಧ ಶೇಡ್‌ಗಳನ್ನು ಸ್ಪಷ್ಟವಾಗಿ ಗುರುತಿಸಲು ಹುಡುಗನಿಗೆ ಕಷ್ಟವಾಗುತ್ತದೆ. ಆದರೆ, ಹುಡುಗಿಯರಿಗೆ ಇದು ಹೆಚ್ಚು ಸುಲಭ. ಉದಾಹರಣೆಗೆ, ವಯೋಲೆಟ್, ಮರೂನ್ ಇತ್ಯಾದಿ ಬಣ್ಣಗಳನ್ನು ವರ್ಗೀಕರಿಸುವುದು ಹುಡುಗರಿಗಿಂತ ಹುಡುಗಿಯರು ಗಟ್ಟಿ.

ಹುಡುಗರು ಎಲ್ಲಿ ಸ್ಟ್ರಾಂಗು?

ಹುಡುಗರು ಎಲ್ಲಿ ಸ್ಟ್ರಾಂಗು?

ಬಣ್ಣದ ಶೇಡ್‌ಗಳನ್ನು ಗುರುತಿಸುವ ಸಾಮರ್ಥ್ಯ ಹುಡುಗಿಯರಿಗೆ ಹೆಚ್ಚು ಇರುತ್ತದಾದರೂ, ಬದಲಾಗುವ ಬಣ್ಣವನ್ನು ದೂರದಿಂದ ಗುರುತಿಸುವುದರಲ್ಲಿ ಹುಡುಗರು ಸೈ ಎನಿಸುತ್ತಾರೆ ಎಂದು ಈ ಅಧ್ಯಯನ ಹೇಳುತ್ತದೆ.

ಇದಕ್ಕೆ ಕಾರಣ ಪುರುಷರ ವಿಷುವಲ್ ಕಾರ್ಟೆಕ್ಸ್‌ನಲ್ಲಿ ನ್ಯೂರಾನ್ ಬೆಳವಣಿಗೆ ಚೆನ್ನಾಗಿ ಆಗಿರುವುದು. ವಿಷುವಲ್ ಕಾರ್ಟೆಕ್ಸ್ ಎಂಬುದು ನಮ್ಮ ದೃಷ್ಟಿಯ ಸಂಕೇತವನ್ನು ಮಿದುಳಿಗೆ ರವಾನಿಸುವ ಒಂದು ಭಾಗ. ಇದು ಮಿದುಳಿನ ಹೊರಪದರದಲ್ಲಿನ ಸೆರಿಬ್ರಲ್ ಕಾರ್ಟೆಕ್ಸ್‌ನಲ್ಲಿರುತ್ತದೆ. ಪುರುಷರ ಟೆಸ್ಟೋಸ್ಟಿರೋನ್ ಎಂಬ ಮಾಸ್ಕುಲೈನ್ ಹಾರ್ಮೋನುಗಳಿಂದಾಗಿ ನ್ಯೂರಾನ್ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಹೀಗಾಗಿ, ಹುಡುಗಿಯರಿಗಿಂತ ಹುಡುಗರ ಮಿದುಳಿನಲ್ಲಿ ಶೇ 25ರಷ್ಟು ಹೆಚ್ಚು ನ್ಯೂರಾನ್‌ಗಳು ಇರುತ್ತವೆ.

ಆದಿಮಾನವರ ಕಾಲದ ಕಥೆ

ಆದಿಮಾನವರ ಕಾಲದ ಕಥೆ

ಗಂಡು ಮತ್ತು ಹೆಣ್ಣಿನ ಈ ಬಣ್ಣ ಗ್ರಹಿಕೆ ವ್ಯತ್ಯಾಸಕ್ಕೆ ಏನು ಕಾರಣ ಎಂದು ಶೋಧಿಸುತ್ತಾ ಹೋದರೆ ಮಾನವನ ಇತಿಹಾಸದ ಆರಂಭಿಕ ಕಾಲಘಟ್ಟಕ್ಕೆ ಹೋಗಬೇಕಾದೀತು. ಆದಿಮಾನವರು ಬೇಟೆಯಾಡಿ ಬದುಕುತ್ತಿದ್ದ ಕಾಲಘಟ್ಟ ಅದು. ಆಗ ಬೇಟೆಯಾಡುವ ಕೆಲಸ ಪುರುಷರದ್ದಾದರೆ, ಅಡುಗೆ ಮಾಡುವ ಕೆಲಸ ಮಹಿಳೆಯರದ್ದು.

ಬೇಟೆಯಾಡುವಾಗ ದೂರದಿಂದಲೇ ಪ್ರಾಣಿಯನ್ನು ಗುರುತಿಸುವುದು ಅಗತ್ಯವಾಗಿತ್ತು. ಕಣ್ಣು ಬಹಳ ಚುರುಕಾಗಿರಬೇಕು. ವೇಗವಾಗಿ ಓಡುವ ಪ್ರಾಣಿಯನ್ನು ದೂರದಿಂದಲೇ ಗುರುತಿಸಿ ಅದನ್ನು ಗ್ರಹಿಸಿ ಬೇಟೆ ಆಡಬೇಕಿತ್ತು. ಹೀಗಾಗಿ, ಪುರುಷರಿಗೆ ಈ ಶಕ್ತಿ ವಿಕಸಿತಗೊಂಡಿದೆ.

ಇನ್ನು ಅಂದಿನ ಹೆಂಗಸರು ಒಂದೇ ಸ್ಥಳದಲ್ಲಿ ಇರುತ್ತಿದ್ದರಿಂದ ವಸ್ತು ಸೂಕ್ಷ್ಮತೆ ಹೆಚ್ಚು. ಅಂದರೆ ಒಂದು ವಸ್ತುವನ್ನು ಬಹಳ ಹತ್ತಿರದಿಂದ ನೋಡುತ್ತಾ ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸುವ ಶಕ್ತಿ ಈ ಹೆಂಗಸರಿಗೆ ಪ್ರಾಪ್ತಿಯಾಗಿದ್ದಿರಬಹುದು ಎಂದು ಅಮೆರಿಕದ ಬ್ರೂಕ್‌ಲಿನ್ ಕಾಲೇಜಿನ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ಲಂಡನ್ ಸಂಶೋಧಕರ ಅನಿಸಿಕೆಯೂ ಇದೆಯೇ

ಲಂಡನ್ ಸಂಶೋಧಕರ ಅನಿಸಿಕೆಯೂ ಇದೆಯೇ

ಲಂಡನ್‌ನ ಸಿಟಿ ಯೂನಿವರ್ಸಿಟಿಯ ಆಪ್ಟಿಕ್ಸ್ ಅಂಡ್ ವಿಷುವಲ್ ಸೈನ್ಸ್ ವಿಭಾಗದ ಪ್ರೊಫೆಸರ್ ಜಾನ್ ಬಾರ್ಬರ್ ಕೂಡ ಗಂಡು ಮತ್ತು ಹೆಂಗಸರ ಬಣ್ಣದ ಸಾಮರ್ಥ್ಯದಲ್ಲಿನ ವೈಭಿನ್ನತೆಯನ್ನು ಎತ್ತಿ ತೋರಿಸಿದ್ದಾರೆ.

ಅವರ ಪ್ರಕಾರ, ಸಂಪೂರ್ಣ ಬಣ್ಣ ಸೂಕ್ಷ್ಮತೆಯಲ್ಲಿ ಹೆಂಗಸರಿಗಿಂತ ಗಂಡಸರು ಹೆಚ್ಚು ಸಮರ್ಥರಿದ್ದಾರೆ. ಆದರೆ, ಬಣ್ಣದ ಶೇಡ್‌ಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸುವ ವಿಚಾರದಲ್ಲಿ ಮಹಿಳೆಯರು ಬಹಳ ಸ್ಟ್ರಾಂಗು ಎಂದು ಜಾನ್ ಬಾರ್ಬರ್ ತಮ್ಮ ಹಿಂದಿನ ಅಧ್ಯಯನವೊಂದರಲ್ಲಿ ಹೇಳಿದ್ದರು.

"ಒಂದು ಬಣ್ಣದ ವಿವರ ಗುರುತಿಸಲು, ಮತ್ತು ಬಣ್ಣದ ವಿಶೇಷತೆಯನ್ನು ವರ್ಣಿಸುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಬಹಳ ಮುಂದಿದ್ದಾರೆ" ಎಂಬುದು ಜಾನ್ ಬಾರ್ಬರ್ ಅನಿಸಿಕೆ.

(ಒನ್ಇಂಡಿಯಾ ಸುದ್ದಿ)

English summary
Brooklyn University researchers have found that Females can identify subtle colour difference more accurately than males. But boys have different ability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X