• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಬಗ್ಗೆ ಒಂದಿಷ್ಟು ತಿಳಿಯಿರಿ

|

ಚೆನ್ನೈ, ಮೇ 7: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮುಖ್ಯಸ್ಥ, ಶಾಸಕಾಂಗ ಪಕ್ಷದ ನಾಯಕ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಅವರು ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮಿಳುನಾಡಿನ ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಅವರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವ ಮೂಲಕ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಜಯಭೇರಿ ಬಾರಿಸಿದೆ. ಈ ಮೂಲಕ ದಶಕದ ಬಳಿಕ ಡಿಎಂಕೆ ಅಧಿಕಾರ ಪಡೆದುಕೊಂಡಿದೆ. ಏಪ್ರಿಲ್ 6ರಂದು ನಡೆದ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟವು 234 ಸ್ಥಾನಗಳ ಪೈಕಿ ಡಿಎಂಕೆ 133 ಸ್ಥಾನ ಗಳಿಸಿದರೆ, ಕಾಂಗ್ರೆಸ್ 18 ಸ್ಥಾನ, ವಿಸಿಕೆ 4 ಹಾಗೂ ಎಡಪಕ್ಷಗಳು ತಲಾ 2 ಸ್ಥಾನ ಗಳಿಸಿವೆ. ಎಐಎಡಿಎಂಕೆ 66, ಬಿಜೆಪಿ 4 ಸ್ಥಾನ ಪಡೆದುಕೊಂಡಿವೆ.

ಎಂಕೆ ಸ್ಟಾಲಿನ್ ಬಗ್ಗೆ ಸಂಕ್ಷಿಪ್ತ ಮಾಹಿತಿ

ಎಂಕೆ ಸ್ಟಾಲಿನ್ ಬಗ್ಗೆ ಸಂಕ್ಷಿಪ್ತ ಮಾಹಿತಿ

1. ಎಂಕೆ ಸ್ಟಾಲಿನ್ ಪೂರ್ತಿ ಹೆಸರು-ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್. ಸೋವಿಯೆಟ್ ಯೂನಿಯನ್ ನಾಯಕ ಜೋಸೆಫ್ ಸ್ಟಾಲಿನ್ ಸ್ಮರಣೆಯಲ್ಲಿ ಮುತ್ತುವೇಲ್ ಅವರಿಗೆ ಸ್ಟಾಲಿನ್ ಹೆಸರನ್ನಿಡಲಾಗಿದೆ.
2. ಸ್ಟಾಲಿನ್ ಹೆಸರು ವಿವಾದಕ್ಕೆ ಕಾರಣವಾಗಿ, ಮುತ್ತುವೇಲ್ ಅವರ ಪುತ್ರನಿಗೆ ಅನೇಕ ಶಾಲೆಯಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಕೊನೆಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ಶಾಲೆಯಲ್ಲಿ ದಾಖಲಾದರು.

ಕರುಣಾನಿಧಿ ಅವರ ಮೂರನೇ ಪುತ್ರ

ಕರುಣಾನಿಧಿ ಅವರ ಮೂರನೇ ಪುತ್ರ

3. ಎಂಕೆ ಕರುಣಾನಿಧಿ ಅವರ ಎರಡನೇ ಪತ್ನಿ ದಯಾಳು ಅಮ್ಮಾಳ್ ಅವರ ಪುತ್ರ ಮುತ್ತುವೇಲ್, ಕರುಣಾನಿಧಿ ಅವರ ಮೂರನೇ ಪುತ್ರ.
4. ಎಂಕೆ ಸ್ಟಾಲಿನ್ ಅವರಿಗೆ ಎಂ.ಕೆ ಅಳಗಿರಿ ಸೇರಿದಂತೆ ಇಬ್ಬರು ಸೋದರರು, ಕನ್ನಿಮೋಳಿ ಸೇರಿದಂತೆ ಇಬ್ಬರು ಸೋದರಿಯರಿದ್ದಾರೆ.
5. 14ನೇ ವಯಸ್ಸಿಗೆ ಎಂಕೆ ಸ್ಟಾಲಿನ್ ರಾಜಕೀಯ ರಂಗಕ್ಕೆ ಧುಮುಕಿದರು. 1967ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.

1975ರಲ್ಲಿ ಸ್ಟಾಲಿನ್ ವಿವಾಹ

1975ರಲ್ಲಿ ಸ್ಟಾಲಿನ್ ವಿವಾಹ

6.1975ರಲ್ಲಿ ದುರ್ಗಾ ಅವರನ್ನು ವರಿಸಿದ ಸ್ಟಾಲಿನ್ ಅವರಿಗೆ ಇಬ್ಬರು ಮಕ್ಕಳು. ಉದಯನಿಧಿ ಹಾಗೂ ಸೆಂಥಾಮರೈ.
7. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕಾಗಿ ಬಂಧನಕ್ಕೊಳಪಟ್ಟಿದ್ದರು.
8. ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸ್ಟಾಲಿನ್ ಅವರು ಕ್ರಿಕೆಟ್, ಬಾಡ್ಮಿಂಟನ್ ಹಾಗೂ ಚೆಸ್ ಆಡಲು ಇಷ್ಟಪಡುತ್ತಾರೆ.

ತಮಿಳುನಾಡಿನ ಡಿಸಿಎಂ ಆಗಿದ್ದರು

ತಮಿಳುನಾಡಿನ ಡಿಸಿಎಂ ಆಗಿದ್ದರು

9. 1996 ರಿಂದ 2002ರ ಅವಧಿಯಲ್ಲಿ ಎಂಕೆ ಸ್ಟಾಲಿನ್ ಚೆನ್ನೈ ನಗರದ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು.
10. 2009ರಿಂದ 2011ರ ಅವಧಿಯಲ್ಲಿ ತಮಿಳುನಾಡಿನ ಡಿಸಿಎಂ ಆಗಿದ್ದರು. ಇದಾದ ಬಳಿಕ ಡಿಎಂಕೆ ಅಧಿಕಾರಕ್ಕೆ ಬಂದಿರಲಿಲ್ಲ. ಡಿಸಿಎಂ ಪದವಿ ಬಳಿಕ ಸಿಎಂ ಪದವಿಗೇರಿದ್ದಾರೆ.

English summary
Dravida Munnetra Kazhagam (DMK) president and legislature party leader MK Stalin is set to take oath as the chief minister of Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X