Holiday list 2024; ಕರ್ನಾಟಕದ ಸರ್ಕಾರದ ರಜೆ ದಿನಗಳ ಪಟ್ಟಿ
ಬೆಂಗಳೂರು, ನವೆಂಬರ್ 24; ಕರ್ನಾಟಕ ಸರ್ಕಾರ 2024ನೇ ಸಾಲಿನ ಸರ್ಕಾರಿ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಮತ್ತು 4ನೇ ಶನಿವಾರ, ಭಾನುವಾರಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಲ್ಲಿಕೆ ಮಾಡಿದ್ದ 2024ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿಗೆ ಅನುಮೋದನೆ ಸಿಕ್ಕಿದೆ.

ಅಧಿಸೂಚನೆಯಲ್ಲಿ ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ಇವೆ ಎಂದು ಆದೇಶ ಹೇಳಿದೆ.
2024ನೇ ಸಾಲಿನಲ್ಲಿ ಒಟ್ಟು 21 ಸಾರ್ವತ್ರಿಕ ರಜಾ ದಿನಗಳು ಇರಲಿವೆ. ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ (14/4/2024) ಮತ್ತು ಮಹಾವೀರ ಜಯಂತಿ (21/4/2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12/10/2024) ನಮೂದಿಸಿರುವುದಿಲ್ಲ.
ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತದೆ, ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ತಿಳಿಸಲಾಗಿದೆ.
ದಿನಾಂಕ 03/09/2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ 17/10/2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ 14/12/2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಸಾರ್ವತ್ರಿಕ ರಜಾ ದಿನಗಳು
1. 15/1/2024, ಸೋಮವಾರ; ಮಕರ ಸಂಕ್ರಾಂತಿ
2. 26/1/2024, ಶುಕ್ರವಾರ; ಗಣರಾಜ್ಯೋತ್ಸವ
3. 8/3/2024, ಶುಕ್ರವಾರ; ಮಹಾ ಶಿವರಾತ್ರಿ
4. 29/3/2024, ಶುಕ್ರವಾರ: ಗುಡ್ ಫ್ರೈಡೆ
5. 9/4/2024, ಮಂಗಳವಾರ; ಯುಗಾದಿ ಹಬ್ಬ
6. 11/04/2024, ಗುರುವಾರ; ಖುತುಬ್-ಎ-ರಂಜಾನ್
7. 1/5/2024, ಬುಧವಾರ; ಕಾರ್ಮಿಕರ ದಿನ
8.10/5/2024, ಶುಕ್ರವಾರ; ಬಸವ ಜಯಂತಿ/ ಅಕ್ಷಯ ತೃತೀಯ
9. 17/6/2024, ಸೋಮವಾರ; ಬಕ್ರೀದ್
10. 17/7/2024, ಬುಧವಾರ; ಮೊಹರಂ ಕಡೇ ದಿನ
11. 15/8/2024, ಗುರುವಾರ; ಸ್ವಾತಂತ್ರ್ಯ ದಿನಾಚರಣೆ
12. 7/9/2024, ಶನಿವಾರ; ವರಸಿದ್ದಿ ವಿನಾಯಕ ವ್ರತ
13. 16/9/2024, ಸೋಮವಾರ: ಈದ್ ಮಿಲಾದ್
14. 2/10/2024, ಬುಧವಾರ: ಗಾಂಧಿ ಜಯಂತಿ/ ಮಹಾಲಯ ಅಮಾವಾಸ್ಯೆ
15. 11/10/2024, ಶುಕ್ರವಾರ: ಮಹಾನವಮಿ, ಆಯುಧ ಪೂಜೆ
16.17/10/2024, ಗುರುವಾರ: ವಾಲ್ಮೀಕಿ ಜಯಂತಿ
17. 31/10/2024, ಗುರುವಾರ: ನರಕ ಚತುರ್ದಶಿ
18.1/11/2024, ಶುಕ್ರವಾರ; ಕನ್ನಡ ರಾಜ್ಯೋತ್ಸವ
19. 2/11/2024, ಶನಿವಾರ, ಬಲಿಪಾಡ್ಯಮಿ, ದೀಪಾವಳಿ
20. 18/11/2024, ಸೋಮವಾರ; ಕನಕ ಜಯಂತಿ
21.25/12/2024, ಬುಧವಾರ, ಕ್ರಿಸ್‌ಮಸ್












Click it and Unblock the Notifications