ನಿಮಗೆ ಲಕ್ಷಾಂತರ ಫಾಲೋವರ್ಸ್‌ ಇದ್ದಾರಾ? ಬಂತು ಕೈ ತುಂಬಾ ದುಡ್ಡು ಮಾಡುವ ಅವಕಾಶ

ಸದ್ಯ ನಾವೆಲ್ಲ ಸೋಶಿಯಲ್‌ ಮೀಡಿಯಾ ಜಮಾನದಲ್ಲಿದ್ದೇವೆ. ಇವು ನಮಗೆ ಮನರಂಜನೆ ನೀಡುವ ಜೊತೆಗೆ ಲಕ್ಷ ಲಕ್ಷ ಫಾಲೋವರ್ಸ್‌ಗಳನ್ನ (Followers) ಕೂಡ ತಂದುಕೊಡುತ್ತಿದೆ. ಇತ್ತೀಚೆಗೆ ಈ ಫಾಲೋವರ್ಸ್‌ಗಳೇ ಇನ್‌ಫ್ಲುಯೆನ್ಸರ್‌ಗಳನ್ನು (influencers) ಹುಟ್ಟುಹಾಕಿದ್ದಾರೆ. ಜೊತೆಗೆ ಕೈ ತುಂಬಾ ದುಡ್ಡು ಬರೋದಕ್ಕೂ ಕಾರಣಕರ್ತರಾಗಿದ್ದಾರೆ. ಇಂತಹ ಇನ್‌ಫ್ಲುಯೆನ್ಸರ್‌ಗಳಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಸರ್ಕಾರವೇ ಇನ್‌ಫ್ಲುಯೆನ್ಸರ್‌ಗಳಿಗೆ ಜಾಹೀರಾತು (advertisement) ನೀಡಿ ಅದಕ್ಕೆ ಹಣ ಕೂಡ ನೀಡಲು ಮುಂದಾಗಿದೆ.

ದಿನಗಳು ಉರುಳಿದಂತೆ ಈಗ ಸೋಶಿಯಲ್‌ ಮೀಡಿಯಾದಿಂದಲೇ ಲಕ್ಷಾಂತರ ರೂಪಾಯಿ ಹಣ ಮಾಡುವವರೂ ಇದ್ದಾರೆ. ಇನ್ಸ್‌ಸ್ಟಾಗ್ರಾಂ, ಯೂಟ್ಯೂಬ್‌, ಫೇಸ್‌ಬುಕ್‌ ಸೇರಿದಂತೆ ಮುಂಚೂಣಿಯಲ್ಲಿರುವ ಸೋಶಿಯಲ್‌ ಮೀಡಿಯಾಗಳು ಸದ್ಯ ಇನ್‌ಫ್ಲುಯೆನ್ಸರ್‌ಗಳನ್ನು ಹುಟ್ಟುಹಾಕಿ ಬದುಕಿಗೆ ದಾರಿಯನ್ನೂ ಕಟ್ಟಿಕೊಟ್ಟಿದೆ.

Karnataka Government Has Decided To Issue Advertisement to Social Media Influencers

ವಿಶೇಷ ಹಾಗೂ ವಿಭಿನ್ನ ಕಂಟೆಂಟ್‌ಗಳಿಂದ ಗಮನ ಸೆಳೆದಿರುವ ನೂರಾರು ಮಂದಿ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಹುಟ್ಟಿಸಿದ್ದಾರೆ. ಇದರಿಂದ ಅವರ ಫಾಲೋವರ್ಸ್‌ಗಳ ಸಂಖ್ಯೆ ಮಿಲಿಯನ್‌ಗಳಿಗೆ ತಲುಪಿವೆ. ಇವರು ಪೋಸ್ಟ್‌ ಮಾಡುವ ವಿಡಿಯೋಗಳಿಗೆ ಸೋಶಿಯಲ್‌ ಮೀಡಿಯಾಗಳಿಂದಲೇ ಇಂತಿಷ್ಟು ದುಡ್ಡು ಕೂಡ ಬರುತ್ತದೆ. ಅದರ ಜೊತೆಗೆ ಇತ್ತೀಚೆಗೆ ಪ್ರಾಡಕ್ಟ್‌ಗಳ ರಿವ್ಯೂ (reviews) ಮಾಡುವ ಮೂಲಕವೂ ಇನ್‌ಫ್ಲುಯೆನ್ಸರ್‌ಗಳು ಕೈತುಂಬಾ ಹಣ ಗಳಿಸುತ್ತಿದ್ದಾರೆ.

ಈಗ ಹೆಚ್ಚು ಫಾಲೋವರ್ಸ್‌ ಹೊಂದಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮಾಧ್ಯಮಗಳಿಗೆ ನೀಡುವಂತೆ ನಿಮಗೂ ಜಾಹೀರಾತು ನೀಡುವುದಾಗಿ ಘೋಷಿಸಿದೆ. ಇದಕ್ಕೆ ತಕ್ಕ ಮೊತ್ತವನ್ನೂ ಪಾವತಿ ಮಾಡುವುದಾಗಿ ತಿಳಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಆದಾಯ ಕೂಡ ಹೆಚ್ಚಾಗಲಿದೆ.

Karnataka Government Has Decided To Issue Advertisement to Social Media Influencers

ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರವು, ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳಿಗೂ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಮಾಡಿಕೊಡುವ ನೂತನ ಜಾಹೀರಾತು ನೀತಿಯನ್ನು ಜಾರಿಗೆ ತಂದಿರುವುದಾಗಿ ಹೇಳಿದೆ. ಇದಕ್ಕಾಗಿ ʼಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ-2024' ಅನ್ನು ಜಾರಿ ಮಾಡಲಾಗಿದ್ದು, ಎಲ್ಲಾ ಸ್ವರೂಪದ ಡಿಜಿಟಲ್‌ ಮಾಧ್ಯಮಗಳಲ್ಲಿ ಸರ್ಕಾರಿ ಜಾಹೀರಾತು ನೀಡಲು ಇದು ಅನುವು ಮಾಡಿಕೊಡಲಿದೆ ಎಂದು ವಿವರಿಸಿದೆ.

ಜಾಹೀರಾತು ಹೇಗೆ ಸಿಗಲಿದೆ?: ಸೋಶಿಯಲ್‌ ಮೀಡಿಯಾದಲ್ಲಿ ಖ್ಯಾತಿ ಗಳಿಸಿರುವ ಬ್ರ್ಯಾಂಡ್ ಅಂಬಾಸಿಡರ್‌ಗಳು, ಪ್ರಾಯೋಜಿತ ಪೋಸ್ಟ್‌ಗಳು, ಅತಿಥಿ ಬ್ಲಾಗ್‌ಗಳು, ಕಂಟೆಂಟ್‌ ಸಹಯೋಗ, ವಿಷಯಾಧಾರಿತ ಅಭಿಯಾನ, ಕಾರ್ಯಕ್ರಮ ಪ್ರಚಾರ, ವಿಮರ್ಶೆ ಮತ್ತು ಹ್ಯಾಶ್‌ಟ್ಯಾಗ್‌ ಅಭಿಯಾನಗಳ ಸ್ವರೂಪದಲ್ಲಿ ಇನ್‌ಫ್ಲುಯೆನ್ಸರ್‌ಗಳಿಗೆ ಜಾಹೀರಾತು ನೀಡಲಾಗುತ್ತದೆ.

ಯಾವುದಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿ ನಿಗದಿತ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ಇನ್‌ಫ್ಲುಯೆನ್ಸರ್‌ಗಳಿಗೆ ಸರ್ಕಾರಿ ಜಾಹೀರಾತು ದೊರೆಯಲಿದೆ. ಇನ್‌ಫ್ಲುಯೆನ್ಸರ್‌ಗಳಲ್ಲಿ ಮೂರು ವರ್ಗೀಕರಣ ಮಾಡಲಾಗಿದೆ. 1 ಲಕ್ಷದಿಂದ 5 ಲಕ್ಷದವರೆಗೆ ಫಾಲೋವರ್ಸ್‌ ಇದ್ದವರು 'ನ್ಯಾನೊ', 5 ಲಕ್ಷದಿಂದ 10 ಲಕ್ಷ ಫಾಲೋವರ್ಸ್‌ ಇದ್ದವರು 'ಮೈಕ್ರೊ' ಹಾಗೂ 10 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್‌ ಇದ್ದವರನ್ನು 'ಮ್ಯಾಕ್ರೊ' ಇನ್‌ಫ್ಲುಯೆನ್ಸರ್‌ಗಳು ಎಂದು ವರ್ಗೀಕರಿಸಲಾಗಿದೆ.

ವಾರ್ತಾ ಇಲಾಖೆಯು ನೋಂದಾಯಿತ ಏಜೆನ್ಸಿಗಳ ಮೂಲಕ ಜಾಹೀರಾತು ನೀಡಲಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಜಾಹೀರಾತು ನೀತಿಯ ಅಡಿಯಲ್ಲಿ ನಿಗದಿಪಡಿಸಲಾದ ಅಥವಾ ಇಲಾಖೆಯೇ ಸ್ವತಂತ್ರವಾಗಿ ನಿಗದಿಪಡಿಸಿದ ದರದಲ್ಲಿ ಜಾಹೀರಾತು ನೀಡಲಾಗುತ್ತದೆ. ಮೂಲಗಳ ಪ್ರಕಾರ ಇದರಿಂದ ಇನ್‌ಫ್ಲುಯೆನ್ಸರ್‌ಗಳು ಕೈತುಂಬಾ ಹಣ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+