ಮಲೆನಾಡ ಮಡಿಲಲ್ಲಿ ಮಕ್ಕಳ ಸೆಳೆಯುತ್ತಿದೆ ಈ "ರೈಲು ಶಾಲೆ"
ಪಶ್ಚಿಮ
ಘಟ್ಟದ ತಪ್ಪಲಿನ ಜನರಿಗೆ ಹೇಳಿಕೇಳಿ ರೈಲ್ವೆ ಪ್ರಯಾಣ ತುಂಬಾ ಅಪರೂಪ. ಆದರೆ ಈ ಮಕ್ಕಳು ದಿನವೂ ರೈಲಿನಲ್ಲಿ ಕುಳಿತು ಆಟ ಆಡ್ತಾ ಪಾಠ ಕೇಳ್ತಾರೆ. ರೈಲು ಪ್ರಯಾಣದಲ್ಲಿ ಪಾಠ ಕೇಳುವ ಸೌಭಾಗ್ಯ ಯಾರಿಗುಂಟು ಹೇಳಿ?! ಈ ಅಪರೂಪದ ಅವಕಾಶ ಪಡೆದವರು ನಕ್ಸಲ್ ಪೀಡಿತ ಈದು ಗ್ರಾಮದ ಮುಳಿಕಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು. id="toptextpromo"> id='are-slot-1' class='oiad oi-axt oiadv'>ಇನ್ನೇನು
ಮುಚ್ಚೇಹೋಯ್ತು ಅಂತಿದ್ದ ಶಾಲೆಗೆ ಮರುಜೀವ ಕೊಟ್ಟಿದ್ದು ಕರಾವಳಿ ಭಾಗದ ಯುವ ತರುಣರ ತಂಡ. ಈ ತಂಡದ ಹೆಸರೇ ಮೇಕ್ ಸಮ್ ಒನ್ ಸ್ಮೈಲ್. ಈ ತಂಡದ ದೆಸೆಯಿಂದ ಇಂದು ಸರ್ಕಾರಿ ಶಾಲೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿನ ಮಕ್ಕಳು ನಗುನಗುತ್ತಾ ಪಾಠ ಕಲಿಯುತ್ತಿದ್ದಾರೆ. id='are-slot-2' class='oiad oi-axt oiadv'>
ಥೇಟು ರೈಲಿನಂತೇ ಕಾಣುವ ಶಾಲೆ
ಥೇಟು ರೈಲನ್ನು ಹೋಲುವ ಈ ಶಾಲೆ ಮಕ್ಕಳನ್ನು ಆಕರ್ಷಿಸುತ್ತಿದೆ. ಮಕ್ಕಳು ನಲಿಯುತ್ತಾ, ಆಡುತ್ತಾ ಅಕ್ಷರ ಕಲಿಯುತ್ತಿದ್ದಾರೆ. ಹೆಂಚಿನ ಹೊದಿಕೆಯಿರುವ ಈ ಶಾಲೆಯನ್ನು ನೋಡಿದರೆ ದೂರದ ಬೆಟ್ಟದ ತಪ್ಪಲಲ್ಲಿ ಹಾದು ಹೋಗುವ ರೈಲನ್ನು ಕಂಡಂತೆ ಭಾಸವಾಗುತ್ತದೆ. ಮಕ್ಕಳೂ ಖುಷಿಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಈ ಒಂದು ಹೊಸ ಪರಿಕಲ್ಪನೆ ಮಕ್ಕಳಲ್ಲಿ ಶಾಲೆ ಬಗ್ಗೆ ಸಂತೋಷವನ್ನೂ ಮೂಡಿಸಿದೆ.

ಶಾಲೆಗೆ ಹೊಸ ನೋಟ ನೀಡಿದ ತಂಡ
ಈ ಶಾಲೆ ಈ ರೀತಿ ಹೊಸ ಲುಕ್ ಪಡೆಯಲು ಕಾರಣಕರ್ತರಾದವರು ಉಡುಪಿ ಮಂಗಳೂರು ಭಾಗದ ಯುವಕರ ತಂಡ. 80 ಮಂದಿ ಸಮಾನ ಮನಸ್ಕರು ಸೇರಿ ತಂಡ ಕಟ್ಟಿದ್ದಾರೆ. ಶಾಲೆ- ಅನಾಥಾಶ್ರಮಗಳಿಗೆ ನೆರವಾಗುವುದು ಈ ತಂಡದ ಉದ್ದೇಶ. ಬಡ ಮಕ್ಕಳಿಗೆ ಹೊಸ ಬಟ್ಟೆ ಕೊಡುವುದು, ಊಟ ಬಡಿಸುವುದು, ಶಾಲೆಗೆ ನೀರಿನ ವ್ಯವಸ್ಥೆ, ಫ್ಯಾನಿನ ವ್ಯವಸ್ಥೆ, ಯೂನಿಫಾರ್ಮ್ ನೀಡುವುದು, ಆವರಣ ಗೋಡೆ ಕಟ್ಟುವುದು ಹೀಗೆ ನಾನಾ ಬಗೆಯ ಸೇವಾಕಾರ್ಯ ನಡೆಸುತ್ತಿದೆ ಈ ತಂಡ.

ಸಂಚಲನ ಮೂಡಿಸಿದ ಪುಟ್ಟ ಕೆಲಸ
ರಾಜ್ಯದ ಮೊದಲ ನಕ್ಸಲ್ ಎನ್ ಕೌಂಟರ್ ನಡೆದ ಕಾರ್ಕಳದ ಈದು ಗ್ರಾಮದ ಈ ಶಾಲೆಯಲ್ಲಿ ಈ ತಂಡ ನಡೆಸಿದ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕಳು, ಪೋಷಕರು ಶಾಲೆ ಕಂಡು ಸಂತಸಗೊಂಡಿದ್ದಾರೆ. ಯಾರಿಗೂ ಬೇಡದೆ, ನಕ್ಸಲರ ಆಶ್ರಯ ತಾಣವಾಗಿದ್ದ ಗ್ರಾಮದಲ್ಲಿ ಈ ಒಂದು ಪುಟ್ಟ ಕೆಲಸ ಹೊಸ ಸಂಚಲನ ಮೂಡಿಸಿದೆ.

"ಮೇಕ್ ಸಮ್ ಒನ್ ಹ್ಯಾಪಿ" ಪರಿಕಲ್ಪನೆ
ಎಲ್ಲರಲ್ಲೂ ನಗು, ಸಂತಸ ಮೂಡಿಸಬೇಕು, ಅಗತ್ಯವಿದ್ದವರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿರುವ ತಂಡ ಮೇಕ್ ಸಮ್ ಒನ್ ಹ್ಯಾಪಿ. ಇದೇ ನಿಟ್ಟಿನಲ್ಲಿ ಶಿಥಿಲಗೊಂಡಿದ್ದ, ಹಳತಾದಂತೆ ಕಾಣುತ್ತಿದ್ದ ಶಾಲೆಗೆ ಈ ತಂಡ ಚಲಿಸುವ ರೈಲಿನಂತೆ ಬಣ್ಣ ಬಳಿದಿದೆ. ಶಾಲೆಯ ಬಣ್ಣ ಬದಲಾದ ನಂತರ ಇಲ್ಲಿಗೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಮುಂದಿನ ವರ್ಷ ಇನ್ನೂ ಹತ್ತು ಮಕ್ಕಳು ಈ ಶಾಲೆಗೆ ಸೇರಲಿದ್ದಾರೆ. ಮುಚ್ಚೇ ಹೋಗಬೇಕಾಗಿದ್ದ ಶಾಲೆಗೆ ಈ ಹೊಸ ಬಣ್ಣ ಮರುಜೀವವನ್ನೇ ನೀಡಿದಂತಾಗಿದೆ.












Click it and Unblock the Notifications