Jio ₹153 Plan: ದೀಪಾವಳಿಗೆ 'ಜಿಯೋ' ಗ್ರಾಹಕರಿಗೆ ಸಿಹಿ ಸುದ್ದಿ, BSNLಗೆ ಟಕ್ಕರ್
ಬೆಂಗಳೂರು, ಅಕ್ಟೋಬರ್ 27: ರಿಲಯನ್ಸ್ ಜಿಯೋ ಸಿಮ್‌ನಿಂದ BSNL ಗೆ ಪೋರ್ಟ್ ಆಗುತ್ತಿರುವ ಬಳಕೆದಾರರಿಗೆ Jio ಗುಡ್ ನ್ಯೂಸ್ ನೀಡಿದೆ. ಇದೇ ದೀಪಾವಳಿ ಪ್ರಯುಕ್ತ ಕಡಿಮೆ ಬೆಲೆಯ ರಿಚಾರ್ಜ್ ಆಫರ್‌ಗಳನ್ನು ಘೋಷಣೆ ಮಾಡಿದೆ. 28 ದಿನದ ರೀಚಾರ್ಜ್ ಅನ್ನು ಕೇವಲ 153 ರೂಪಾಯಿಗೆ ಸಿಗಲಿದೆ. ಜಿಯೋ ಪ್ರಿಪೇಯ್ಡ್ ಪ್ಲಾನ್ ಬಲು ದುಬಾರಿ ಎಂಬ ಆರೋಪ ಮಧ್ಯೆ ಹೊಸ ಹೊಸ ಆಫರ್‌ಗಳನ್ನು ಕಂಪನಿ ನೀಡುತ್ತಿದೆ. ಹಾಗಾದರೆ, ಈ ಪ್ಲಾನ್ ವಿಶೇಷತೆಗಳು ಏನು ಇಲ್ಲಿ ತಿಳಿಯಿರಿ.
ಇತ್ತೀಚೆಗೆ ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಹಲವು ಖಾಸಗಿ ಟೆಲಿಕಾಂ ಕಂಪನಿಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬಲು ದುಬಾರಿ ಆಗಿತ್ತು. ಈ ಮಧ್ಯ ಬಿಎಸ್‌ಎನ್‌ಎಲ್ ಗ್ರಾಹಕ ಸ್ನೇಹಿ ಪ್ಲಾನ್ ಗಳನ್ನು ಘೋಷಿಸಿತು. 4ಜಿ ಮತ್ತು 5ಜಿ ಸೇವೆ ನೀಡಲು ಸಜ್ಜಾಯಿತು. ಈ ಕಾರಣದಿಂದ ಗ್ರಾಹಕರು ಇತರ ಖಾಸಗಿ ಟೆಲಿಕಾಂ ಸೇವೆಯಿಂದ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ ಎಲ್‌ಗೆ ಪೋರ್ಟ್ ಆಗಲು ಮುಂದಾದರು.

ಇದರ ಬೆನ್ನಲ್ಲೆ ಎಚ್ಚೆತ್ತ ಟೆಲಿಕಾಂ ವಲಯದ ದೈತ್ಯ ಕಂಪನಿ ಜಿಯೋ, ದೀಪಾವಳಿಗೆ ಗ್ರಾಹಕ ಸ್ನೇಹಿ ಒಂದಷ್ಟು ಪ್ರಿಪೇಯ್ಡ್ ರೀಚಾರ್ಜ್ ಆಫರ್‌ಗಳನ್ನು ಘೋಷಿಸಿದೆ. ಅದರಲ್ಲಿ 28 ದಿನಗಳ 153 ರೂಪಾಯಿ ರಿಚಾರ್ಜ್ ಸಹ ಒಂದಾಗಿದೆ.
28 ದಿನ ವ್ಯಾಲಿಡಿಜಿಟಿ, ಜಿಯೋ ಟಿವಿ, ಸಿನಿಮಾ ಫ್ರೀ..
ಜಿಯೋ ಬಳಕೆದಾರರು 153 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿದರೆ, 28 ದಿನಗಳವರೆಗೆ ಅನ್‌ಲಿಮೆಟ್ ಕರೆ, 300 ಉಚಿತ ಎಸ್‌ಎಂಎಸ್, 14 ಜಿಬಿ 4/5 ಜಿ ಇಂಟರ್‌ನೆಟ್ ಸೇವೆ ಸಿಗಲಿದೆ. ಜೊತೆಗೆ ನೀವು ಜಿಯೋ ಟಿವಿ, ಜಿಯೋ ಸಿನಿಮಾ ಉಚಿತ ಚಂದಾದಾರರಾಗಬಹುದು. ಇಷ್ಟೆಲ್ಲ ಆಯ್ಕೆಗಳನ್ನು ಅತೀ ಕಡಿಮೆ ಬೆಲೆಗೆ ಘೋಷಿಸುವ ಮೂಲಕ ಜಿಯೋ ಮತ್ತೆ ತನ್ನ ಗ್ರಾಹಕರನ್ನು ಬೇರೆಡೆ ಹೋಗದಂತೆ ತಡೆಯಲು ಪ್ಲಾನ್ ಮಾಡಿಕೊಂಡಿದೆ.
ನಿತ್ಯ ಅರ್ಧ (0.5gb) ಜಿಬಿ ಇಂಟರ್‌ನೆಟ್ ಜೊತೆಗೆ ಪ್ಯಾಕ್ ಮುಗಿಯುವವರಿಗೆ ನೀವು 14 ಜಿಬಿ ಇಂಟರ್‌ನೆಟ್ ಪಡೆಯಬಹುದಾಗಿದೆ. ಇದಷ್ಟೇ ಅಲ್ಲದೇ ಜಿಯೋ ಸಂಸ್ಥೆಯು 75 ರೂಪಾಯಿ, 91 ರೂಪಾಯಿ, 125 ಹಾಗೂ 186, ರೂಪಾಯಿ 223 ರೂಪಾಯಿ ಮೊಬೈಲ್ ರೀಚಾರ್ಜ್ ಆಫರ್‌ಗಳನ್ನು ಘೋಷಣೆ ಮಾಡಿದೆ. ಇವು ಇತ್ತೀಚೆಗೆ ಘೋಷಿಸಿದ ಕಡಿಮೆ ಬೆಲೆ ಆಫರ್‌ಗಳು ಎನ್ನಲಾಗಿದೆ.

ಜಿಯೋ ಕ್ಲೌಡ್ ಪಿಸಿ ತಂತ್ರಜ್ಞಾನ ಪರಿಚಯ
ಕೇವಲ ಮೊಬೈಲ್ ರಿಚಾರ್ಜ್‌ನಲ್ಲಿ ಮಾತ್ರವಲ್ಲದೇ, ಜಿಯೋ ಕಂಪನಿಯು ಜಿಯೋ ಕ್ಲೌಡ್ ಪಿಸಿ ತಂತ್ರಜ್ಞಾನ ಪರಿಚಯಿಸಿದೆ. ಇದರಿಂದ ನೀವು ಇಂಟರ್‌ನೆಟ್ ಒಂದಿದ್ದರೆ ಸಾಕು, ಮನೆಯಲ್ಲಿನ ಟಿವಿಯನ್ನು ಕಂಪ್ಯೂಟರ್ ಆಗಿ ಬದಲಾಯಿಸಬಹುದು. ಅಲ್ಲದೇ, ಜಿಯೋ ಕ್ಲೌಡ್ ಪಿಸಿ ಬಳಕೆ ಮಾಡುವ ಮೂಲಕ ಗ್ರಾಹಕರ ಮನೆಯ ಟಿವಿಯನ್ನು ಕಂಪ್ಯೂಟರ್ ರೀತಿಯಲ್ಲಿ ವೃತ್ತಿಪರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ
ಸ್ಮಾರ್ಟ್ ಟಿವಿ ಇಲ್ಲದವರು, ಜಿಯೋ ಏರ್ ಫೈಬರ್ ಸೆಟ್ ಆಫ್ ಬಾಕ್ಸ್ ನಿಂದಲೂ ನಿಮ್ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲು ಅವಕಾಶ ಇದೆ. ಅದಕ್ಕಾಗಿ ಜಿಯೋ ಕ್ಲೌಡ್ ಅಪ್ಲಿಕೇಷನ್‌ನಲ್ಲಿ ಲಾಗಿನ್ ಆಗಬೇಕು. ಲಾಗಿನ ಆದ ನಂತರ ಕ್ಲೌಡ್‌ನಲ್ಲಿನ ಮಾಹಿತಿ ನಿಮ್ಮನೆಯ ಟಿವಿ ಪರದೆ ಮೇಲೆ ಕಾಣಿಸಲಿದ್ದು, ಅದರಿಂದ ನೀವು ನಿಮ್ಮ ಕಂಪ್ಯೂಟರ್ ರೀತಿಯಲ್ಲಿ ಕೆಲಸ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರ ಸೆಟ್ ಆಫ್ ಅಳವಡಿಕೆ ಸಿಬ್ಬಂದಿ ಸಂಪರ್ಕಿಸಬೇಕು.
ದುಬಾರಿ ರಿಚಾರ್ಜ್ ಪ್ಲಾನ್ ಹೊಂದಿರುವ ಕಂಪನಿಗಳಿಗೆ ಭಾರತ್ ಸಂಚಾರ್ ಲಿಮಿಟೆಡ್ ಸಂಸ್ಥೆ ಕಡಿಮೆ ಬೆಲೆಯ ರಿಚಾರ್ಜ್ ಘೋಷಿಸುವ ಮೂಲಕ ಟಕ್ಕರ್ ನೀಡಿತ್ತು. ಇದೀಗ ಜಿಯೋ ಮತ್ತೆ ಹೊಸ ಹೊಸ ಆಫರ್‌ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಒಟ್ಟಾರೆ ದೀಪಾವಳಿಗೆ ಜನರಿಗೆ ಕಡಿಮೆ ಬೆಲೆಯ ಮೊಬೈಲ್ ರೀಚಾರ್ಜ್ ಸಿಕ್ಕಿದೆ.












Click it and Unblock the Notifications