ವಾಯು ಮಾಲಿನ್ಯಕ್ಕೂ ಕೊರೊನಾ ಪ್ರಕರಣಕ್ಕೂ ನಂಟಿದೆಯೇ? ಇಲ್ಲಿದೆ ಅಧ್ಯಯನ ವರದಿ...

ನವದೆಹಲಿ, ಜೂನ್ 26: ಕೊರೊನಾ ಸೋಂಕಿನ ಪ್ರಮಾಣಕ್ಕೂ ವಾಯು ಮಾಲಿನ್ಯಕ್ಕೂ ಒಂದಕ್ಕೊಂದು ಸಂಬಂಧವಿದೆಯೇ? ವಾಯು ಮಾಲಿನ್ಯ ಕೊರೊನಾ ಸೋಂಕಿನ ಹೆಚ್ಚಳಕ್ಕೆ ಪ್ರಚೋದನೆ ನೀಡುತ್ತಿದೆಯೇ? ಈ ಪ್ರಶ್ನೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆದಿದೆ.

ಕೈಗಾರಿಕೆ ಹಾಗೂ ಸಾರಿಗೆ ಕಾರಣದಿಂದ ವಾಯುಮಾಲಿನ್ಯ ಹೆಚ್ಚಳವಿರುವ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳೂ ಹೆಚ್ಚಿರುತ್ತವೆ ಎಂಬುದನ್ನು ಅಧ್ಯಯನ ತಿಳಿಸಿದೆ. ವಾಯುಮಾಲಿನ್ಯದಿಂದ ಮಾನವನ ಆರೋಗ್ಯ ಸಹಜವಾಗಿ ಕ್ಷೀಣಿಸುವುದರಿಂದ ಕೊರೊನಾ ಸೋಂಕು ಕೂಡ ಅವರನ್ನು ಬಹುಬೇಗ ಸೇರಬಹುದು ಎಂದು ಅಂದಾಜಿಸಲಾಗಿದೆ. ಅಧ್ಯಯನ ಈ ಬಗ್ಗೆ ಇನ್ನೂ ಏನನ್ನು ಹೇಳುತ್ತಿದೆ? ಮುಂದಿದೆ ವಿವರ...

 ವಾಯುಮಾಲಿನ್ಯ- ಕೊರೊನಾ ಸೋಂಕಿನ ವಿಶ್ಲೇಷಣೆ

ವಾಯುಮಾಲಿನ್ಯ- ಕೊರೊನಾ ಸೋಂಕಿನ ವಿಶ್ಲೇಷಣೆ

ಮಾನವಜನ್ಯ ಮಾಲಿನ್ಯ ಮೂಲಗಳು ಹಾಗೂ ವಾಯುಗುಣಮಟ್ಟದ ದತ್ತಾಂಶಗಳ ಆಧಾರದ ಮೇಲೆ ವಾಯುಮಾಲಿನ್ಯ ಹಾಗೂ ಕೊರೊನಾ ನಡುವಿನ ಸಂಬಂಧದ ಕುರಿತು ವಿಶ್ಲೇಷಣೆ ನಡೆಸಲಾಗಿದೆ. ಹೆಚ್ಚು ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರು ಕೊರೊನಾ ಸೋಂಕಿಗೆ ಎಷ್ಟರ ಮಟ್ಟಿಗೆ ತುತ್ತಾಗುತ್ತಾರೆ ಎಂಬ ಕುರಿತು ವಿಶ್ಲೇಷಣೆ ಮಾಡಲಾಗಿದೆ.
ಭುವನೇಶ್ವರದ ಉತ್ಕಾಲ್ ಯೂನಿವರ್ಸಿಟಿಯ ಡಾ. ಸರೋಜ್ ಕುಮಾರ್ ಸಾಹು, ಪೂನಂ ಮಂಗರಾಜ್, ಹಿರಿಯ ವಿಜ್ಞಾನಿ ಗುಫ್ರಾನ್ ಬೇಗ್, ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರಿಯಾಲಜಿ ವಿಜ್ಞಾನಿ ಸುವರ್ಣ, ರೌರ್ಕೆಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೀಷ್ಮಾ ತ್ಯಾಗಿ, ವಿ ವಿನೋಜ್ ಅವರು ಈ ಅಧ್ಯಯನ ನಡೆಸಿದ್ದಾರೆ.

 ಮುಂಬೈ ಹಾಗೂ ಪುಣೆ ನಗರಗಳಲ್ಲಿ ವಿಶ್ಲೇಷಣೆ

ಮುಂಬೈ ಹಾಗೂ ಪುಣೆ ನಗರಗಳಲ್ಲಿ ವಿಶ್ಲೇಷಣೆ

ದೇಶದಲ್ಲಿ ಮಾರ್ಚ್ 2020 ಇಂದ ನವೆಂಬರ್ 2020 ಅವಧಿವರೆಗಿನ ಕೊರೊನಾ ಪ್ರಕರಣಗಳ ವಿಶ್ಲೇಷಣೆ ನಡೆಸಲಾಗಿದೆ. ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ನಗರಗಳಲ್ಲಿ ಹೆಚ್ಚಿನ ಮಟ್ಟದ ವಾಯುಮಾಲಿನ್ಯವಿರುವುದರಿಂದ ಆ ನಗರಗಳಲ್ಲಿ ಪ್ರಮುಖವಾಗಿ ವಿಶ್ಲೇಷಣೆ ನಡೆಸಲಾಗಿದೆ.

"ವಾಯುಮಾಲಿನ್ಯಕ್ಕೂ ಕೊರೊನಾಗೂ ಸಂಬಂಧವಿದೆ"

"ವಾಯು ಮಾಲಿನ್ಯಕ್ಕೂ ಕೊರೊನಾ ಸೋಂಕಿಗೂ ಸಂಬಂಧವಿರುವುದನ್ನು ನಮ್ಮ ಅಧ್ಯಯನ ದೃಢಪಡಿಸಿದೆ. ಪೆಟ್ರೋಲ್, ಡೀಸೆಲ್, ಇದ್ದಿಲು ಬಳಕೆ ಹೆಚ್ಚಿರುವ ಪ್ರದೇಶಗಳು ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚು ಹೊಂದಿರುವ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣವೂ ಹೆಚ್ಚಾಗಿರುವುದಾಗಿ ಅಧ್ಯಯನ ತಿಳಿಸಿದೆ" ಎಂದು ಡಾ. ಸಾಹು ತಿಳಿಸಿದ್ದಾರೆ. "ಮಾನವನ ಆರೋಗ್ಯಕ್ಕೂ ವಾಯು ಮಾಲಿನ್ಯಕ್ಕೂ ಇರುವ ಸಂಬಂಧದಂತೆಯೇ ಕೊರೊನಾಗೂ ವಾಯುಮಾಲಿನ್ಯಕ್ಕೂ ಸಂಬಂಧ ಇದೆ. ವಾಯುಮಾಲಿನ್ಯ ಕೊರೊನಾ ಸೋಂಕಿಗೆ ಪ್ರಚೋದನೆ ನೀಡಲಿದೆ" ಎಂದು ಹೇಳಿದ್ದಾರೆ.

 ಕಳಪೆ ವಾಯು ಗುಣಮಟ್ಟದ ನಗರಗಳು

ಕಳಪೆ ವಾಯು ಗುಣಮಟ್ಟದ ನಗರಗಳು

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್‌ನಂಥ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಈ ಪ್ರದೇಶಗಳಲ್ಲಿ ಕಟ್ಟಿಗೆ ಬಳಕೆ ಹೆಚ್ಚಿದೆ ಎಂಬುದನ್ನು ಗಮನಿಸಬೇಕಿದೆ. ಪರಿಶೀಲನೆ ನಡೆಸಿದ ಹದಿನಾರು ನಗರಗಳಲ್ಲಿ ಮುಂಬೈ ಹಾಗೂ ಪುಣೆ ಕಳಪೆ ವಾಯು ಗುಣಮಟ್ಟ ಹೊಂದಿರುವ ನಗರಗಳಾಗಿವೆ. ದೆಹಲಿ ಹಾಗೂ ಅಹಮದಾಬಾದ್ ವಾಯುಗುಣಮಟ್ಟ ಕ್ಷೀಣಿಸಿರುವ ಮೊದಲ ಹಾಗೂ ಎರಡನೇ ನಗರಗಳಾಗಿವೆ. ಇಲ್ಲಿ ಕೊರೊನಾ ಪ್ರಕರಣಗಳೂ ಹೆಚ್ಚಿವೆ.

"ಒಂದರಿಂದ ಮತ್ತೊಂದು ಸಮಸ್ಯೆ ಬಿಗಡಾಯಿಸಬಹುದು"

"ವಾಯು ಮಾಲಿನ್ಯ ಕೊರೊನಾ ಸೋಂಕನ್ನು ಪ್ರಚೋದಿಸುತ್ತದೆ ಎಂಬುದು ವಿಶ್ಲೇಷಣೆಯಿಂದ ಸಾಬೀತಾಗಿದೆ. ಎರಡು ಅಂಶಗಳು ಮಾನವನ ಶ್ವಾಸಕೋಶದ ಮೇಲೆ ಪರಿಣಾಮ ಬೀರುವಂಥದ್ದಾಗಿದೆ. ವಾಯುಮಾಲಿನ್ಯ, ಕೊರೊನಾದಿಂದ ಉಂಟಾದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಬಹುದು ಅಥವಾ ವಾಯುಮಾಲಿನ್ಯದಿಂದ ಆರೋಗ್ಯ ಬಿಗಡಾಯಿಸಿದವರಲ್ಲಿ ಕೊರೊನಾ ಬೇಗ ತಗುಲಬಹುದು" ಎಂದು ಸಾಹು ತಿಳಿಸಿದ್ದಾರೆ. ಈ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+