• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಎಷ್ಟು ಸುರಕ್ಷಿತ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕೊರೊನಾ ಲಸಿಕೆ ಪಡೆದುಕೊಂಡ ಮೇಲೆ ಏನು ಮಾಡಬೇಕು, ಏನು ಮಾಡಬಾರದು, ಕೊರೊನಾ ಲಸಿಕೆ ಪ್ರಭಾವ ದೇಹದಲ್ಲಿ ಯಾವ ರೀತಿ ಬದಲಾವಣೆಗಳನ್ನು ತರಬಹುದು, ಯಾರು ಲಸಿಕೆ ಪಡೆದುಕೊಳ್ಳಬಹುದು, ಯಾರು ಪಡೆದುಕೊಳ್ಳಬಾರದು ಎಂಬ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಆದರೆ ಕೊರೊನಾ ಲಸಿಕೆ ಪಡೆದುಕೊಂಡ ನಂತರ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತವೇ? ಇದು ಮುಂದೆ ಜನಿಸಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? ಲಸಿಕೆ ಪಡೆದುಕೊಂಡ ನಂತರ ಎಷ್ಟು ದಿನಗಳ ಕಾಲ ಲೈಂಗಿಕ ಕ್ರಿಯೆ ನಡೆಸಬಾರದು ಅಥವಾ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎನ್ನುವ ಕುರಿತು ಸರ್ಕಾರ ಯಾವುದೇ ವಿವರ ಹಂಚಿಕೊಂಡಿಲ್ಲ. ಆದರೆ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಪ್ರಶ್ನೆಗಳು ಹರಿದಾಡುತ್ತಿದ್ದು, ವೈದ್ಯಕೀಯ ತಜ್ಞರು ಕೆಲವೊಂದು ಉತ್ತರಗಳನ್ನು ಕಂಡುಕೊಂಡಿದ್ದಾರೆ. ಮುಂದೆ ಓದಿ...

 ಆಗಸ್ಟ್‌ನಲ್ಲೇ ಮೂರನೇ ಅಲೆ, ಅಕ್ಟೋಬರ್‌ನಲ್ಲಿ ಮತ್ತೆ ಉತ್ತುಂಗಕ್ಕೇರಲಿದೆ ಕೊರೊನಾ ಆಗಸ್ಟ್‌ನಲ್ಲೇ ಮೂರನೇ ಅಲೆ, ಅಕ್ಟೋಬರ್‌ನಲ್ಲಿ ಮತ್ತೆ ಉತ್ತುಂಗಕ್ಕೇರಲಿದೆ ಕೊರೊನಾ

 ಲಸಿಕೆ ಪಡೆದ ನಂತರ ಲೈಂಗಿಕ ಸಂಪರ್ಕ ಹೊಂದುವುದು ಸುರಕ್ಷಿತವೇ?

ಲಸಿಕೆ ಪಡೆದ ನಂತರ ಲೈಂಗಿಕ ಸಂಪರ್ಕ ಹೊಂದುವುದು ಸುರಕ್ಷಿತವೇ?

ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮಹಿಳೆ ಅಥವಾ ಪುರುಷ ಗರ್ಭನಿರೋಧಕ ಬಳಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ. "ಕೊರೊನಾ ಲಸಿಕೆಯನ್ನು ಈಚೆಗೆ ಅಭಿವೃದ್ಧಿಪಡಿಸಲಾಗಿದೆ. ಅದರ ದೀರ್ಘಾವಧಿ ಪರಿಣಾಮಗಳ ಕುರಿತು ಸೂಕ್ತ ಮಾಹಿತಿ ಇಲ್ಲ. ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಅಡ್ಡ ಪರಿಣಾಮ ಬೀರಬಹುದೇ ಎಂಬ ಕುರಿತು ಮಾಹಿತಿ ಇಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ, ಸಮಸ್ಯೆ ಆದ ನಂತರ ಯೋಚಿಸುವ ಬದಲು ಅದನ್ನು ತಡೆಯುವುದು ತುಂಬಾ ಮುಖ್ಯ. ಹೀಗಾಗಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ನಂತರ ಎರಡು ಮೂರು ವಾರಗಳವರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮುನ್ನ ಗರ್ಭನಿರೋಧಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ" ಎಂದು ಘಾಜಿಯಾಬಾದ್ ಕೊಲಂಬಿಯಾ ಏಷ್ಯಾ ವೈದ್ಯ ದೀಪಕ್ ವರ್ಮಾ ಮಾಹಿತಿ ನೀಡುತ್ತಾರೆ.

 ಲಸಿಕೆ ಪಡೆದ ನಂತರ ಜಾಗರೂಕವಾಗಿರುವುದು ಅವಶ್ಯಕ

ಲಸಿಕೆ ಪಡೆದ ನಂತರ ಜಾಗರೂಕವಾಗಿರುವುದು ಅವಶ್ಯಕ

ಲಸಿಕೆಗಳು ಮನುಷ್ಯನ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಅದರಲ್ಲೂ ಕೊರೊನಾ ಲಸಿಕೆಗಳ ಪ್ರಭಾವದ ಕುರಿತು ಸಾಕಷ್ಟು ಮಾಹಿತಿಗಳು ಸದ್ಯಕ್ಕೆ ಇಲ್ಲ. ಹೀಗಾಗಿ ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಪುರುಷರು ಕಾಂಡೋಮ್ ಬಳಸುವುದು ಸೂಕ್ತ. ಗರ್ಭ ಧರಿಸುವ ಆಲೋಚನೆಯಲ್ಲಿರುವ ಮಹಿಳೆಯರು ಲಸಿಕೆ ತೆಗೆದುಕೊಳ್ಳುವ ಮುನ್ನ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಬೇಕು ಎಂದು ಹೇಳುತ್ತಾರೆ ವೈದ್ಯ ದೀಪಕ್.

ಕೊರೊನಾ ಏರಿಕೆ; ಹತ್ತು ರಾಜ್ಯಗಳಲ್ಲಿ ಪರಿಶೀಲನೆಗೆ ಮುಂದಾದ ಕೇಂದ್ರಕೊರೊನಾ ಏರಿಕೆ; ಹತ್ತು ರಾಜ್ಯಗಳಲ್ಲಿ ಪರಿಶೀಲನೆಗೆ ಮುಂದಾದ ಕೇಂದ್ರ

 ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದವರಿಗೆ ಗರ್ಭನಿರೋಧಕ ಬಳಕೆ ಸೂಚನೆ

ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದವರಿಗೆ ಗರ್ಭನಿರೋಧಕ ಬಳಕೆ ಸೂಚನೆ

ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಪಾಲ್ಗೊಂಡಿದ್ದ ಸ್ವಯಂ ಸೇವಕರಿಗೆ ಒಂದು ಸಲಹೆಯನ್ನು ನೀಡಲಾಗಿತ್ತು. ಮೊದಲ ಡೋಸ್ ಕೊರೊನಾ ಲಸಿಕೆ ಪಡೆದ ನಂತರ ಮೂರು ತಿಂಗಳ ಅವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮುನ್ನ ಕಾಂಡೋಮ್ ಬಳಸುವಂತೆ ಸಲಹೆ ನೀಡಲಾಗಿತ್ತು.

ಆನಂತರ, ಲಸಿಕೆ ಪಡೆದುಕೊಳ್ಳುವ ಎಲ್ಲರೂ ಈ ವಿಧಾನವನ್ನು ಅನುಸರಿಸಬೇಕೇ ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಲಸಿಕೆ ಪಡೆದುಕೊಂಡ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭಧಾರಣೆಗೆ ಅಥವಾ ಹುಟ್ಟುವ ಮಗುವಿನ ಮೇಲೆ ಅಡ್ಡಪರಿಣಾಮ ಬೀರುವುದೇ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಲಸಿಕೆ ಪಡೆದ ನಂತರ 3-12 ತಿಂಗಳುಗಳ ಕಾಲ ನೇರ ಲೈಂಗಿಕ ಸಂಪರ್ಕ ತಪ್ಪಿಸುವಂತೆ ಲಸಿಕೆ ನೀಡುವವರು ಎಚ್ಚರಿಕೆ ನೀಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಈ ಕುರಿತು ಯಾವುದೇ ನಿರ್ದಿಷ್ಟ ಮಾರ್ಗಸೂಚಿ ಹೊರಬೀಳಲಿಲ್ಲ.
 ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆ ನಡೆಸಿದರೆ ಹುಟ್ಟುವ ಮಗುವಿಗೆ ಸಮಸ್ಯೆಯೇ?

ಲಸಿಕೆ ಪಡೆದ ನಂತರ ಲೈಂಗಿಕ ಕ್ರಿಯೆ ನಡೆಸಿದರೆ ಹುಟ್ಟುವ ಮಗುವಿಗೆ ಸಮಸ್ಯೆಯೇ?

ಲಸಿಕೆ ಪಡೆದುಕೊಂಡ ನಂತರ ಗರ್ಭ ಧರಿಸಿದರೆ ಲಸಿಕೆ ಪ್ರಭಾವ ಭ್ರೂಣದ ಮೇಲೆ ಆಗುತ್ತದೆಯೇ ಎಂಬ ಕುರಿತು ಸಾಕಷ್ಟು ಮಾಹಿತಿ ಇಲ್ಲ. ಹೀಗಾಗಿ ಇದರ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವುದು ಕಷ್ಟ. ಆದರೆ ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದರ ಮಿತಿಗಳನ್ನೂ ಅಂದಾಜಿಸಲು ಸಾಧ್ಯವಿಲ್ಲ. ಆದರೆ ಲಸಿಕೆಯಿಂದ ಭ್ರೂಣಕ್ಕೆ ತೊಂದರೆಯಾದ ಹಲವು ಉದಾಹರಣೆಗಳು ದೊರೆತಿವೆ. ಯಾವುದೇ ಹೊಸ ಲಸಿಕೆ ಪಡೆದುಕೊಂಡ ನಂತರ ಜನಿಸಿದ ಮಕ್ಕಳಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಪ್ರಸಿದ್ಧ ಲೈಂಗಿಕ ತಜ್ಞ ಡಾ. ಪ್ರಕಾಶ್ ಕೊಠಾರಿ ತಿಳಿಸುತ್ತಾರೆ.

"ಹೀಗಾಗಿ ಸಂತಾನೋತ್ಪತ್ತಿಗೆ ಯೋಗ್ಯವಾದ ವಯಸ್ಸಿನ ಮಹಿಳೆ, ಪುರುಷರಿಗೆ ಲಸಿಕೆ ಪಡೆದ ನಂತರ ಒಂದು ವರ್ಷದವರೆಗೆ ಗರ್ಭನಿರೋಧಕ ಬಳಸುವುದು ಸೂಕ್ತ ಎನ್ನುವುದು ನನ್ನ ಸಲಹೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿವೆ" ಎನ್ನುತ್ತಾರೆ.

English summary
Is it safe to have intercourse after taking corona vaccine? Some experts suggesions here...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X